ಹೈದರಾಬಾದ್ ಕರ್ನಾಟಕ

ಮನುಷ್ಯರಿಗೆ ಮಾನ್ಯತೆ ಕೊಟ್ಟ ಧರ್ಮವೇ ವಚನ ಧರ್ಮ: ಡಾ. ಈಶ್ವರಯ್ಯ ಮಠ

ಕಲಬುರಗಿ: ಕೌಟುಂಬಿಕ ಕಾರ್ಯಕ್ರಮಗಳನ್ನು ಸಮಾಜಮುಖಿಯಾಗಿ ಮಾಡುವುದು ಅಗತ್ಯವಿದೆ. ವ್ಯಕ್ತಿ, ಕುಟುಂಬ, ಸಮಾಜ ಒಂದಕ್ಕೊಂದು ಸಂಬಂಧ ಉಳಿಸಿಕೊಂಡಿವೆ. ಇದೊಂದು ಒಳ್ಳೆಯ ಪರಂಪರೆ. ಈ ಪರಂಪರೆ ಉಳಿಸಿಕೊಂಡು ಹೋಗಬೇಕು ಎಂದು ಹಿರಿಯ ಸಾಹಿತಿ ಡಾ. ಬಸವರಾಜ ಸಬರದ ಹೇಳಿದರು.

ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ವತಿಯಿಂದ ಸಮೃದ್ಧಿಯ ನೆನಹಿನಲ್ಲಿ ನಗರದ ಮದರ್ ತೆರೆಸಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡ ಸಹಸ್ರಮಾನದ ವಚನಾಂತರಗದ ಅವಲೋಕನ ವೈಚಾರಿಕ ಚಿಂತನಾ ಸಮಾವೇಶದಲ್ಲಿ ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಣೆ ಮಾಡಿ ಮಾತನಾಡಿದರು.

ಆರಂಭದಲ್ಲಿ ವೇದಕ್ಕೆ ಒರೆಯ ಕಟ್ಟಿದ ಶರಣರು, ವೇದ ಓದಿನ ಮಾತು ಎಂದು ಮುಂದೆ ಇದನ್ನು ಪುನರ್ ಸೃಷ್ಟಿ ಮಾಡಿದರು. ವೇದ ಕೇವಲ ಓದಿನ ಮಾತು ಹೊರತು ಅನುಭವ, ಅನುಭಾವದ ಮಾತು ಅಲ್ಲ ಎಂದು ಪದ ಪದದ ಜೊತೆಗೆ ಪದಾರ್ಥದ ಅರ್ಥ ಹೇಳಿದರು ಎಂದು ಅರ್ಥೈಸಿದರು.

ಕಾರ್ಯಕ್ರಮ ಉದ್ಘಾಟಿಸಿದ
ಸಾಹಿತಿ ಡಾ. ಈಶ್ವರಯ್ಯ ಮಠ ಮಾತನಾಡಿ, ಯಾರು ಚಿಂತಿಸಬಲ್ಲರೋ, ಯಾರು ಆಲೋಚಿಸಬಲ್ಲರೋ ಅವರು ಮನುಷ್ಯರು. ದಯೆ, ಅಂತಕರಣವುಳ್ಳವರು ಮಾನವರು. ಮನುಷ್ಯರಿಗೆ ಮಾನ್ಯತೆ ಕೊಡುವುದೇ ವಚನ ಸಾಹಿತ್ಯದ ಸಾರವಾಗಿದೆ ಎಂದು ಹೇಳಿದರು.

ಜೀವ ವಿರೋಧಿಸುವ ಶಾಸ್ತ್ರವನ್ನು ಮೀರಿ ಜೀವ ಪ್ರೀತಿಸುವ ವಚನ ಸಾಹಿತ್ಯವು ಅಂಗ-ಲಿಂಗ, ಮನುಷ್ಯ-ಮಾನವ, ಭಕ್ತ-ಶರಣನಾಗುವ ಪರಿಯನ್ನು ಬಿಚ್ಷಿಟ್ಟರು ಎಂದು ತಿಳಿಸಿದರು.

ಸ್ವಾಗತ ಸಮಿತಿ ಅಧ್ಯಕ್ಷ ಡಾ. ಸುರೇಶ ಶರ್ಮಾ, ಕಾರ್ಯಾಧ್ಯಕ್ಷ ಡಾ. ರಾಘವೇಂದ್ರ ಚಿಂಚನಸೂರ, ವೈಚಾರಿಕ ಚಿಂತಕ ಜಗನ್ನಾಥ ಎಲ್. ತರನಳ್ಳಿ, ಶ್ರವಸ್ತಿ ಟ್ರಸ್ಟ್ ಅಧ್ಯಕ್ಷ ಡಾ. ಕಿರಣ ದೇಶಮುಖ, ಮದರ್ ತೆರೆಸಾ ಬಿ.ಈಡಿ ಕಾಲೇಜು ಪ್ರಾಚಾರ್ಯೆ ಡಾ. ವನಿತಾ ಜಾಧವ ವೇದಿಕೆಯಲ್ಲಿದ್ದರು.

ಸಂಸ್ಥೆ ಕಾರ್ಯದರ್ಶಿ ಶಿವಪುತ್ರಪ್ಪ ಡೆಂಕಿ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಪರಮೇಶ್ವರ ಶೆಟಕಾರ ನಿರೂಪಿಸಿದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

15 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

18 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

1 day ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

1 day ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago