ಬಿಸಿ ಬಿಸಿ ಸುದ್ದಿ

ಅಂಬೇಡ್ಕರ್ ಕ್ರಾಂತಿ, ಬುದ್ಧನ ಶಾಂತಿ ಚೆನ್ನಣ್ಣ ಮೂಲ ಗುಣ: ಪ್ರೊ. ಹೆಚ್.ಎಂ. ಮಹೇಶ್ವರಯ್ಯ

ಕಲಬುರಗಿ: ಹರಿಹರ ಸಭಾಂಗಣದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗ ಇವುಗಳ ಸಹಯೋಗದಲ್ಲಿ ಡಾ. ಚೆನ್ನಣ್ಣ ವಾಲೀಕಾರ ಬದುಕು-ಬರಹ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಹೆಚ್.ಎಂ. ಮಹೇಶ್ವರಯ್ಯ ಅವರು ಮಾತನಾಡುತ್ತ, ಊಟವನ್ನು ಪ್ರೀತಿಸಿದವನ ಮನಸ್ಸು ತುಂಬಾ ನಿಷ್ಕಲ್ಮಶವಾಗಿತ್ತು. ಅಕ್ಷರ ಹೊಸ ಕಾವ್ಯಕ್ಕೆ ಪರ‍್ಯಾಯವಾಗಿ ಬೆನ್ನ ಹಿಂದಿನ ಬೆಳಕು ಹೊರ ತಂದರು. ದಲಿತ ಸಂವೇದನೆಯನ್ನು ಕಟ್ಟಿಕೊಂಡು ಪ್ರಾಮಾಣಿಕತೆಯಿಂದ ಬದುಕಿದರು. ಅಧಿಕಾರ ಅಂತಸ್ತಿನ ಬೆನ್ನ ಹಿಂದೆ ಹೋಗದೆ ತಮ್ಮ ಹೃದಯ ಸಂವೇದನೆಯಿಂದ ಚಳವಳಿಯನ್ನು ಕಟ್ಟಿದವರು. ಇಂತಹ ಚೆನ್ನಣ್ಣ ನಮ್ಮೊಂದಿಗೆ ಇಲ್ಲ ಎನ್ನುವ ಬೇಸರಕ್ಕಿಂತಲು ಇಡಿ ರಾಜ್ಯ ತುಂಬಾ ಆತನ ಹೆಸರಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿಧಾನ ಪರಿಷತ್ ಸದಸ್ಯರಾದ ಶ್ರೀ ತಿಪ್ಪಣ್ಣ ಕಮಕನೂರ ಅವರು ಮಾತನಾಡುತ್ತ, ಇಂದಿಗೂ ಅಕ್ಷರದ ಅರಿವಿರದ ಸಮಾಜದಲ್ಲಿ ಹುಟ್ಟಿ ಅವರ ಉದ್ಧಾರಕ್ಕಾಗಿ ದುಡಿದ ಚೆನ್ನಣ್ಣ ಸತ್ತ ಮೇಲೆಯೇ ನಮಗೆ ಚೆನ್ನಣ್ಣನ ಮಹತ್ವ ಗೊತ್ತಾಗಿದ್ದು. ಚೆನ್ನಣ್ಣ ದುಡಿದಿದದ ದಲತಿ ಶೋಷಿತರಿಗಾಗಿ ದುಡಿದಿದ್ದಾನೆ. ಆದ್ದರಿಂದ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಗೆ ಡಾ. ಚೆನ್ನಣ್ಣ ವಾಲೀಕಾರ ಕನ್ನಡ ಅಧ್ಯಯನ ಸಂಸ್ಥೆ ಎಂದು ಹೆಸರಿಡಬೇಕು. ಈ ಕಾರ್ಯಕ್ಕೆ ಸರಕಾರದ ಮಟ್ಟದಲ್ಲಿ ಎಲ್ಲ ಸಹಾಯವನ್ನು ನಾನು ಮಾಡಲು ಸಿದ್ಧ. ಈಗ ಇರುವ ಕುಲಪತಿಗಳು ಆ ನಿಟ್ಟಿನಲಿ ಪ್ರಯತ್ನ ಮಾಡಬೇಕು ಮತ್ತು ಡಾ. ಚೆನ್ನಣ್ಣ ವಾಲೀಕಾರ ಪ್ರತಿಷ್ಠಾನ ಸ್ಥಾಪಿಸಬೇಕು, ಅದಕ್ಕೆ ಬೇಕಾಗುವ ಎಲ್ಲ ಹಣಕಾಸಿನ ನೆರವನ್ನು ನೀವು ಕೇಳಿದ ೨೪ ಗಂಟೆ ಒಳಗೆ ಸರಕಾರದಿಂದ ಕೊಡಿಸಲು ನಾನು ಸಿದ್ಧ. ಚೆನ್ನಣ್ಣ ಅವರು ಬರೆದ ಮತ್ತು ಪ್ರಕಟಿಸದೆ ಉಳಿದಿರುವ ಬರಹಗಳನ್ನು ವಿಶ್ವವಿದ್ಯಾಲಯ ಪ್ರಕಟಿಸಿಬೇಕು ಎಂದು ಒತ್ತಾಯಿಸಿದರು.

ಸಮಾರಂಭದ ಅಧ್ಯಕ್ಷತೆವಹಿಸಿದ ಪ್ರಭಾರ ಕುಲಪತಿಗಳಾದ ಪ್ರೊ. ಲಕ್ಷ್ಮಣ ರಾಜನಾಳಕರ್ ಅವರು ಮಾತನಾಡುತ್ತ ಮಾನವೀಯ ಮೌಲ್ಯಗಳಿಗೆ ಬೆಲೆ ನೀಡಿ, ಆದರ್ಶ ಪ್ರೀಯ ಬದುಕು ಸಾಗಿಸಿದವರು. ಶೋಷಣೆಗೆ ಒಳಗಾದವರ ಬಗೆಗೆ ಅವರ ಮನಸ್ಸು ಮಿಡಿಯುತಿತ್ತು. ಚೆನ್ನಣ್ಣನವರು ವಿಶ್ವವಿದ್ಯಾಲಯದಲ್ಲಿ ಇರುವುದೇ ಒಂದು ರೀತಿಯ ಗೌರವ. ಬುದ್ಧ, ಬಸವಣ್ಣನವರ ಕುರಿತು ಚೆನ್ನಣ್ಣ ವಾಲೀಕಾರ ಬರೆದಿರುವ ಮಹಾಕಾವ್ಯಗಳನ್ನು ಪ್ರಸಾರಾಂಗದ ಮುಖಾಂತರ ಮುದ್ರಣ ಮಾಡುವ ಕುರಿತು ಸಲಹಾ ಸಮಿತಿ ರಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಬರವಸೆ ನೀಡಿದರು.

ಆಶಯ ನುಡಿಗಳನ್ನಾಡಿದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಮತ್ತು ಕಲಾ ನಿಕಾಯದ ಡೀನರು ಆದ ಪ್ರೊ. ಎಚ್.ಟಿ. ಪೋತೆ ಅವರು ಮಾತನಾಡುತ್ತ ’ಚೆನ್ನಣ್ಣನವರು ಮುಗ್ದ ಮನಸಿನ ಮಗುವಿನ ಗುಣದವರು’. ರಾಯಚೂರಿನ ಬದುಕು ಕ್ರಾಂತಿಕಾರಿಯಾಗಿತು. ಬೊಳಬಂಡಪ್ಪ, ಬಾಬು ಬಂಡಾರಿಗಲ್ ಇವರನ್ನು ಜೊತೆ ಗೂಡಿದಿಕೊಂಡು ವ್ಯವಸ್ಥೆಗೆ ಪರ್ಯಾಯ ಶಕ್ತಿಯಾಗಿದರು. ರಾಯಚೂರು ಸಹಿಸಿದ ಚೆನ್ನಣ್ಣ ಅವರನ್ನು ಕಲಬುರಗಿ ಸಹಿಸಲಿಲ್ಲ. ಲಂಕೆಶ ಪತ್ರಿಕೆಯ ’ಕಪ್ಪು ಕೋಗಿಲೆ’ ಕವಿತೆಯಿಂದ ಚೆನ್ನಣ್ಣನವರಿಗೆ ಎಂ.ಎಲ್.ಸಿ. ಪದವಿ ಸಿಗದಂತೆ ನೋಡಿಕೊಳ್ಳಲಾಯಿತು. ರಾಯಚೂರಿನಲ್ಲಿ ಅಂಬೇಡ್ಕರರಂತೆ ಬಂಡಾಯ ವೆದ್ದ ಚೆನ್ನಣ್ಣ ಕಲಬುರಗಿಗೆ ಬಂದಾಗ ಬುದ್ಧನಂತಾದರು. ಚೆನ್ನಣ್ಣನ ಅಚ್ಚಾಗದೇ ಉಳಿದ ಮೂರು ಮಹಾಕಾವ್ಯಗಳು ಕಲಬುರಗಿ ವಿಶ್ವವಿದ್ಯಾಲಯ ಪುಸ್ತಕ ರೂಪದಲ್ಲಿ ಹೊರ ತರುವ ಜವಾಬ್ದಾರಿ ವಹಿಸಬೇಕು ಎಂದು ಆಗ್ರಹಿಸಿದರು. ನುಡಿದಂತೆ ನಡೆದ, ಬರೆದಂತೆ ಬದುಕಿದ ಚೆನ್ನಣ್ಣ ಎಲ್ಲರಿಗೂ ಆದರ್ಶರಾಗಿದ್ದಾರೆ ಎಂದು ಹೇಳಿದರು.

ಡಾ. ಚೆನ್ನಣ್ಣ ವಾಲೀಕಾರ ಅವರ ಸಾಹಿತ್ಯ ಕುರಿತು ಸಂಶೋಧನೆ ಮಾಡಿ ಡಾಕ್ಟರೇಟ್ ಪದವಿ ಪಡೆದವರಿಗೆ ಸನ್ಮಾಸಿಲಾಯಿತು. ಹಾಗೇಯೇ ಶಿಲ್ಪಕಲಾ ಅಕಾಡೆಮಿಯ ಸದಸ್ಯರಾದ ಶ್ರೀ ನಟರಾಜ ಶಿಲ್ಪಿ ಅವರನ್ನು ಸನ್ಮಾಸಲಾಯಿತು. ಡಾ. ಚೆನ್ನಣ್ಣ ವಾಲೀಕಾರ ಅವರ ಧರ್ಮಪತ್ನಿಯಾದ ಶ್ರೀಮತಿ ಸಿದ್ದಮ್ಮ ವಾಲೀಕಾರ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಪ್ರೊ. ಎಸ್.ಪಿ. ಮೇಲಕೇರಿ, ಪ್ರೊ. ಪರಿಮಳ ಅಂಬೇಕರ್, ಪ್ರೊ. ವಿಜಯಾ ತೇಲಂಗ, ಪ್ರೊ. ಈಶ್ವರ ಇಂಗಿನ್, ಡಾ. ಚೆನ್ಣಣ್ಣ ವಾಲೀಕರ ಕುಟುಂಬಸ್ಥರು ಅವರ ಅಭಿಮಾನಿಗಳು, ಸಂಶೋಧನಾ, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಭಾಗವಹಿಸಿದರು.

ಡಾ. ವಿಕ್ರಮ ವಿಸಾಜಿ ಅವರು ಸ್ವಾಗತಿಸಿದರು, ಡಾ. ಸಿದ್ಧಲಿಂಗ ದಬ್ಬಾ ನಿರೂಪಿಸಿದರು, ಡಾ. ಎಂ.ಬಿ. ಕಟ್ಟಿ ವಂದಿಸಿದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

9 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

11 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

18 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

18 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

18 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago