ಕಲಬುರಗಿ: ಶಿಕ್ಷಣ ಮತ್ತು ಉದ್ಯೋಗದಲ್ಲಿ ಪ ಜಾ ಜನಗಳಿಗೆ ಶೇ. ೩೪ ಮತ್ತು ಪ.ಪಂಗಡದ ಜನಗಳಿಗೆ ಶೇ. ೧೦ ಮೀಸಲಾತಿ ನೀಡುವಂತೆ ಒತ್ತಾಯಿಸಿ ನಗರದ ರಂಗಮಂದಿರದಲ್ಲಿ ನಡೆದ ಪ ಜಾ/ಪ ಪಂ ಗಳ ಜನರಿಗೆ ಮೀಸಲಾತಿ ಹೆಚ್ಚಳ ವಿಭಾಗ ಮಟ್ಟದ ಸಮಾಲೋಚನಾ ಸಭೆಗೆ ಆಗಮಿಸಿದ್ದ ನ್ಯಾಯ ಮೂರ್ತಿ ಎಚ್.ಎಸ್. ನಾಗಮೋಹನದಾಸ ಅವರಿಗೆ ಜಿಲ್ಲಾ ದಲಿತ ಯುವ ಸಮನ್ವಯ ಸಮಿತಿ ಕಲಬುರಗಿ ವತಿಯಿಂದ ಮನವಿ ಸಲ್ಲಿಸಲಾಯಿತು.
ರಾಜ್ಜದಲ್ಲಿ ಪ. ಜಾ/ಪ. ಪಂ ದ ಜನರು ೨೦೧೧ ರ ಜನಗಣತಿ ಪ್ರಕಾರ ೧ ಕೋಟಿ ೪ ಲಕ್ಷದ ೭೪ ಸಾವಿರದ ೯೯೨ (೧,೦೪,೭೪,೯೯೨ಪ ಜಾ) (೪೨೪೮೯೮೭ಪ ಪಂ) ಜನ ಸಂಖ್ಯೆ ಇದ್ದು ೨೦೨೧ ರಲ್ಲಿ ಸದರಿ ಜಾತಿಗಳ ಸಂಖ್ಯೆ ೧.೫೦ಕೋಟಿ ಪ ಜಾ ಮತ್ತು ೫೫ ಲಕ್ಷ ಪ ಪಂ ಜನರ ಸಂಖ್ಯೆ ಆಗುತ್ತದೆ ಆದ್ದರಿಂದ ಪ ಜಾ/ಪ ಪಂ ಜನರ ಒಟ್ಟಾರೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿ ಇದುವರೆಗೂ ಅದೋಗತಿಯಲ್ಲಿದೆ. ಕರ್ನಾಟಕ ರಾಜ್ಯದಲ್ಲಿ ಪ ಜಾ/ಪ ಪಂ ಜನರ ಅಭಿವೃದ್ಧಿಗೋಸ್ಕರ ಮಹಾನಗರ ಪಾಲಿಕೆ/ನಗರಸಭೆ/ಪುರಸಭೆ/ಜಿ ಪಂ/ತಾ ಪಂ/ಪಟ್ಟಣ ಪಂಚಾಯತ/ಗ್ರಾ ಪಂ ಗಳಲ್ಲಿ ಶೇ ೨೪.೧೦ ಪ ಜಾ ಮತ್ತು ಶೇ ೭.೫ ಪ ಪಂ ದ ಜನರಿಗೆ ಮೀಸಲಿಟ್ಟು ಅಭಿವೃದ್ಧಿಗೊಳಿಲಾಗುತ್ತಿದೆ. ಆದರೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪ ಜಾ/ಪ ಪಂ ಜನಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಾ ಇದ್ದರೂ ಶೇ ೧೫ ಮತ್ತು ಶೇ ೩ ಮೀಸಲಾತಿ ನೀಡುತಿದ್ದು ಇದೂವರೆಗೂ ಹೆಚ್ಚಳವಾಗಿಲ್ಲ ಆದರೆ ತಮಿಳುನಾಡಿಲ್ಲಿ ಶೇ ೬೯, ಮಹಾರಾಷ್ಟ್ರದಲ್ಲಿ ಶೇ ೬೫, ಮಿಜೋರಾಮನಲ್ಲಿ ಶೇ ೭೨. ಮತ್ತು ಕಳೆದ ವರ್ಷ ಕೇಂದ್ರ ಸರ್ಕಾರ ಮೇಲ್ಜಾತಿಯ ಬಡವರಿಗೆ ಶೇ ೧೦ ಮೀಸಲಾತಿಯನ್ನು ನೀಡಲಾಗುತ್ತಿದೆ. ಆದ್ದರಿಂದ ಪ ಜ/ಪ ಪಂ ಜನರಿಗೆ ಈಗಿನ ಜನಸಂಖ್ಯೆಗನುಗುಣವಾಗಿ ಶೇ. ೩೪ ಪ. ಜಾ ಮತ್ತು ಶೇ ೧೦ ಪ. ಪಂ ಜನರಿಗೆ ಮೀಸಲಾತಿ ನೀಡಬೇಕೆಂದು ಸಂತೋಷ ಮೇಲ್ಮನಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಿದ್ಧಾರ್ಥ ಸಾಳುಂಕೆ, ಪ್ರಕಾಶ ಭಾಲೆ, ರವಿ ಡೋಣಿ, ದಿನೇಶ ದೊಡಮನಿ ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…