ಬಿಸಿ ಬಿಸಿ ಸುದ್ದಿ

ಮಾಧ್ಯಮದಲ್ಲಿ ಕೆಲಸ ಬಂದರೆ ಒಳಗೆ, ಇಲ್ಲ ಹೊರಗೆ: ಡಾ. ಬಿ. ಟಿ ಮುದ್ದೇಶ

ಕಲಬುರಗಿ: ಮಾಧ್ಯಮ ಕ್ಷೇತ್ರದಲ್ಲಿ ಪದಾರ್ಪಣೆ ಮಾಡುವ ವಿದ್ಯಾರ್ಥಿಗಳಿಗೆ ಮೊದಲು ಸಮಯ ಪಾಲನೆಯ ಜ್ಞಾನ ತುಂಬಾ ಅವಶ್ಯಕತೆ ಇದೆ. ಮಾಧ್ಯಮದಲ್ಲಿ ಕೆಲಸ ಬಂದರೆ ಒಳಗೆ ಇಲ್ಲ ಹೊರಗೆ ಎಂದು ತುಮಕೂರಿನ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ. ಬಿ. ಟಿ ಮುದ್ದೇಶ ಹೇಳಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ‘ಟಿ. ವಿ ಕಾರ್ಯಕ್ರಮದ ತಂತ್ರಗಳು’ ಕುರಿತು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿ ಯಾವುದೇ ವಿದ್ಯಾರ್ಥಿಗೆ ಶಿಸ್ತು ಬಹಳ ಮಹತ್ವದು. ಯಾರಲ್ಲಿ ಶಿಸ್ತು ಇರಲ ಅವರು ಒಳ್ಳೆಯ ವಿದ್ಯಾರ್ಥಿ ಆಗಕ್ಕೆ ಸಾಧ್ಯವಿಲ್ಲ. ಹೀಗಾಗಿ ಮಾಧ್ಯಮ ವಿದ್ಯಾರ್ಥಿಗಳು ದಿನದ 24 ಗಂಟೆಗಳ ಕಾಲ ಕಾರ್ಯಪ್ರವೃತ್ತವಾಗಿ ಇರಬೇಕು.

ಭೃಷ್ಟಚಾರದ ವಿರುದ್ಧ ಮತ್ತು ಸಮಾಜ ಸುಧಾರಣೆ ಗೋಸ್ಕರ ಮಾಧ್ಯಮ ವಿದ್ಯಾರ್ಥಿಗಳು ಇಂದಿನ ದಿನಗಳಲ್ಲಿ ಶ್ರಮವಹಿಸಬೇಕಾಕಿದೆ. ಇಂದಿನ ಯುಗ ಬಹಳ ದೊಡ್ಡ ಸ್ಪರ್ಧಾತ್ಮಕ ಯುಗ ಇರುವುದರಿಂದ ಪತ್ರಿಕೋದ್ಯಮದಲ್ಲಿ ಯಾರಿಗೆ ಯಾರು ಇಲ್ಲಿ ಕೆಲಸ ಕಲಿಸಿ ಕೊಡುವುದಿಲ್ಲ. ಆ ಕೆಲಸವನ್ನು ನಾವೇ ಪರಿಶ್ರಮದಿಂದ ಕಲಿತುಕೊಳ್ಳಬೇಕಾಗಿದೆ. ಪತ್ರಕರ್ತರಾದವರು ದೇಶ ವಿದೇಶಗಳು ಸುತ್ತೋದರಿಂದ ಹಲವಾರು ತರಹದ ಅನುಭವಗಳನ್ನು ಸಿಗುತ್ತವೆ. ಪತ್ರಿಕೋದ್ಯಮ ಕ್ಷೇತ್ರ ಬಹಳ ಅದ್ಭುತವಾದ ಕ್ಷೇತ್ರ ಅದನ್ನು ಪಳಗಿಸಿಕೊಳ್ಳಬೇಕು ಆಗ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡುವುದಕ್ಕೆ ಸಾಧ್ಯವಾಗುತ್ತದೆ. ನಮ್ಮ ಪಂಚೇಂದ್ರಿಯಗಳನ್ನು ಯಾವಾಗಲೂ ಕಾರ್ಯನಿರ್ವಸುತ್ತಾ ಇರಬೇಕು ಎಂದು ಅವರು ಹೇಳಿ ಇಂದು ಅತಿ ವೇಗದ ಮಾಧ್ಯಮ ಎಂದರೆ ಅದು ಸಮಾಜಿಕ ಅಂತರ್ಜಾಲ ಮಾಧ್ಯಮ. ಈ ಮಾಧ್ಯಮವನ್ನು ವಿದ್ಯಾರ್ಥಿಗಳು ಬಳಿಸಿಕೊಂಡು ಸಮಾಜಕ್ಕೆ ಸೇವೆ ನೀಡಬೇಕು ಎಂದು ಅವರು ಹೇಳಿದರು.

ಪತ್ರಿಕೋದ್ಯಮ ವಿಭಾಗದ ಸಂಯೋಜನಾಧಿಕಾರಿಗಳಾದ ಪ್ರೊ, ಡಿ ಬಿ ಪಾಟೀಲ ಅತಿಥಿ ಉಪನ್ಯಾಸಕರಾದ ಡಾ. ಕೆ. ಎಂ. ಕುಮಾರಸ್ವಾಮಿ, ಡಾ. ರಾಜಕುಮಾರ ಎಂ ದಣ್ಣೂರ, ಇದ್ದರು. ಲಕ್ಷ್ಮೀ ಬಿ ನಿರೂಪಿಸಿದರು, ಸಿದ್ದು ಸ್ವಾಗತಿಸಿದರು, ಸೋಮೇಶಗೌಡ ವಂದಿಸಿದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

3 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

6 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

12 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

12 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

13 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

24 hours ago