ಕಲಬುರಗಿ: ಸಿರ‍್ಯಾಮಿಕ್ ವಸ್ತುಗಳಾದ ರಿಫ್ರ್ಯಾಕ್ಟರೀಸ್ (ಅತ್ಯುಷ್ಣಸಹಿಷ್ಣು ಇಟ್ಟಿಗೆಗಳು) ಗಳಿಲ್ಲದೆ ಯಾವುದೆ ಸ್ಟೀಲ್, ಸಿಮೆಂಟ್, ಪೆಪರ್, ಪೆಟ್ರೋಲಿಯಂ, ಅಲ್ಯೂಮಿನಿಯಂ ಕಂಪನಿಗಳು ನಡೆಯುವಂತಿಲ್ಲ. ಅಂತಹ ಸಿರ‍್ಯಾಮಿಕ್ ವಸ್ತುಗಳ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದ್ದು ಪರಿಣಿತ ಸಿರ‍್ಯಾಮಿಕ್ ತಂತ್ರಜ್ಞರ ಅವಶ್ಯಕತೆ ಹೆಚ್ಚಾಗಿದ್ದು, ಮುಂಬೈ ಎ.ಸಿ.ಸಿ. ಸಿಮೆಂಟ್ ಕಂಪನಿಯ ಉಪಾಧ್ಯಕ್ಷ, ಪಿ.ಡಿ.ಎ. ಕಾಲೇಜಿನ ಮಾಜಿ ವಿದ್ಯಾರ್ಥಿಯಾದ ಉಮೇಶ ತಿಳಿಸಿದರು.
ಅವರು ನಗರದ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ಸಿರ‍್ಯಾಮಿಕ್ ಮತ್ತು ಸಿಮೆಂಟ್ ವಿಭಾಗವು ದಿ. ಇನ್ಸ್ಟಿಟ್ಯೂಶನ್ ಆಫ್ ಇಂಜನಿಯರ‍್ಸ್ ಕಲಬುರಗಿ ಸ್ಥಾನಿಕ ಕೇಂದ್ರ ಸಹಯೋಗದೊಂದಿಗೆ ಆಯೋಜಿಸಲಾದ ಇಂಡಸ್ಟ್ರೀ ಇನ್‌ಸ್ಟಿಟ್ಯೂಟ್ ಇಂಟರ‍್ಯಾಕ್ಸನ್ ಉದ್ಯಮ ಸಂಸ್ಥೆಗಳ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಹೇಳಿದರು.
ಇನ್ನೊಬ್ಬರ ಸಿರ‍್ಯಾಮಿಕ್ ವಿಭಾಗದ ವಿದ್ಯಾರ್ಥಿ ಕತಾರ ದೇಶದ ಪ್ರತಿಷ್ಠಿತ ಕಂಪನಿಯಾದ ಕೆಪ್ ಲಿ., ಆಪರೇಶನ ಮುಖ್ಯಸ್ಥರಾದ ಶ್ರೀ ಅನ್ವರ್‌ಹುಸೇನ ಮಾತನಾಡುತ್ತ ನಮ್ಮ ಭಾಗದ ಇಂಜನಿಯರಿಂಗ್ ವಿದ್ಯಾರ್ಥಿಗಳಯ ಫಲಿತಾಂಶದಲ್ಲಿ ಉತ್ತಮ ಗ್ರೇಡ್, ತಂತ್ರಜ್ಞಾನ ಹೊಂದಿದ್ದರು ಕೂಡಾ ತಮ್ಮ ಶೈಕ್ಷಣಿಕ ಸಾಮರ್ಥ್ಯ, ಕೌಶಲ್ಯವನ್ನು ಪ್ರದರ್ಶಿಸುವಲ್ಲಿ ನಾಚಿಕೆ ಸ್ವಭಾವ ಜಾಸ್ತಿ ಇರುವದರಿಂದ ಕ್ಯಾಂಪಸ ಸಂದರ್ಶನದಲ್ಲಿ ಇತರೆ ಉದ್ಯೋಗ ಗಿಟ್ಟಿಸುವಲ್ಲಿ ಸಮಸ್ಯೆ ಎದರಿಸುತ್ತಿದ್ದಾರೆ. ವಿದ್ಯಾರ್ಥಿಗಳು ತಮ್ಮನ್ನು ಉತ್ತಮ ರೀತಿಯಿಂದ ಮಾರಾಟ ಮಾಡುವ ಕೌಶಲ್ಯವನ್ನು ಹೊಂದುವ ಅವಶ್ಯಕತೆ ಇದೆ ಎಂದರು.
ಮುಖ್ಯ ಅತಿಥಿಗಳಾದ ದಿ. ಇನ್ಯೂಷ್ಟೇಶನ್ ಆಫ್ ಇಂಜನಿಯರ‍್ಸ್ ನ ಕಲಬುರಗಿ ಕೇಂದ್ರದ ಚೆರಮನ್‌ರಾದ ಶ್ರೀ ಬಿ.ಎಸ್. ಮೋರೆ ರವರು ಇಂತಹ ಅತ್ಯುನ್ನತ ತಂತ್ರಜ್ಞಾನದಿಂದ ವಿದ್ಯಾರ್ಥಿಗಳಿಗೆ ಇಂಜನಿಯರಿಗೆ, ಪ್ರಾಧ್ಯಾಕರುಗಳಿಗೆ ಜ್ಞಾನ ಶ್ರೀಮಂತಿಕೆ ಹೆಚ್ಚಿಸುವ ಎಲ್ಲಾ ಕಾರ್ಯಾಕ್ರಮಗಳಿಗೆ ನಮ್ಮ ಸಂಸ್ಥೆ ನೆರವು ನೀಡುತ್ತದೆ ಎಂದರು. ಸಿರ‍್ಯಾಮಿಕ್ ಮತ್ತು ಸಿಮೆಂಟ್ ವಿಭಾಗದ ಮುಖ್ಯಸ್ಥರಾದ ಡಾ. ಅಮರೇಶ ರಾಯಚೂರ ರವರು ಉಪನ್ಯಾಸಕರು ನೀಡಿದ ವಿದ್ಯಾರ್ಥಿಗಳ ಸಮಸ್ಯೆಗಳ ಸಲಹೆಗಳನ್‌ನು ನಾವು ಕಾರ್ಯರೂಪಕ್ಕೆ ತಂದು ಉದ್ಯಮ ತಯಾರಿ ವಿದ್ಯಾರ್ಥಿಗಳನ್ನು ತಯಾರು ಮಾಡಿಸುತ್ತೇವೆ. ಅದಕ್ಕೆ ನಿಮ್ಮ ಸಹಕಾರ ಬೇಕು ಮತ್ತು ನಮ್ಮ ವಿದ್ಯಾರ್ಥಿಗಳಿಗೆ ಉದ್ಯೋಗ ಕೊಡಿಸುವಲ್ಲಿ ನೀವು ಸಹಕಾರ ಮಾಡಬೇಕೆಂದು ಕೋರಿದರು.
ಕಾಲೇಜಿನ ಪ್ಲೇಸಮೆಂಟ್ ಆಫಿಸರಾದ ಡಾ. ಮಹಾದೇವಪ್ಪ ಗಾದಗೆ ವೇದಿಕೆ ಮೇಲೆ ಉಪಸ್ಥಿತರಿದ್ದರು. ಪ್ರಾಧ್ಯಾಪಕರಾದ ಡಾ. ಬಾಬುರಾವ ಶೇರಿಕರ್ ಸ್ವಾಗತಿಸಿದರು. ಪ್ರೊ. ರಂಗದಾಳ ವಂದಿಸಿದರು. ಪ್ರೊ. ಗುಂಡುಕೊಳ್ಳಕುರ, ಡಾ. ವಿರೇಶ ಮಲ್ಲಾಪೂರ ಅತಿಥಿಗಳನ್ನು ಪರಿಚಯಿಸಿದರು. ಆಕಾಶ ವಡಗೇರಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಿರ‍್ಯಾಮಿಕ್ ವಿಭಾಗದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಉಪನ್ಯಾಸ ನೀಡಿದ ಕಂಪನಿಯ ಪರಿಣಿತರೊಂದಿಗೆ ಸಂವಾದ ನಡೆಸಿದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…