ಬಿಸಿ ಬಿಸಿ ಸುದ್ದಿ

ಕೋಣ ಕುರಿಗಳ ಬಲಿ ನೀಡುವ ಮೂಲಕ ಕಾನೂನು ಉಲ್ಲಂಘಿಸಬೇಡಿ: ಪಿಐ ಆನಂದರಾವ್

ಸುರಪುರ: ಸರಕಾರ ಯಾವುದೇ ಜಾತ್ರೆಗಳಲ್ಲಿ ಬಹಿರಂಗವಾಗಿ ಕೋಣ ಕುರಿಗಳನ್ನು ಬಲಿ ಕೊಡುವ ಪದ್ಧತಿಯನ್ನು ನಿರ್ಬಂಧಿಸಿದ್ದು,ಅದರಂತೆ ನಿಮ್ಮ ಗ್ರಾಮದಲ್ಲಿ ನಡೆಯುವ ದ್ಯಾವಮ್ಮ,ಮರೆಮ್ಮ ಕೆಂಚಮ್ಮ ದೇವರ ಜಾತ್ರೆಗಳಲ್ಲಿ ಕೋಣ ಕುರಿಗಳನ್ನು ಬಲಿ ನೀಡುವ ಮೂಲಕ ಕಾನೂನನ್ನು ಉಲ್ಲಂಘಿಸಬೇಡಿ ಎಂದು ಪೊಲೀಸ್ ಇನ್ಸ್ಪೇಕ್ಟರ್ ಆನಂದರಾವ್ ತಿಳಿಸಿದರು.

ತಾಲೂಕಿನ ತಳವಾರಗೇರಾ ಗ್ರಾಮದಲ್ಲಿ ಇದೇ ತಿಂಗಳು ೨೪ ರಿಂದ ನಡೆಯುವ ಗ್ರಾಮದೇವತೆ ಹಾಗು ಇತರ ದೇವರುಗಳ ಜಾತ್ರೆಗಳಲ್ಲಿ ಕೋಣ ಕುರಿಗಳನ್ನು ಬಲಿ ನೀಡುವುದನ್ನು ತಡೆಯುವಂತೆ ಇತ್ತೀಚೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ತಾಲೂಕು ಸಂಚಾಲಕ ಮಾಳಪ್ಪ ಕಿರದಳ್ಳಿ ನೇತೃತ್ವದಲ್ಲಿ ಮನವಿ ಮಾಡಲಾಗಿತ್ತು.ಇದಕ್ಕೆ ಸ್ಪಂಧಿಸಿ ರವಿವಾರ ಗ್ರಾಮದಲ್ಲಿ ಜಾಗೃತಿ ಸಭೆ ನಡೆಸಿ ಮಾತನಾಡಿ,ಯಾವುದೆ ಪ್ರಾಣಿಗಳನ್ನು ದೇವರ ಹೆಸರಲ್ಲಿ ಸಾರ್ವಜನಿಕವಾಗಿ ಹತ್ಯೆ ಮಾಡುವುದು ಕಾನೂನಿನ ಉಲ್ಲಂಘನೆಯಾಗಿದ್ದು,ಇದರಿಂದ ಮೂಢ ನಂಬಿಕೆಯನ್ನು ಬಿತ್ತಿದಂತಾಗಲಿದೆ.ಅಲ್ಲದೆ ಸಾರ್ವಜನಿಕ ಪ್ರಾಣಿವಧೆಯಿಂದ ಪರಿಸರವು ಹಾಳಾಗಲಿದೆ ಇದಕ್ಕೆ ತಳವಾರಗೇರಾದ ಸಾರ್ವಜನಿಕರು ಅವಕಾಶ ಮಾಡಿಕೊಡದಂತೆ ತಿಳಿಸಿದರು.

ಒಂದು ವೇಳೆ ಕಾನೂನು ಉಲ್ಲಂಘಿಸಿ ಕೋಣ ಕುರಿಗಲ ಬಲಿಯನ್ನು ನಡೆಸಿದಲ್ಲಿ ಕಾನೂನು ರೀತಿಯ ಕ್ರಮವನ್ನು ಕೈಗೊಳ್ಳಲಾಗುವುದು ಎಂದರು.ಇದಕ್ಕೆ ಸ್ಪಂಧಿಸಿದ ಗ್ರಾಮಸ್ಥರು ಕೋಣ ಕುರಿಗಳ ಬಲಿಯನ್ನು ನೀಡದೆ ಹೋಳಿಗೆ ಹುಗ್ಗಿ ಮಾಡಿ ದೇವಿ ಜಾತ್ರೆ ಆಚರಿಸುವುದಾಗಿ ಭರವಸೆ ನೀಡಿದರು.ಸಭೆಯ ವೇದಿಕೆ ಮೇಲೆ ಪಿಎಸ್‌ಐ ಶರಣಪ್ಪ ಹವಲ್ದಾರ,ಪ್ರೋಬೆಷನರಿ ಪಿಎಸ್‌ಐ ಸಿದ್ದೇಶ್ವರ ಇದ್ದರು ಗ್ರಾಮದ ಅನೇಕ ಜನತೆ ಸಭೆಯಲ್ಲಿ ಭಾಗವಹಿಸಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

5 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

5 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

5 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

21 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

23 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago