ಬಿಸಿ ಬಿಸಿ ಸುದ್ದಿ

ಅಭಿವೃದ್ಧಿಗೆ ಆಗ್ರಹಿಸಿ ಭೀಮುನಾಯಕ ನೇತೃತ್ವದಲ್ಲಿ ನಡೆದ ವಡಗೇರಾ ಬಂದ್ ಸಂಪೂರ್ಣ ಯಶಸ್ವಿ

ಯಾದಗಿರಿ: ನೂತನ ವಡಗೇರಾ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ನೇತೃತ್ವದಲ್ಲಿ ನಡೆದ ವಡಗೇರಾ ಬಂದ್ ಸಂಪೂರ್ಣ ಯಶಸ್ವಿಯಾಯಿತು.

ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಭೀಮುನಾಯಕ, ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕು ರಚನೆಯಾಗಿ ೨ ವರ್ಷ ಕಳೆದರೂ ಕೂಡಾ ತಾಲೂಕಾ ಕೇಂದ್ರದಲ್ಲಿ ಇರಬೇಕಾದ ಯಾವುದೇ ರೀತಿಯ ಸರ್ಕಾರಿ ಇಲಾಖೆಗಳು ಪ್ರಾರಂಭವಾಗಿಲ್ಲ, ನಮ್ಮ ಜಿಲ್ಲೆಯಲ್ಲಿ ೩ ತಾಲೂಕುಗಳು ಘೋಷಣೆಯಾಗಿದ್ದು, ಗುರುಮಠಕಲ್, ಹುಣಸಗಿಯಲ್ಲಿ ಈಗಾಗಲೇ ಕೆಲವು ಇಲಾಖೆಗಳನ್ನು ಪ್ರಾರಂಭ ಮಾಡಲಾಗಿದೆ, ಆ ಭಾಗದ ಜನರಿಗೆ ತಕ್ಕಮಟ್ಟಿಗೆ ಅನುಕೂಲವಾಗುತ್ತಿದೆ, ಆದರೆ ವಡಗೇರಾ ತಾಲೂಕಿಗೆ ಯಾವುದೇ ಒಂದು ಇಲಾಖೆ ಅಂದರೆ ತಹಸೀಲ್ ಕಛೇರಿ ಹೊರತುಪಡಿಸಿ ಉಳಿದ ಯಾವುದೇ ಇಲಾಖೆಗಳು ಆರಂಭಗೊಂಡಿಲ್ಲ, ಇದರ ಬಗ್ಗೆ ಕಳೆದ ೨ ವರ್ಷದಿಂದ ಜಿಲ್ಲಾಡಳಿತದ ಗಮನಕ್ಕೆ ನಿರಂತರವಾಗಿ ಪ್ರತಿಭಟನೆ, ಮನವಿ ಮಾಡುವ ಮೂಲಕ ಹಾಗೂ ಆ ಭಾಗದ ರೈತರು, ಹೋರಾಟಗಾರರು, ಪ್ರಗತಿ ಪರ ಚಿಂತಕರು ಮೇಲಿಂದ ಮೇಲೆ ಜಿಲ್ಲಾಡಳಿತಕ್ಕೆ ಎಲ್ಲಾ ರೀತಿಯಿಂದ ಗಮನಕ್ಕೆ ತಂದರೂ ಮೌನವಾಗಿದ್ದಾರೆ.

ಇದಕ್ಕೆ ಕಾರಣವೇ ತಿಳಿಯುತ್ತಿಲ್ಲ. ಈ ಭಾಗದ ಜನರು ತಾಲೂಕಿನಲ್ಲಿ ಸಿಗಬೇಕಾದಂತಹ ಸೌಲಭ್ಯಗಳಿಂದ ವಂಚಿತ ರಾಗುತ್ತಿದ್ದಾರೆ, ಮತ್ತು ಕಛೇರಿಗಳ ಕೆಲಸಕ್ಕಾಗಿ ವಡಗೇರಾ ತಾಲೂಕಿನ ಸುತ್ತ-ಮುತ್ತಲಿನ ಗ್ರಾಮಸ್ಥರು, ರೈತರು, ಬಡ ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರು, ವಯೋ-ವೃದ್ಧರು, ಅಂಗವಿಕಲರು. ಸರ್ಕಾರಿ ನೌಕರರು ಒಂದು ಸಣ್ಣ ಕೆಲಸಕ್ಕಾಗಿ ಹಳೆ ತಾಲೂಕಾದ ಶಹಾಪೂರ ಪಟ್ಟಣಕ್ಕೆ ಹೋಗಬೇಕಾದರೆ ಸುಮಾರು ೪೦ ಕಿಮೀ ಕ್ರಮಿಸಿ ಹೋಗಬೇಕಾಗಿದೆ, ವಡಗೇರಿಯು ಅತೀ ಹಿಂದುಳಿದ, ಸಾಮಾನ್ಯ ಬಡ ಜನರಿರುವ ತಾಲೂಕಾಗಿದ್ದು, ತಮ್ಮ ಕೆಲಸ-ಕಾರ್ಯಗಳು ಬಿಟ್ಟು ಹೋಗುವುದರಿಂದ ಒಂದು ದಿನ ವ್ಯರ್ಥವಾಗುತ್ತಿದೆ. ಇದಕ್ಕೆ ನೇರ ಕಾರಣ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳಿಯ ಶಾಸಕರು ವಡಗೇರಾ ಭಾಗದ ಜನಪ್ರತಿನಿಧಿಗಳು, ಜಿಲ್ಲಾಡಳಿತದ ನಿಷ್ಕಾಳಿಜಿತನ, ದಿವ್ಯ ನಿರ್ಲಕ್ಷ್ಯತನ ತೋರಿಸುತ್ತದೆ.

ಈ ಭಾಗದ ಅಭಿವೃದ್ಧಿ ಆಗಬೇಕಾದರೆ ಸರ್ಕಾರ ಮುತುವರ್ಜಿ ವಹಿಸಿ ಹಿಂದುಳಿದ ತಾಲೂಕಿನ ಸಮಗ್ರ ಅಭಿವೃದ್ಧಿ ಮತ್ತು ತಕ್ಷಣದಿಂದಲೇ ಎಲ್ಲಾ ಇಲಾಖೆಗಳು ಪ್ರಾರಂಭ ಮಾಡಿ ಈ ಭಾಗದ ಎಲ್ಲಾ ವರ್ಗದ ಜನರಿಗೆ ಸರ್ಕಾರದ ಸೌಲಭ್ಯಗಳು ಸಿಗುವಂತೆ ಅನುಕೂಲ ಮಾಡಿಕೊಡಬೇಕೆಂದು ಕರವೇ ಒತ್ತಾಯಿಸುತ್ತದೆ ಎಂದು ಹೇಳಿದರು.
ಕರವೇ ಹಟಕ್ಕೆ ಮಣಿದ ಜಿಲ್ಲಾಡಳಿತ:
ಕರವೇ ಕಾರ್ಯಕರ್ತರು ನಡು ರಸ್ತೆಯಲ್ಲಿ ಧರಣಿ ಕುಳಿತು ಸ್ಥಳಕ್ಕೆ ಜಿಲ್ಲಾಧಿಕಾರಿ ಬರಬೇಕೆಂದು ಹಟ ಹಿಡಿದ ಪರಿಣಾಮ ಸ್ಥಳಕ್ಕೆ ಬಂದ ತಹಸೀಲ್ದಾರ್ ಸಂತೋಷಿರಾಣಿ ವಾಪಸಾದರು. ನಂತರ ಸಂಜೆಯಾದರೂ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕರವೇ ಕಾರ್ಯಕರ್ತರು ಪ್ರತಿಭಟನೆಯನ್ನು ಮುಖ್ಯ ರಸ್ತೆಗೆ ಯಾದಗಿರಿಗೆ ಸ್ಥಳಾಂತರಿಸಲಾಗುವುದು ಎಂದು ಎಚ್ಚರಿಕೆ ರವಾನಿಸಿದ ನಂತರ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾದಿಕಾರಿ ಆಗಮಿಸಿ ಮನವಿ ಸ್ವೀಕರಿಸಿ ಕೆಲ ಬೇಡಿಕೆಗಳು ಈಗಾಗಲೇ ಈಡೇರಿಕೆ ಹಂತದಲ್ಲಿದ್ದು ತಕ್ಷಣದಲ್ಲಿ ಗ್ರಾಪಂ ಅನ್ನು ಪಟ್ಟಣ ಪಂಚಾಯಿತಿ ಮಾಡಲು ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಭರವಸೆ ನೀಡಿದರು.

ಇನ್ನುಳಿದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದ ನಂತರ ಬಂದ್ ಹಿಂದಕ್ಕೆ ಪಡೆಯಲಾಯಿತು. ವಡಗೇರಾ ತಾಲೂಕಿಗೆ ಎಲ್ಲಾ ಸರ್ಕಾರಿ ಕಛೇರಿಗಳು ಪೂರ್ಣಪ್ರಾಮಾಣದಲ್ಲಿ ಪ್ರಾರಂಭವಾಗಬೇಕು., ವಡಗೇರಾ ತಾಲೂಕಿಗೆ ಉಪ ಖಜಾನೆ ಮತ್ತು ಮುದ್ರಾಂಕ ಹಾಗೂ ನೋಂದಣಿ ಇಲಾಖೆ ಪ್ರಾರಂಬಿಸಬೇಕು., ವಡಗೇರಾ ತಾಲೂಕಿಗೆ ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ತಾಲೂಕು ನ್ಯಾಯಾಲಯ ಸ್ಥಾಪಿಸಬೇಕು, ವಡಗೇರಾ ತಾಲೂಕಾ ಕೇಂದ್ರದಿಂದ ಎಲ್ಲಾ ಗ್ರಾಮಗಳಿಗೆ ಹೋಗುವ ರಸ್ತೆಗಳು ಸುಧಾರಣೆ ಮಾಡಬೇಕು, ತಾಲೂಕಾ ಕೇಂದ್ರದಲ್ಲಿ ಈ ಭಾಗದ ಬಡ ರೈತರ ಮಕ್ಕಳಿಗಾಗಿ ಪದವಿ ಪೂರ್ವ ಕಾಲೇಜು / ಮಹಾವಿದ್ಯಾಲಯ, ಐ.ಟಿ.ಐ.ಪ್ಯಾರಾ ಮೆಡಿಕಲ್, ಡಿಪ್ಲೋಮಾ, ಡಿ.ಇಡಿ, ಬಿ.ಇಡಿ ಕಾಲೇಜು ಕೂಡಲೇ ಸ್ಥಾಪನೆ ಮಾಡಬೇಕು, ತಾಲೂ ಕೇಂದ್ರದಲ್ಲಿ ಮೆಟ್ರಿಕ್ ಪೂರ್ವ / ಮೆಟ್ರಿಕ್ ನಂತರ ವಸತಿ ನಿಲಯಗಳನ್ನು ಮಂಜೂರು ಮಾಡಬೇಕು.

ವಡಗೇರಾದ ಗ್ರಾಮ ಪಂಚಾಯತಿಯನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿಸಬೇಕು. ಹಾಗೂ ಎಲ್ಲಾ ವಾರ್ಡಗಳಲ್ಲಿ ಶುದ್ಧ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದ್ದು ಕಾಣುತ್ತಿದ್ದು, ಕೂಡಲೇ ನೀರಿನ ಅನುಕೂಲ ಮಾಡಿಕೊಡಬೇಕು.
ತಾಲೂಕಾ ಕೇಂದ್ರ ಆದರೂ ಕೂಡಾ ಸಮುದಾಯ ಆರೋಗ್ಯ ಕೇಂದ್ರವಾಗಿ ಮುಂದುವರೆದಿದ್ದು, ಅದನ್ನು ಕೂಡಲೇ ತಾಲೂಕಾ ಆಸ್ಪತ್ರೆಯನ್ನಾಗಿ ಮಾಡಿ, ಬೇಕಾದ ಎಲ್ಲಾ ಸೌಲಭ್ಯಗಳನ್ನು ಆ ಭಾಗದ ಜನರಿಗೆ ಅನುಕೂಲ ಮಾಡಿಕೊಡಬೇಕು.  ಕದ್ರಾಪೂರ-ವಡಗೇರಾ ವರೆಗೆ ಕೃಷ್ಣಾ ಬ್ಯಾರೇಜ್ ನಿಂದ ಬಹುಗ್ರಾಮ ಯೋಜನೆಯಡಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.

ಕೃಷ್ಣ ಭಾಗ್ಯ ಜಲ ನಿಗಮದಿಂದ ಕೈಗೆತ್ತಿಕೊಂಡಿರುವ ಕೊನೆ ಭಾಗದ ಕಾಲುವೆ ಕಾಮಗಾರಿಗಳು ಹಾಗೂ ನವೀಕರಣ ಕಾಮಗಾರಿಗಳು ಸಮರ್ಪಕವಾಗಿ ಮಾಡಿ ರೈತರಿಗೆ ಸಮರ್ಪಕ ನೀರಾವರಿ ಸೌಲಭ್ಯ ಒದಗಿಸಿ ಅನುಕೂಲ ಮಾಡಿಕೊಡಬೇಕು. ಎಂಬ ಬೇಡಿಕೆಗಳ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಯಾದಗಿರಿ ತಾಲ್ಲೂಕು ಅದ್ಯಕ್ಷ ಮಲ್ಲು ಮಾಳಿಕೆರಿ, ಜಿಲ್ಲ ಪ್ರ. ಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ, ವಡಗೇರಾ ತಾಲ್ಲೂಕು ಅಧ್ಯಕ್ಷ ಶಿವಕುಮಾರ ಕೊಂಕಲ್, ಭೀಮಾಶಂಕರ ಹತ್ತಿಕುಣಿ, ಅಬ್ದುಲ್ ಚಿಗಾನೂರು, ತೇಜರಾಜ ರಾಠೋಡ, ಮಹಾವೀರ ಲಿಂಗೇರಿ, ವಿಶ್ವಾರಾಧ್ಯ ದಿಮ್ಮೆ, ರಾಜು ಚವ್ಹಾಣ, ಹಣಮಂತ್ರಾಯ ತೇಕರಾಳ, ಚೌಡಯ್ಯ ಬಾವೂರ, ಭೀಮಣ್ಣ ಶಖಾಪುರ, ವೆಂಕಟೇಶ ಬೈರಿಮಡ್ಡಿ, ಭೀಮು ಮಲ್ಲಿಬಾವಿ, ಈರಣ್ಣ ಸಾಹುಕಾರ ಅಗ್ನಿ, ಮಲ್ಲು ಕಲ್ಮನಿ ಹಾಲಗೇರಾ, ಬಸವರೆಡ್ಡಿ ಅಭಿಶಾಳ, ಶಿವರಾಜ ಗೋನಾಲ, ದೇವರಾಜ ಕುರಕುಂದಿ, ಸಾಹೇಬಗೌಡ ನಾಯಕ, ಮಲ್ಲು ದೇವಕರ್, ಯಮನಯ್ಯ ಗುತ್ತೇದಾರ, ಸಿದ್ದಪ್ಪ ಕೂಲೂರ, ಸಾಬು ಹೋರುಂಚಾ, ಸಿದ್ದಪ್ಪ ಕ್ಯಾಸಪನಳ್ಳಿ ರಿಯಾಜ್ ಪಟೇಲ್, ದೀಪಕ್ ಒಡೆಯರ್, ಸೈದಪ್ಪ ಗೌಡಗೇರಾ, ಭೀಮಣ್ಣ ಶೆಟ್ಟಿಗೇರಾ, ಬಸವರಾಜ ಹತ್ತಿಕುಣಿ, ಯಲ್ಲಾಲಿಂಗ ಹತ್ತಿಕುಣಿ,

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

12 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

15 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

21 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

21 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

22 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago