ಬಿಸಿ ಬಿಸಿ ಸುದ್ದಿ

ಪೌರತ್ವ ತಿದ್ದುಪಡಿ ಕಾಯ್ದೆ ದ್ವೇಷಚಾಲಿತ ನಡೆ: ಕ.ರಾ.ಹಿಂ.ವ.ಜಾ.ವೇದಿಕೆ ಅಧ್ಯಕ್ಷ ಜಾಕೀರ್ ಹುಸೇನ್

ಮೈಸೂರು: ಸ್ವಾತಂತ್ರ್ಯ ನಂತರ ಕಾಲದಿಂದ, ಭಾರತವು ದಕ್ಷಿಣ ಏಷ್ಯಾದ ದೇಶಗಳಲ್ಲಿ ದ್ವೇಷಕ್ಕೆ ಗುರಿಯಾಗಿರುವ ಹಲವರಿಗೆ ಆರ್ಶಯವರು ಕೊನರುವದು ಎಲರಿಗೂ ತಿಳಿದಿದೆ. 1959ರಲ್ಲಿ ಟಿಬೇಟಿನ ಮೇಲೆ ಹಲವು ಬಾರಿ ಚೀನಾ ಆಕ್ರಮಣ ಮಾಡಿದಾಗ ದಲಾಯಿಲಾಮಾ ಮತ್ತು ಟೆಬೇಟಿನರಿಂದ ಏಷಾ ಮತ್ತು ಆಫ್ರಿಕಾಗಳ ಯುದ್ಧಪೀಡಿತ ದೇಶಗಳವರೆಗೆ ನಾವು ಆಶ್ರಯ ನೀಡಿದ್ದೇವೆ.

ಪೌರತ್ವ ಕಾಯ್ದೆ ವಿರೋಧಿಸಿ ಮಾತನಾಡಿ, ನಮ್ಮ ನೈತಿಕ ಹಿರಿಮೆಯನ್ನು ಕಳೆದುಕೊಂಡಿದ್ದೇವೆ, ಮೋದಿ-ಶಾ ನಾಯಕತ್ವದ ಬಿಜೆಪಿ ಸರಕಾರವು ಸಾಧ್ಯವಿರುವ ಎಲ್ಲ ರಾಜಕೀಯ ಅಸ್ತ್ರಗಳ ಅವಕಾಶಗಳನ್ನು ಘೋಷಿತ ಕಾರ್ಯಸೂಚಿಯಾದ, ಭಾರತವನ್ನು ಬಲಾತ್ಕಾರದಿಂದ ಮಿಥ್ಯಾವಾಸ್ತವದ ‘ಹಿಂದೂರಾರ್ಷ್ಟವಾಗಿಸುವುದು, ಕಾನೂನಿನ ಪ್ರಕಾರ ಘೋಷಿಸುವುದು ತಡವಾಗಬಹುದಾದರೂ, ಸ್ಪಷ್ಟವಾಗಿ ಕಾಣಿಸುವ ಭವಿಷ್ಯವಾಗಿದೆ ಎಂದರು.

ನಂತರ  ಆಮ್ ಆದ್ಮಿ ಪಕ್ಷ ಪಾರ್ಟಿ ಸದಸ್ಯ ಮಾನವೀಕ ಮಾತನಾಡಿ ಕೆಲವು ವರ್ಷಗಳಿಂದ, ಬಹುಮತದ ಹಿಂದೂ  ಭಾವನೆಗಳನ್ನು ಕ್ರೋಡೀಕರಿಸಲು ನಿರಂತರವಾಗಿ ತಾರತಮ್ಯ ಭೇದದ ಕೋಮುದ್ವೇಷ, ಅಸಹನೆಗಳ ಕಿಚ್ಚನ್ನು ಹಚ್ಚುತ್ತಿರುವುದು, ದೇಶದಲ್ಲಿ ಗುಂಪುಹತ್ರಗಳು, ಸಾಮೂಹಿಕ ಕೊಲೆಗಳು, ಸಾಮೂಹಿಕ ಹಿಂಸೆಗಳು ಆದಾಗ ತಂತ್ರದ ಭಾಗವಾಗಿ ಮೌನವಾಗಿರುವುದು ಅದರ ಕಾರ್ಯತಂತ್ರದ ಭಾಗವಾಗ ಎಂದರು.

ನಾಗರಿಕತ್ವ ತಿದ್ದುಪಡಿ ಕಾಯ್ದೆಗೆ ಪೂರಕವಾಗಿ ನಾಗರಿಕರ ರಾಷ್ಟ್ರೀಯ ನೋಂದಣಿ(ಎನ್ ಆರ್ ಸಿ)ಯನ್ನು ಘೋಷಿಸುವಂತೆ ಇಡೀ ದೇಶವನ್ನು ಒತ್ತಾಯಿಸುವುದು, ಮುಸ್ಲಿಮರನ್ನು ಅಧೀನತೆಗೆ ಒಳಪಡಿಸುವ, ಅವರನ್ನು ವಾಸ್ತವದಲ್ಲಿ, ತಮ್ಮ ದೇಶದಲ್ಲಿಯೇ ಎರಡನೆಯ ದರ್ಜೆಯ ಪ್ರಜೆಗಳಾಗಿಸುವ ಮೃತ್ಯುದಂಡವಾಗಿದೆ. ನಾಗರಿಕತ್ವ ತಿದ್ದುಪಡಿ ಕಾಯ್ದೆ ಮತ್ತು ದೇಶವ್ಯಾಪಿ ನಾಗರಿಕ ರಾಷ್ಟ್ರೀಯ ನೋಂದಣಿಗಳು ಮತ್ತೂ ಹೆಚ್ಚಿನ ಕೇಡಿನ ದುಶ್ಶುನಗಳಾಗಿವೆ ಎಂದು ತಿಳಿಸಿದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

13 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

15 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

22 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

22 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

22 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago