ಕಲಬುರಗಿ: ಭೂಮಿ ಸೂರ್ಯನ ಸುತ್ತ ಸುತ್ತುವುದು ವೈಜ್ಞಾನಿಕ ಸತ್ಯ. ಭೂಮಿಯ ಮತ್ತು ಸೂರ್ಯ ಮಧ್ಯದಲ್ಲಿ ಚಂದ್ರನು ಬಂದು ಮೂರು ಗ್ರಹಗಳು ಏಕಕಾಲಕ್ಕೆ ಸರಳ ರೇಖೆಯಲ್ಲಿ ಇರುವುದರಿಂದ ಸೂರ್ಯನ ಕಿರಣಗಳು ಭೂಮಿಯ ಮೇಲೆ ಬೀಳದೆ ಇರುವುದರಿಂದ ಕತ್ತಲೆ ಆವರಿಸಬಹುದೇ ವಿನಃ ಕಷ್ಟ ಅನಿಷ್ಟಗಳು ಬರುವುದಿಲ್ಲ. ಭೂಗೋಳ-ಮತ್ತು ಖಗೋಳಶಾಸ್ತ್ರ ಅಬ್ಯಾಸ ಮಾಡಿದ ನಾವೇ ಭೊಗಳಿಲಿಲ್ಲ ಅಂದರೆ ಭವಿಷ್ಯ ಹೇಳುವವರು ಭೊಗಳುವವರೇ ಹಾಗಾಗಿ ಅಂದಶೃದ್ದೆ, ಕಂದಾಚಾರ ಮೂಡನಂಬಿಕೆಯ ಮಾತುಗಳಿಗೆ ಕಿವಿಗೊಡಬಾರದೆಂದು ವಚನೋತ್ಸವ ಪ್ರತಿಷ್ಠಾನದ ಯುವ ಘಟಕದ ಅಧ್ಯಕ್ಷ ಶಿವರಾಜ ಅಂಡಗಿ ಹೇಳಿದರು.
ನಗರದ ಬಸವೇಶ್ವರ ಆಸ್ಪತ್ರೆ ಎದುರುಗಡೆ ಸೂರ್ಯಗ್ರಹಣ ಕುರಿತು ಜನಜಾಗೃತಿ ಅಭಿಯಾನದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸೂರ್ಯ ಗ್ರಹಣ ಸಂದರ್ಭದಲ್ಲಿ ಕಲಬುರಗಿ ನಗರದ ಬಸವೇಶ್ವರ ಆಸ್ಪತ್ರೆಯ ಮುಂದೆ ಜನಸಾಮಾನ್ಯರೊಂದಿಗೆ ಇಡ್ಲಿ, ವಡಾ, ಆಲೂಬಾತ, ಹಾಗೂ ಚಹಾ ಕುಡಿಯುವ ಮೂಲಕ ಸೂರ್ಯಗ್ರಹಣದ ಬಗ್ಗೆ ಜನರಲ್ಲಿರುವ ಅಪನಂಬಿಕೆ ಹೋಗಲಾಡಿಸುವುದಕ್ಕೆ ಜನಜಾಗೃತಿ ಮೂಡಿಸಲಾಯಿತು.
ಸದರಿ ಕಂಕಣ ಗ್ರಹಣದ ಜಾಗೃತಿ ಅಭಿಯಾನದಲ್ಲಿ ಮಲ್ಲಿಕಾರ್ಜುನ ದೇವಸ್ಥಾನದ ಅರ್ಚಕರಾದ ಪೂಜ್ಯ ಚನ್ನಯ್ಯಾ ಸ್ವಾಮಿ, ನಿಂಬೆಣ್ಣಪ್ಪಾ ಕುಂಬಾರಗೆರೆ, ರಾಜಶೇಖರ ಮರಪಳ್ಳಿ, ಕಲ್ಯಾಣಪ್ಪಾ ಬಿ. ಮುತ್ತಾ, ರಾಜಶೇಖರ ಹೆಬ್ಬಾಳ, ಅಭಿಷೇಕ ಬಂಗರಗಿ, ಸೋತೋಷ ಸುತಾರ, ಪದ್ಮನಾಭ, ರವಿ ಪೂಜಾರಿ ಹಾಗೂ ಅನೇಕ ಮಹಿಳೆಯರು ಮಕ್ಕಳು ಉಪಸ್ಥಿತರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…