ಬಿಸಿ ಬಿಸಿ ಸುದ್ದಿ

ಜ್ಞಾನವಂತ ವ್ಯಕ್ತಿಗಳಿಂದ ವೈಚಾರಿಕತೆಯುಕ್ತ ಸಮಾಜ ನಿರ್ಮಾಣ

ಕಲಬುರಗಿ: ವಿಜ್ಞಾನ ಮತ್ತು ತಂತ್ರಜ್ಞಾನ ಸಾಕಷ್ಟು ಬೆಳವಣಿಗೆ ಆಗಿದ್ದರೂ ಕೂಡಾ, ಇಂದಿಗೂ ಅನೇಕ ಮೂಢ ನಂಬಿಕೆ, ಕಂದಾಚಾರ, ಅಂಧಶೃದ್ಧೆ ಕಂಡು ಬರುತ್ತಿರುವುದು ತುಂಬಾ ವಿಷಾದನೀಯ ಸಂಗತಿಯಾಗಿದೆ. ಗ್ರಹಣಗಳು ನೈಸರ್ಗಿಕವಾಗಿ ಜರುಗುವ ಒಂದು ಕ್ರಿಯೆಯಾಗಿದೆ. ಅದರ ಬಗ್ಗೆ ಮೌಢ್ಯತೆ ಬೆಳೆಸಿಕೊಳ್ಳದೆ, ವೈಜ್ಞಾನಿಕವಾಗಿ ಚಿಂತನೆ ಮಾಡುವ ಜ್ಞಾನವಂತ ವ್ಯಕ್ತಿಗಳಿಂದ ವೈಚಾರಿಕತೆಯುಕ್ತ ಸಮಾಜ ನಿರ್ಮಾಣವಾಗಲು ಸಾಧ್ಯವಿದೆಯೆಂದು ಮಕ್ತಂಪುರ ಗುರುಬಸವ ಮಠದ ಪರಮಪೂಜ್ಯ ಶಿವಾನಂದ ಮಹಾಸ್ವಾಮೀಜಿಗಳು ಹೇಳಿದರು.

ಅವರು ನಗರದ ಆಳಂದ ಚೆಕ್ ಪೋಸ್ಟ್ ಸಮೀಪದ ’ಕೆಎಚ್‌ಬಿ ಗ್ರೀನ್ ಪಾರ್ಕ್’ನಲ್ಲಿ, ’ಕೆಎಚ್‌ಬಿ ಬಡಾವಣೆ’ ಮತ್ತು ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಬೆಳೆಗ್ಗೆ ಹಮ್ಮಿಕೊಳ್ಳಲಾಗಿದ್ದ ’ಸೂರ್ಯ ಗ್ರಹಣ: ವೀಕ್ಷಣೆ, ವಿದ್ಯಾರ್ಥಿಗಳೊಂದಿಗೆ ಸಂವಾದ ಮತ್ತು ಸಾಮೂಹಿಕ ಭೋಜನ ಕಾರ್ಯಕ್ರಮ’ವನ್ನು ಸೂರ್ಯಗ್ರಹಣವನ್ನು ವೀಕ್ಷಿಸುವ ಮೂಲಕ ಉದ್ಘಾಟಿಸಿ ನಂತರ ಮಾತನಾಡುತ್ತಿದ್ದರು.

ಪ್ರತಿಯೊಬ್ಬರು ಮೌಢ್ಯತೆಯಿಂದ ಹೊರಬನ್ನಿ. ವೈಜ್ಞ್ಞಾನಿಕವಾಗಿ ಚಿಂತನೆ ಮಾಡಿ. ಗ್ರಹಗಳು ಕಾಡುವುದಿಲ್ಲ. ಅವುಗಳು ನೈಸರ್ಗಿಕವಾಗಿ ಚಲನೆ ಮಾಡುತ್ತವೆ. ಅಜ್ಞಾನದಿಂದ ಬಾಳು ಹಾಳಾಗುತ್ತದೆ. ನೀರಲ್ಲಿ ಮುಳಗಿದರೆ ಯಾವುದೇ ಪ್ರಯೋಜನೆಯಾಗದು. ಅಜ್ಞಾನದಿಂದ ದೂರವಿದ್ದು, ಜ್ಞಾನಿಗಳಾಗಬೇಕು. ಮುಂದಿನ ಪೀಳಿಗೆಗೆ ವೈಜ್ಞಾನಿಕವಾದ ಜ್ಞಾನವನ್ನು ನೀಡಿ, ಯಾರೂ ಕೂಡಾ ಗ್ರಹಣದ ಬಗ್ಗೆ ಸುಳ್ಳು ವದಂತಿ ಹಬ್ಬಿಸಿ ಭಯವನ್ನು ಸೃಷ್ಠಿಸುವ ಕಾರ್ಯಮಾಡಬಾರದೆಂದು ಸಲಹೆ ನೀಡಿದರು.

ವಿಶೇಷ ಉಪನ್ಯಾಸ ನೀಡಿದ ವಿಜ್ಞಾನ ಶಿಕ್ಷಕ ಶಿವಾನಂದ ಜಮಾದಾರ, ವಿದ್ಯಾರ್ಥಿ ದೆಸೆಯಿಂದಲೇ ವೈಜ್ಞಾನಿಕ ಅಂಶಗಳನ್ನು ತಿಳಿದುಕೊಂಡು ಅವುಗಳನ್ನು ಪಾಲಿಸಬೇಕು. ಸೂರ್ಯ ಮತ್ತು ಭೂಮಿ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣವಾಗುತ್ತದೆ. ಇದು ನೈಸರ್ಗಿಕವಾಗಿ ಜರುಗುವ ಪ್ರಕ್ರಿಯೆಯಾಗಿದೆ. ಇದಕ್ಕೆ ಮೌಢ್ಯತೆಯ ಲೇಪನ ಬೇಡ. ಇಂದು ಸಂಭವಿಸಿದ ಸೂರ್ಯಗ್ರಹಣ ೧೭೨ ವರ್ಷಗಳ ಹಿಂದೆ ಸಂಭವಿಸಿದ್ದು, ಮತ್ತೆ ಇದು ಬರುವ ೨೦೬೪ರಲ್ಲಿ ಸಂಭವಿಸುತ್ತದೆಯೆಂದು ಸಂಪೂರ್ಣ ಸೌರವ್ಯವಸ್ಥೆಯ ಬಗ್ಗೆ ವಿವರಿಸಿ, ನಂತರ ವಿದ್ಯಾಥಿಗಳೊಂದಿಗೆ ಸಂವಾದ ನಡೆಸಿ, ಅವರಲ್ಲಿ ವೈಜ್ಞಾನಿಕ ಸಂಗತಿಗಳನ್ನು ಬಿತ್ತುವ ಕಾರ್ಯಮಾಡಲಾಯಿತು.

ಕಾರ್ಯಕ್ರಮದಲ್ಲಿ ಬಳಗದ ಸಂಸ್ಥಾಪಕ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ, ಸದಸ್ಯ ಅಮರ ಬಂಗರಗಿ, ಜಿ.ಪಂ.ಮಾಜಿ ಸದಸ್ಯ ಸಂಜೀವಶೆಟ್ಟಿ, ಬಡಾವಣೆಯ ಸಂಗಮೇಶ ಸರಡಗಿ, ಸೂರ್ಯಕಾಂತ ಸಾವಳಗಿ, ರಮೇಶ ವೆಂಕಟಗಿರಿ, ಶಂಭುಲಿಂಗ ವಾಡಿ, ಡಿ.ವಿ.ಕುಲಕರ್ಣಿ, ರಾಮದಾಸ ಪಾಟೀಲ, ರವೀಂದ್ರ ಗುತ್ತೇದಾರ ಸೇರಿದಂತೆ ಬಳಗದ ಸದಸ್ಯರು, ಬಡಾವಣೆಯ ನಾಗರಿಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರವನ್ನು ಬಡಾವಣೆಯ ಮಕ್ಕಳು ಪ್ರಾರ್ಥಿಸಿದರು. ಸಹ ಶಿಕ್ಷಕರಾದ ಶಿವಕಾಂತ ಚಿಮ್ಮಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರೇಶ ಬೋಳಶೆಟ್ಟಿ ನರೋಣಾ ನಿರೂಪಿಸಿದರು. ಕೆಎಚ್‌ಬಿ ಬಡಾವಣೆಯ ಅಧ್ಯಕ್ಷ ಮಹಾದೇವಯ್ಯ ಹಿರೇಮಠ ವಂದಿಸಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

4 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

4 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

4 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

21 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

23 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago