ಸುರಪುರ: ಎಸ್.ಸಿ, ಎಸ್.ಟಿ ರೈತರಿಗೆ ಅನುಕೂಲವಾಗಲೆಂದು ಸರಕಾರ ಕಾಡಾ ಇಲಾಖೆಯ ಮುಖಾಂತರ ಎಸ್.ಸಿ.ಪಿ, ಟಿ.ಎಸ್.ಪಿ ಯೋಜನೆಗಳಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆಮಾಡಿ ರೈತರ ಜಮೀನುಗಳಿಗೆ ನೀರು ಒದಗಿಸಲು ಕ್ರೀಯಾಯೋಜನೆಯನ್ನು ನಿಯಮಾನುಸಾರವಾಗಿ ತಯಾರಿಸದೆ ಹಣ ಲೂಟಿಮಾಡಲು ತಮ್ಮ ಮನಬಂದ ತಯಾರಿಸಿದ್ದಾರೆ ಮತ್ತು ಪ್ರಿ ಕಾಮಗಾರಿಗೂ ಇಂತಿಷ್ಟು ಲಂಚವನ್ನು ನೀಡದೆ ಯಾವುದೆ ಕಾಮಗಾರಿಯ ಬಿಲ್ಲುಗಳನ್ನು ಮಾಡದೆ ವಿನಾಕಾರಣ ರೈತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಶೋಷಿತರ ಪರಹೋರಾಟದ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಗಂಭೀರವಾಗಿ ಆರೋಪಿಸಿದರು.
ನಗರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಬಸ್ಸ ನಿಲ್ದಾಣದ ಮುಂಭಾಗದಲ್ಲಿ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು ಹಸನಾಪುರ ಸಬ್ ಡಿವಿಜನ್ ೨ ರಲ್ಲಿ ಕಾಲುವೆ ನಿರ್ಮಾಣ ಕಾಮಗಾರಿಯು ಅವಶ್ಯಕತೆ ಇರುವಕಡೆ ಬಿಟ್ಟು ಇಲ್ಲದೇ ಇರುವಕಡೆ ನಿರ್ಮಿಸಿ ರೈತರ ಜಮೀನುಗಳಿಗೆ ನೀಡಬೇಕಾದ ನೀರನ್ನು ತಪ್ಪಿಸಿ ನೀರು ಪೋಲಾಗುವಂತೆ ಕಾಮಗಾರಿಯನ್ನು ನಿರ್ಮಿಸಿದ್ದಾರೆ ಹಾಗೂ ಇನ್ನು ರೈತರ ಜಮೀನಿನಲ್ಲಿ ಚಕ್ ಡ್ಯಾಂ ನಿರ್ಮಾಣ ಬಸಿ ಕಾಲುವೆ ನಿರ್ಮಾಣ ಅವಶ್ಯಕತೆ ಇರುವ ಜಮೀನುಗಳಲ್ಲಿ ನಿರ್ಮಿಸದೆ ಬೇಕಾ ಬಿಟ್ಟಿಯಾಗಿ ಸರಕಾರದ ಹಣ ಲೂಟಿ ಮಾಡಲು ಮತ್ತು ಕಾಮಗಾರಿಗಳ ಬೋಕಸ್ ಮಾಡಿ ಸರಕಾರದ ಕೋಟ್ಯಾಂತರ ರೂಪಾಯಿಗಳ ಹಣ ಲೂಟಿ ಮಾಡಿದ್ದಾರೆ ಎಂದರು.
ಹಸನಾಪುರ ಸಬ್ ಡಿವಿಜನ್ ೨ ಅಡಿಯಲ್ಲಿ ನಿರ್ಮಿಸಿರುವ ಕಾಲುವೆಗಳು ಬೊಗಸಾಗಿದ್ದು ಅವುಗಳ ಸ್ಥಳ ಪರೀಶಿಲನೆ ನಡೆಸಬೇಕು ಮತ್ತು ಈ ಎಲ್ಲ ಆ ಕಾಮಗಾರಿಗಳ ಅವ್ಯವಹಾರಕ್ಕ ಕಾರಣರಾಗಿರುವ ಕಾಡಾ ಆಡಳಿತ ಅಧಿಕಾರಿಗಳ ಅಮಾನತ್ತುಗೋಳಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಮತ್ತು ಈ ಎಲ್ಲಾ ಅವ್ಯವಹಾರಗಳ ತನಿಖೆಯನ್ನು ನಿರ್ದೇಶಕರು ಖುದ್ದಾಗಿ ಪರೀಶಿನೆ ನಡೆಸುಬೇಕು ಮತ್ತು ಕಾಡಾ ನಿರ್ದೇಶಕರಿಗೆ ಬರೆದ ವಿವಿಧ ಬೇಡಿಕೆಯೊಳ್ಳ ಮನವಿ ಪತ್ರವನ್ನು ತಹಶೀಲ್ದಾರ ಕಚೇರಿಯ ಶೀರಸ್ತೇದಾರ ಪ್ರವೀಣ ಅವರಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಗೋಪಾಲ ಬಾಗಲಕೋಟ, ಮಾನಯ್ಯ ದೊರೆ, ಕೃಷ್ಣಾ ದಿವಾಕರ, ಕೇಶಣ್ಣ ದೊರೆ, ಬಸವರಾಜ ಕವಡಿಮಟ್ಟಿ, ದೇವಪ್ಪ ದೇವರಮನಿ ಸೇರಿದಂತೆ ಇನ್ನಿತರರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…