ಸುರಪುರ: ಯಾವುದೆ ಸಮುದಾಯದ ಅಭಿವೃಧ್ಧಿಗೆ ಸಹಕಾರಿ ಸಂಘದ ಅವಶ್ಯಕತೆ ತುಂಬಾ ಇದೆ ಎಂದು ನೇಕಾರರ ಸಹಕಾರಿ ಸೌಹಾರ್ಧದ ಅಧ್ಯಕ್ಷ ವೀರಸಂಗಪ್ಪ ಹಾವೇರಿ ಮಾತನಾಡಿದರು.
ನಗರದ ತಿಮ್ಮಾಪುರದಲ್ಲಿರುವ ಚೌಡೇಶ್ವರಿ ದೇವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಇಂದು ನಮ್ಮ ನೇಕಾರ ಸಮುದಾಯ ಹಲವಾರು ಸಮಸ್ಯೆಗಳನ್ನು ಹೆದರಿಸುತ್ತಿದೆ.ಅಲ್ಲದೆ ಬಡ ಜನತೆಯ ಏಳಿಗೆಗೆ ಆರ್ಥಿಕ ನೆರವು ಅವಶ್ಯಕವಾಗಿದ್ದು,ಆ ನಿಟ್ಟಿನಲ್ಲಿ ನೇಕಾರರ ಸಹಕಾರಿ ಸಂಘ ಕೆಲಸ ಮಾಡಲಿದೆ ಎಂದರು.
ಸಹಕಾರಿ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದ ಚೆನ್ನಮಲ್ಲಿಕಾರ್ಜುನ ಗುಂಡಾನೋರ ಮಾತನಾಡಿ,ಸಮುದಾಯದ ಎಲ್ಲರು ಒಗ್ಗಟ್ಟಿನಿಂದ ಸಹಕಾರಿ ಸಂಘವನ್ನು ಬೆಳೆಸೋಣ,ಇದರ ಮೂಲಕ ನಮ್ಮಲ್ಲಿಯ ಬಡ ಜನರ ಆರ್ಥಿಕ ಬಲವರ್ಧನೆಗೆ ಅನುಕೂಲ ಕಲ್ಪಿಸುವುದರ ಜೊತೆಗೆ ರಾಜ್ಯದಲ್ಲಿ ಮಾದರಿ ಸಹಕಾರಿ ಸಂಘವನ್ನಾಗಿ ಬೆಳೆಸೋಣ ಎಂದರು.
ಪೂರ್ವಭಾವಿ ಸಭೆಯ ಆರಂಭದಲ್ಲಿ ತಾಲ್ಲುಕು ನೇಕಾರರ ಸೌಹಾರ್ಧ ಸಹಕಾರಿ (ನಿ) ಸುರಪುರ ಎಂಬ ನಾಮಫಲಕ ಅನಾವರಣಗೊಳಿಸುವ ಜೊತೆಗೆ ನೇಕಾರ ಸಮುದಾಯದ ಶರಣ ದೇವರ ದಾಸಿಮಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.ನಂತರ ಸಹಕಾರಿ ಸಂಘದ ಪದಾಧಿಕಾರಿಗಳನ್ನಾಗಿ ಅಧ್ಯಕ್ಷ ವೀರಸಂಗಪ್ಪ ಹಾವೇರಿ,ಉಪಾಧ್ಯಕ್ಷ ಚೆನ್ನಮಲ್ಲಿಕಾರ್ಜುನ ಗುಂಡಾನೋರ ಹಾಗು ಹನ್ನೊಂದು ಜನ ನಿರ್ದೇಶಕರನ್ನು ಹಾಗು ವ್ಯವಸ್ಥಾಪಕರನ್ನಾಗಿ ಸಂಗಣ್ಣ ಶಿರಗೊಳರನ್ನು ನೇಮಕಗೊಳಿಸಿ,ಈ ತಿಂಗಳ ಹದಿನೇಳನೆ ತಾರೀಖಿನಂದು ಸಹಕಾರಿ ಸಂಘದ ಉದ್ಘಾಟನೆ ನಡೆಸಲು ಘೋಷಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ನಿಂಗಣ್ಣ ರಾಯಚೂರಕರ್,ಶ್ರೀನಿವಾಸ ಪಾಣಿಭಾತೆ,ಹಣಮೆಗೌಡ ಪೊಲೀಸ್ ಪಾಟೀಲ,ಮಲ್ಲಿಕಾರ್ಜುನ ಚೆಟ್ಟಿ,ಶ್ರೀನಿವಾಸ ಬಲಪುರ,ಬಸವರಾಜ ಕೆಂಡದ,ಬಸವರಾಜ ಜಾಲಿಗಿಡ,ಚೆನ್ನಪ್ಪ ಕಡದರಾಳ,ಹಣಮೇಶ ಹಾವೇರಿ,ನಾಗಮ್ಮ ಜಾಲಿಗಿಡ,ಆನಂದಮ್ಮ ದಾಸರ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…