ಬಿಸಿ ಬಿಸಿ ಸುದ್ದಿ

ಕ್ಯಾಂಪಸ್ ಫ್ರಂಟ್ ಆಫ್‌ ಇಂಡಿಯಾದಿಂದ ನಾಗರಿಕ ಅಸಹಕಾರ ಚಳುವಳಿಗೆ ಕರೆ

ಬೆಂಗಳೂರು: ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟವು ದಿನದಿಂದ ದಿನಕ್ಕೆ ತೀವ್ರ ಸ್ವರೂಪಕ್ಕೆ ತಾಳುತ್ತಿದೆ ಎಂದು ಕ್ಯಾಂಪಸ್ ಫ್ರಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ವದಕತ್ವ ಶಾ ಹೇಳಿದರು.

ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿಅಸ್ಸಾಮ್, ದೆಹಲಿ,ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿ ಕಾಯ್ದೆ ವಿರುದ್ಧ ಪ್ರತಿಭಟನೆಗಿಳಿದವರಿಗೆ ಪೋಲೀಸರು ಕ್ರೂರ ರೀತಿಯ ದೌರ್ಜನ್ಯ, ಸುಳ್ಳು ಪ್ರಕರಣ,ಮತ್ತು ಗೋಲಿಬಾರ್ ಮಾಡುವ ಮೂಲಕ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ.ಅಲ್ಲದೇ ರಾಜ್ಯದಲ್ಲೂ ಕಾಯ್ದೆ ವಿರುದ್ಧ ವಿದ್ಯಾರ್ಥಿಗಳು ಜನಸಾಮಾನ್ಯರು ಬೀದಿಗಿಳಿದಿದ್ದಾರೆ. ಹೋರಾಟಗಳು ಗಂಭೀರವಾಗಿ ನಡೆಯುತ್ತಿದ್ದು ಕೆಲವು ಕಡೆ ಹಿಂಸೆಗೆ ತಿರುಗಿರದೆ ಆದರೆ ಸರಕಾರ ವಿಚಾರದಲ್ಲಿ ಜನರ ಭಾವನೆಗಳಿಗೆ ಬೆಲೆ ಇಟ್ಟು ಕೊಂಡು ಪ್ರತಿಕ್ರಿಯೆ ಮಾಡವುದು ಬಿಟ್ಟು ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಕಡ್ಡಿ ಮುರಿಯುವಂತೆ ಹೇಳಿದೆ ಎಂದರು.

ಇನ್ನು ಕರ್ನಾಟಕದಲ್ಲಿ ಕೂಡ ಸಿ ಎ ಎ ವಿರುದ್ಧ ಹೋರಾಟದ ಕಿಚ್ಚು ಹೆಚ್ಚಾಗುತ್ತಿರುವಾಗಲೇ ಗೃಹ ಸಚಿವರು ರಾಜ್ಯದಲ್ಲಿ ಜನವರಿ 1ರಿಂದ ಎನ್ ಆರ್ ಸಿ ಜಾರಿಗೆ ತರುತ್ತೇವೆ ಎಂದು ಹೇಳಿಕೆ ನೀಡಿರುತ್ತಾರೆ.ಇದು ರಾಜ್ಯದ ಜನತೆಯನ್ನು ಗೊಂದಲಕ್ಕೀಡುಮಾಡಿದೆ. ರಾಜ್ಯ ಸರಕಾರದ ಆಡಳಿತ ವೈಫಲ್ಯ ಮತ್ತು ಇತ್ತೀಚೆಗೆ ಉಪ ಚುನಾವಣೆಯಲ್ಲಿ ಆಯ್ಕೆಯಾಗಿರುವ ಶಾಸಕರು ಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿಯುತ್ತಿದ್ದು ಅವರೆಲ್ಲರ ದಿಕ್ಕು ತಪ್ಪಿಸುವ ಉದ್ದೇಶದಿಂದ ಬಿಜೆಪಿ ಸರಕಾರವು ಈ ಅಪಾಯಕಾರಿ ಎನ್ ಆರ್ ಸಿ,ಎನ್ ಪಿ ಆರ್ ವಿರೋಧಿಸಿ ಕ್ಯಾಂಪಸ್ ಫ್ರಂಟ್ ನಾಗರಿಕ ಅಸಹಕಾರ ಚಳುವಳಿಗೆ ಕರೆ ಕೊಟ್ಟಿದೆ.

ಕ್ಯಾಂಪಸ್ ಫ್ರಂಟ್ ಈಗಾಗಲೇ ರಾಜ್ಯಾದ್ಯಂತ ಈ ಜನ ವಿರೋಧಿ ಕಾನೂನುಗಳ ವಿರುದ್ಧ ವಿದ್ಯಾರ್ಥಿಗಳನ್ನು ಬೀದಿಗಿಸಿದೆ.ಇನ್ನು ನಮ್ಮ ಹೋರಾಟ ಕೇವಲ ಒಂದು ಪ್ರತಿಭಟನೆಗೆ ಸೀಮಿತವಾಗದೆ ಸರಕಾರಕ್ಕೆ ಒತ್ತಡ ತರುವ ರೀತಿಯಲ್ಲಿ ಹೋರಾಟ ಮುಂದುವರಿಯುತ್ತದೆ ಅಲ್ಲದೇ ಎನ್ ಆರ್ ಸಿ ವಿಚಾರದಲ್ಲಿ ಜನರಿಗೆ ಸ್ಪಷ್ಟ ಮಾಹಿತಿಯನ್ನು ನೀಡಿ ಜಾಗೃತಿ ಮೂಡಿಸಲಿದೆ‌.ಆದುದರಿಂದ ಸರಕಾರ್ ಜನ ವಿರೋಧಿ ನೀತಿಗಳ ವಿರುದ್ಧ ರಾಜ್ಯಾದ್ಯಂತ ವಿದ್ಯಾರ್ಥಿಗಳ ಹೋರಾಟ ಮುಂದುವರಿಯಲಿದೆ ಮತ್ತು ಈ ಮಸೂದೆಯ ವಿರುದ್ಧ ಅಸಹಕಾರ ಚಳುವಳಿಗೆ ಕ್ಯಾಂಪಸ್ ಫ್ರಂಟ್ ಕರೆ ನೀಡುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯ ಕಾರ್ಯದರ್ಶಿ ಅಶ್ವಾನ್ ಸಾದಿಕ್,ಸಮಿತಿ ಸದಸ್ಯರಾದ ಇಮ್ರಾನ್ ಪಿಜೆ, ಸರ್ಫರಾಝ್ ಗಂಗಾವತಿ,ಅನೀಸ್ ಕುಂಬ್ರ ಉಪಸ್ಥಿತಿತರಿದ್ದರು.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

12 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

12 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

14 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

14 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

14 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

15 hours ago