ಶಹಾಪುರ: ಕುವೆಂಪು ಅವರು ಮಾನವ ಕುಲಕ್ಕೆ ನೀಡಿದ ಮಾರ್ಗದರ್ಶನ ಅವರ ಆದರ್ಶ ತತ್ವಗಳು ಸಾರ್ವಕಾಲಿಕ ಎಂದು ಶಹಾಪುರದ ಹಿರಿಯ ಸಾಹಿತಿ, ಪ್ರಗತಿಪರ ಚಿಂತಕ ಶ್ರೀ ಶಿವಣ್ಣ ಇಜೇರಿ ಅವರು ಹೇಳಿದರು.
ಲೇಖಕ ವಿಶ್ವರಾಧ್ಯ ಸತ್ಯಂಪೇಟೆ ಮಾತನಾಡಿ ಕನ್ನಡಕ್ಕೆ ಹೊಸ ನುಡಿಗಟ್ಟು ಹಾಗೂ ಹೊಸ ಕಲ್ಪನೆಗಳನ್ನು ನೀಡಿ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಧೀಮಂತ ಸಾಹಿತಿ ಎಂದು ಕುವೆಂಪು ಅವರನ್ನು ಬಣ್ಣಿಸಿದರು.
ಹಿರಿಯ ಸಾಹಿತಿ ದೊಡ್ಡಬಸಪ್ಪ ಬಳೂರಗಿ ಮಾತನಾಡಿ ಜಾತಿಭೇದ, ವರ್ಣಭೇದ, ವಿರುದ್ಧ ತಮ್ಮ ಮೊನಚಾದ ಬರವಣಿಗೆಯ ಮೂಲಕ ವೈಚಾರಿಕತೆಯ ನಿಲುವುಗಳನ್ನು ಮಾನವ ಕುಲಕ್ಕೆ ತೋರಿಸಿಕೊಟ್ಟ ಮಹಾನ್ ಚೇತನ ಎಂದು ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಲಿಂಗಣ್ಣ ಆನೆಗುಂದಿ ಮಾತನಾಡಿ ಮನುಷ್ಯನ ಬಾಳಿಗೊಂದು ಬಹಳ ಸುಂದರವಾದ ಅರ್ಥ ನೀಡಿ ಸಂವೇದನೆಯನಾ ಶೀಲತೆಯ ಜೊತೆಗೆ ಸೃಜನಾತ್ಮಕ ಸಾಹಿತ್ಯದ ಮೇರು ಪರ್ವತಕ್ಕೇರಿದ ಮಹಾನ್ ಚೇತನ ಯುಗದ ಕವಿ, ಜಗದ ಕವಿ, ಕುವೆಂಪು ಎಂದು ಬಣ್ಣಿಸಿದರು.
ಶಹಾಪುರ ತಾಲ್ಲೂಕಿನ ತಹಸೀಲ್ದಾರರಾದ ಶ್ರೀ ಜಗನ್ನಾಥ ರೆಡ್ಡಿಯವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಈ ಸಮಾರಂಭದ ವೇದಿಕೆಯ ಮೇಲೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಶ್ರೀ ನಾಗಣ್ಣ ಎಸ್ ಪೂಜಾರಿ, ನಗರಸಭೆ ಆಯುಕ್ತರಾದ ಬಸವರಾಜ ಶಿವಪೂಜೆ, ಡಾ: ಅಬ್ದುಲ್ ಕರೀಂ ಕನ್ಯಾಕೊಳ್ಳೂರ, ಗುಂಡಪ್ಪ ತುಂಬಿಗಿ, ಶ್ರೀಕಾಂತ್ ಹಾಗೂ ಇತರರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ದೇಂದ್ರಪ್ಪ ಕನ್ಯಾಕೋಳೂರು ಸ್ವಾಗತಿದರು, ಕವಿತಾ ಪತ್ತಾರ, ಪ್ರಾಥ೯ಸಿದರು, ಬಸವರಾಜ ಸಿನ್ನೂರ ನಿರೂಪಿಸಿದರು, ಸಂತೋಷ್ ಉದ್ಧಾರ ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…