ಬಿಸಿ ಬಿಸಿ ಸುದ್ದಿ

ವಿಶ್ವ ಮಾನವ ಕುವೆಂಪು ಜನ್ಮದಿನಾಚರಣೆ ನಿಮಿತ್ತ ಸಹಸ್ರ ಸಹಭೋಜನ ಕಾರ್ಯಕ್ರಮ

ಕಲಬುರಗಿ: ಪ್ರತಿಯೊಬ್ಬ ಮನುಷ್ಯರು ವಿಶ್ವಮಾನವರಾಗಿರಬೇಕು ಎನ್ನುವ ಮಹದಾಶೆಯನ್ನು ಬೀರಿದ ರಾಷ್ಟ್ರಕವಿ ಕುವೆಂಪು ಅವರು ಹುಟ್ಟಿದ ದಿನವೆ ವಿಶ್ವ ಮಾನವ ಕುವೆಂಪು ಜನ್ಮದಿನಾಚರಣೆ ಎಂದು ಹಿರಿಯ ಹೋರಾಟಗಾರರಾದ ಶಿವಲಿಂಗಪ್ಪ ಕಿನ್ನೂರ ಹೇಳಿದರು.

ಇಂದು ನಗರದ ಶಮ್ಸ್ ಫಂಕ್ಷನ್ ಪ್ಯಾಲೇಸ್ ವಿಶ್ವ ಮಾನವ ಕುವೆಂಪು ಜನ್ಮದಿನಾಚರಣೆ ನಿಮಿತ್ತವಾಗಿ ರಾಜ್ಯಾದ್ಯಂತ ನಡೆದ ಸಹಸ್ರ ಸಹಭೋಜನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಭೌಮ, ಜಾತ್ಯಾತೀತ, ಸಮಾಜವಾದಿ,  ಪ್ರಜಾತಂತ್ರ ಗಣರಾಜ್ಯದ ಆಶಯವೇ ನಮ್ಮ ದೇಶದ ಸಂವಿಧಾನದ ಜೀವಾಳವೂ ಆಗಿದ್ದು, ಸಂವಿಧಾನದ ಪ್ರಸ್ತಾವನೆ ಎಲ್ಲರಿಗೂ ಬೋಧಿಸುವ ಮೂಲಕ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.

ಸಮಾರಂಭ ಉದ್ದೇಶಿ ಮಾತನಾಡಿ, ಜಾತ್ಯಾತೀತ ಸೌಹಾರ್ದ ಪರಂಪರೆಯ ಆಶಯಕ್ಕೆ ದಕ್ಕೆಯಾಗುವಂತ ವಾತವಾರಣ ಸೃಷ್ಟಿಯಾಗುತ್ತಿರುವುದು ವಿಶಾದನೀಯ. ಘನತೆಯಿಂದ ನೆಮ್ಮದಿಯಾಗಿ ಬದುಕಬೇಕೆಂದರೆ ಮನುಷ್ಯಪ್ರೀತಿ ಸಂಬಂಧಗಳು, ಸೌಹಾರ್ದತೆ ಪಸರಿಸಬೇಕು. ಹಾಗಾಗಿ ಹಿಂದೂಗಳು, ಮುಸ್ಲಿಮರು, ಕ್ರೈಸ್ತರು, ದಲಿತರು, ಮಹಿಳೆಯರು, ವಿದ್ಯಾರ್ಥಿಗಳು ಜೊತೆಗೂಡಿ ಕರ್ನಾಟಕದ  ಸಾವಿರ ಕಡೆಗಳಲ್ಲಿ ಸಂವಿಧಾನದ ಮುನ್ನುಡಿಯ ಓದು ಮತ್ತು ಜೊತೆಗೆ ಸಹಭೋಜನ ಮಾಡುವ ಕಾರ್ಯಕ್ರಮ ಕರ್ನಾಟಕದಾದ್ಯಾಂತ ನಡೆಯುತ್ತಿದ್ದು, ಈ ಕಾರ್ಯ ಮುಂದು ವರೆಯಬೇಕೆಂದು ತಿಳಿಸಿದರು.

ಇಂದು ಕಲಬುರಗಿಯಲ್ಲಿಯೂ ಯಾವುದೇ ನಿರ್ಧಿಷ್ಟ ಸಂಘಟನೆಯ ಬ್ಯಾನರ್  ಹೆಸರು ಇಲ್ಲದೆ ಎಲ್ಲರೂ ಜೊತೆಗೂಡಿ ಈ ಕಾರ್ಯಕ್ರಮ ನಡೆಸುತ್ತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿ, ಎಲ್ಲಾ ಧರ್ಮ, ಜಾತಿಯವರು ನಾವೆಲ್ಲರೂ ಸೌಹಾರ್ದತೆಯಿಂದ ಬದುಕುವ ವಿಶ್ವ ಮಾನವರಾಗಿದ್ದೇವೆ. ದೇಶವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿ ಕಟ್ಟಲಿದ್ದೇವೆ ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ವಕೀಲರಾದ ಭೀಮನಗೌಡ ಪರಗೊಂಡ ಮಾತನಾಡಿದರು. ಪ್ರಾಸ್ತವಿಕವಾಗಿ ರಾಜೇಂದ್ರ ರಾಜವಾಳ ಮಾತನಾಡಿದ್ದು, ಶರಣು ಕೋಲಿ ಕಾರ್ಯಕ್ರಮದ ನಿರೂಪಿಸಿದರು. ನಾಗರಾಜ ಯಡ್ರಾಮಿ ವಂದನಾರ್ಪಣೆಮಾಡಿದರು.

ಕಾರ್ಯಕ್ರಮದಲ್ಲಿ ಶರಣು ಜೇವರ್ಗಿ, ದೇವೇಂದ್ರ ಚಿಗರಳ್ಳಿ, ಸುದರ್ಶನ್ ದೆಗಾಂವ, ವಿಜಯಕುಮಾರ್ ರಾಠೋಡ್, ಬಸವರಾಜ್, ಮಾಂತೇಶ್,  ಉಪಸ್ಥಿತಿ ಸೇರಿದಂತೆ ಈ ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ನಂತರ ಸಹ ಭೋಜನ ಕಾರ್ಯಕ್ರಮ ಜರುಗಿತು.

emedialine

Recent Posts

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀಕುಟುಂಬಕ್ಕೆ ಒಂದೆಡೆ ದುಃಖ, ತಳವಳ, ಕಳವಳ, ಸಂಕಟ, ಮತ್ತೊಂದೆಡೆಸಂತಸ,…

22 mins ago

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

14 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

14 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

15 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

16 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

16 hours ago