ಬಿಸಿ ಬಿಸಿ ಸುದ್ದಿ

ಕಲೆಯ ಮೂಲಕ ಮಾನವೀಯ ಮೌಲ್ಯಗಳ ಪ್ರತಿಪಾದನೆಗೆ ಒತ್ತು

ಕಲಬುರಗಿ: ಸಾಹಿತ್ಯ, ಸಂಗೀತ ಮತ್ತಿತರ ಲಲಿತ ಕಲೆಗಳ ಮೂಲಕ ಕಲಾವಿದ ಸಮಾಜಮುಖಿ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ಕಲೆಯ ಮೂಲಕ ಮಾನವೀಯ ಮೌಲ್ಯಗಳ ಪ್ರತಿಪಾದನೆ ಆಗಬೇಕು ಎಂದು ಹಿರಿಯ ಕಲಾವಿದ ಕಿಶೋರ್ ಕುಮಾರ ನಾಗುರೆ ಒತ್ತಾಯಿಸಿದರು.

ನಗರದ ಇಂಡಿಯನ್ ರಾಯಲ್ ಅಕಾಡೆಮಿ ಆರ್ಟ ಮತ್ತು ಕಲ್ಚರ್ ಸಂಸ್ಥೆ ಭಾನುವಾರ ಅಂಜುಮನ್ ತರಕ್ಕಿ ಎ ಉರ್ದು ಹಿಂದ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ೧೩ ನೇ ವಾರ್ಷಿಕ ಇಂಡಿಯನ್ ರಾಯಲ್ ಅಕಾಡೆಮಿಯ ಪ್ರಶಸ್ತಿ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಅಧ್ಯಕ್ಷತೆವಹಿಸಿದ್ದ ಸಾಹಿತಿ ಮಂಡಲಗಿರಿ ಪ್ರಸನ್ನ ಮಾತನಾಡಿ ಕಲೆ ಅತ್ಯಂತ ಸಂಕಿರ್ಣವಾದ ವಿಷಯ. ಸಾಹಿತ್ಯದಂತೆ ಕಲೆಯೂ ಮನುಷ್ಯನೊಳಗಿನ ಸತ್ಯವನ್ನು ಹೊರಗೆಡವಂತಹ ಕೆಲಸ ಮಾಡಬೇಕು. ಕಲೆ, ಸಾಹಿತಿ, ಸಂಗೀತದಂತಹ ಲಲಿತ ಕಲೆಗಳು ಸಮಾಜದ ಮೂಲ ಬೇರು. ಈ ಕಲೆಗಳು ಉಳಿದು ಅರ್ಥಪೂರ್ಣವಾಗಿ ಬೆಳೆದಾಗ ಮಾತ್ರ ಆರೋಗ್ಯವಂತೆ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.

ಸಂಘಟಕ ವಿಜಯಕುಮಾರ್ ತೇಗಲತಿಪ್ಪಿ ಮಾತನಾಡಿ, ಮಾನವೀಯ ಮೌಲ್ಯಗಳು, ಮನುಷ್ಯತ್ವದ ಗುಣಗಳು ಅರ್ತಹೀನವಾಗುತ್ತಿರುವ ಇಂದಿನ ಸಮಾಜದಲ್ಲಿ ಉತ್ತಮ ಸಮಾಜ ಕಟ್ಟುವ ಕೆಲಸವನ್ನು ಸಾಹಿತಿ, ಕಲಾವಿದ ಮಾಡುತ್ತಾನೆ. ಇಂತಹ ಕ್ಷೇತ್ರಗಳನ್ನು ಬೆಳೆಸುವ ಅಗತ್ಯವಿದೆ ಎಂದು ನುಡಿದರು. ರಾಷ್ಟ್ರೀಯ ಯುವ ಸಾಹಿತ್ಯ ಪುರಸ್ಕಾರ ಪಡೆದ ಉರ್ದು ಸಾಹಿತಿ ಡಾ. ಘಜನ್‌ಫರ್ ಇಕ್ಬಾಲ್, ಇಂಡಿಯನ್ ರಾಯಲ್ ಅಕಾಡೆಮಿ ಅಧ್ಯಕ್ಷ ಡಾ.ರೆಹಮಾನ್ ಪಟೇಲ್ ಮಾತನಾಡಿದರು.

ಸಮಾರಂಭದಲ್ಲಿ ೫ ಜನ ಕಲಾವಿದರು ಹತ್ತು ಸಾವಿರ ನಗದು ಪುರಸ್ಕಾರ, ೨೦ ಜನ ಕಲಾವಿದರು ಬಂಗಾರದ ಪದಕ, ೨೦ ಜನ ಕಲಾವಿದರು ಮೆರಿಟ್ ಅವಾರ್ಡ ಮತ್ತು ವಿವಿಧ ಶಾಲೆಯ ಮಕ್ಕಳು ಹಾಗೂ ಕೆಲ ಉತ್ತಮ ಕಲಾ ಶಿಕ್ಷಕರು ಪ್ರಶಸ್ತಿ ಪಡೆದರು.

ಹಿರಿಯ ಕಲಾವಿದರಾದ ಅಯಾಜುದ್ದೀನ್ ಪಟೇಲ್, ಹಾಜಿ ಮಲಂಗ್, ಎಂ.ಸಂಜೀವ್, ರೇವಣಸಿದ್ದಪ್ಪ ಹೊಟ್ಟಿ, ಕಿರಣ ಪಾಟೀಲ, ಖಾಜಾ ಪಟೇಲ್, ರವಿ ದಾಚಂಪಲ್ಲಿ, ಲಕ್ಷ್ಮೀಕಾಂತ ಮನುಕರ್, ಹಣುಮಂತರಾಯ ಅಟ್ಟೂರ್ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳ ಮತ್ತು ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯದ ಕಲಾವಿದರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

14 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

16 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

23 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

23 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

23 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago