ಅಫಜಲಪುರ: ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ಮೋದಿಯವರು ಬುದ್ಧನ ನೆಲದಿಂದ ಬಂದಿದ್ದೇನೆಂದು ಹೇಳುತ್ತಾರೆ. ಭಾರತಕ್ಕೆ ಬಂದಾಗ ರಾಮಮಂದಿರ ನಿರ್ಮಿಸುವ ಮಾತನಾಡುತ್ತಿದ್ದಾರೆ. ಗೋದ್ರಾ ಹತ್ಯಾಕಾಂಡದ ಪ್ರಮುಖ ಆರೋಪಿಗಳಾದ ನರೇಂದ್ರ ಮೋದಿ, ಪ್ರಜ್ಞಾಸಿಂಗ, ಗಡಿಪಾರು ಆರೋಪಿ ಅಮಿತ ಷಾ ಅಂತಹ ನಾಯಕರ ಕೈಯಲ್ಲಿ ಸಂವಿಧಾನವಿದ್ದು, ರಾಮಲಲ್ಲಾ ಮೈದಾನದಲ್ಲಿ ಸಂವಿಧಾನ ಪ್ರತಿ ಸುಡುವ ಮೂಲಕ ನಾಲಾಯಕರಾಗಿದ್ದಾರೆ ಎಂದು ಅಂತರಾಷ್ಟ್ರೀಯ ಬೌದ್ಧ ಮಹಾಸಭಾದ ಅಧ್ಯಕ್ಷ ರಾಜರತ್ನ ಅಂಬೇಡ್ಕರ್ ಹೇಳಿದರು.
ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್‍ನಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಅಫಜಲಪುರ ಘಟಕದ ವತಿಯಿಂದ ಆಯೋಜಿಸಿದ ಶೋಷಿತರ ನಡೆ ಬುದ್ಧ ಮಾರ್ಗದ ಕಡೆ ಬೃಹತ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಬರುವ ದಿನಗಳಲ್ಲಿ ಸಂವಿಧಾನ ಬದಲಾವಣೆ ಮಾಡಲು ಹೊರಟ ಆರ್.ಎಸ್.ಎಸ್ ಸಂಘಟನೆ ಕಿತ್ತೊಗೆದಾಗ ನಮಗೆ ನ್ಯಾಯ ಸಿಗುತ್ತದೆ. ಸಂವಿಧಾನಕ್ಕೆ ಧಕ್ಕೆ ಬಂದರೆ ಎಲ್ಲರೂ ತ್ಯಾಗಕ್ಕೆ ಸಿದ್ಧರಾಗಬೇಕು. ಒಂದು ವೇಳೆ ಸಂವಿಧಾನಕ್ಕೆ ಧಕ್ಕೆಯಾದರೆ ದೇಶದಲ್ಲಿ ರಕ್ತಕ್ರಾಂತಿಯಾಗುತ್ತದೆ. ಶೋಷಿತರೆಲ್ಲರೂ ಬುದ್ಧನ ವಿಚಾರ ಮತ್ತು ಅಂಬೇಡ್ಕರ್‍ರ ವಿಚಾರಗಳಿಗೆ ಮತ್ತು ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಅವರ ಹಾಕಿಕೊಟ್ಟ ಮಾರ್ಗದತ್ತ ನಡೆದು ಕೋಮುವಾದಿಗಳಿಗೆ ಬುದ್ಧಿ ಕಲಿಸಬೇಕೆಂದು ಕರೆ ನೀಡಿದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿದೇಶದಲ್ಲಿ ಬೌದ್ಧ ಬಂತೇಜಿಯೆಂದು ಹೇಳಿಕೊಂಡು ಹಣ ತರುತ್ತಿದ್ದಾನೆ. ಇದೆ ರೀತಿ ಪ್ರಧಾನಿ ಮೋದಿಯವರು ಕೂಡಾ 117 ಸಾವಿರ ಲಕ್ಷ ಕೋಟಿ ಹಣ ತಂದು ದೇಶದ ಶ್ರೀಮಂತರಾದ ಅದಾನಿ, ಅಂಬಾನಿಯವರಿಗೆ ಕೊಟ್ಟಿದ್ದಾರೆ. ಈ ಕುರಿತು ವಿದೇಶದಲ್ಲಿ ಎಲ್ಲ ನಾಯಕರ ಮುಂದೆ ಅವರ ಬಂಡವಾಳ ಬಯಲು ಮಾಡಿದ್ದೇನೆಂದು ತಿಳಿಸಿದರು.
ಈಗಾಗಲೆ ಎನ್.ಆರ್.ಸಿ ಮತ್ತು ಸಿ.ಎ.ಎ ಕಾಯ್ದೆ ಜಾರಿಗೆ ತಂದಿದ್ದಾರೆ. ದೇಶದಲ್ಲಿರುವ ನೂರು ಕೋಟಿ ಜನ ಹೊರಹೊಗಬೇಕೆಂದು ಹೇಳುತ್ತಿರುವ, ಆರ್.ಎಸ್.ಎಸ್ ಮುಖಂಡ ಮೋಹನ ಭಾಗವತ ಹೊರಗಿನಿಂದ ಬಂದಿದ್ದಾನೆ. ಮೊದಲು ಆತನನ್ನು ಹೊರಹಾಕಬೇಕೆಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದ ಅವರು, ಮುಸ್ಲೀಂ, ಕ್ರೈಸ್ತ, ಸಿಖ್, ಬೌದ್ಧರನ್ನು ಗುರಿಯಾಗಿಸಿಕೊಂಡು ಕಾನೂನು ಜಾರಿಗೆ ತಂದಿದ್ದಾರೆ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಈ ಸಮುದಾಯ ಹೋರಾಟ ಮತ್ತು ತ್ಯಾಗ ಬಲಿದಾನ ಮಾಡಿದ್ದು, ಈ ಸಮುದಾಯದ ಜನ ದೇಶ ಬಿಟ್ಟು ಹೋಗಲು, ಇದು ಅವರ ಅಪ್ಪನ ದೇಶವಲ್ಲ ಎಂದರು.
ಭಾರತದ ಪಾರ್ಲಿಮೆಂಟ್‍ನಲ್ಲಿ ಸುಮಾರು ಮೂರು ನೂರು ಜನಕ್ಕಿಂತ ಹೆಚ್ಚಿನ ಸಂಸದರು ಹಿಂದುಳಿದ ಸಮುದಾಯಕ್ಕೆ ಸೇರಿದವರಾಗಿದ್ದು, ಪೌರತ್ವದ ಕಾಯ್ದೆ ಬಗ್ಗೆ, 371 ರದ್ದು ಕುರಿತು ಯಾವುದೇ ಪ್ರಶ್ನೆ ಕೇಳದೆ ಬಿಜೆಪಿಯ ದಲ್ಲಾಳಿಗಳಂತೆ ವರ್ತಿಸುತ್ತಿದ್ದಾರೆ.
ಅಂಬೇಡ್ಕರ್‍ರವರು ಕೆರೆಯ ನೀರು ಮುಟ್ಟುವ, ಮಂದಿರ ಪ್ರವೇಶದಂತಹ ಆಂದೋಲನ ಹಮ್ಮಿಕೊಂಡು ಹಿಂದು ಧರ್ಮದಲ್ಲಿರುವ ಮೂಢನಂಬಿಕೆ ಮತ್ತು ಕಂದಾಚಾರ, ಜಾತಿ ವ್ಯವಸ್ಥೆ ಬಗ್ಗೆ ದಲಿತ, ಶೋಷಿತರ ಬಗ್ಗೆ ಇರುವ ಭೇದ ಭಾವ ತಿಳಿಸಿ, ಜಾಗೃತಿ ಮೂಡಿಸಿದರು. ಹಿಂದು ಧರ್ಮದ ಗೊಡ್ಡು ಆಚರಣೆಗಳ ವಿರುದ್ಧ ಸಿಡಿದೆದ್ದು, ಬೌದ್ಧ ಧರ್ಮದ ಕಡೆ ಒಲವು ತೋರಿದರು.
ಪ್ರಧಾನಿ ನರೇಂದ್ರ ಮೋದಿಯವರು ವಿದೇಶಕ್ಕೆ ಹೋಗಿ ಬುದ್ಧನ ನೆಲದಿಂದ ಬಂದಿದ್ದೇನೆ ಎಂದು ಹೇಳುತ್ತಾರೆ. ಆದರೆ ಭಾರತ ದೇಶಕ್ಕೆ ಬಂದ ನಂತರ ರಾಮಮಂದಿರ ಕಟ್ಟಲು ಹೊರಟಿದ್ದಾರೆಂದು ಕಿಡಿಕಾರಿದ ಅವರು, ಅಂಬೇಡ್ಕರ್ ವಿಚಾರಗಳಿಗೆ ಕೊಡಲಿಪೆಟ್ಟು ಹಾಕುತ್ತಿರುವ ಕೋಮುವಾದಿ ಆರ್.ಎಸ್.ಎಸ್ ನವರಿಗೆ ಪ್ರಶ್ನೆ ಹಾಕಿದ ಅವರು, ಸಂವಿಧಾನ ಸುಟ್ಟು ಹಾಕುವ ಮೂಲಕ ಈ ದೇಶದ ಜನತೆಗೆ ಮೋಸ ಮಾಡುತ್ತಿದ್ದಾರೆ. ಮೋದಿ ಮತ್ತು ಅಮಿತ ಶಾ ಮೇಲೆ ಆರ್.ಎಸ್.ಎಸ್ ಹಿಡಿತವಿದೆ. ಮೊದಲು ಆರ್.ಎಸ್.ಎಸ್, ಭಜರಂಗ ದಳ, ವಿಶ್ವ ಹಿಂದು ಪರಿಷತ್ ಅಂತಹ ಸಂಘಟನೆಗಳನ್ನು ಬೇರು ಸಮೇತ ಕಿತ್ತು ಹಾಕುವಂತೆ ಹೇಳಿದ ಅವರು ಪೌರತ್ಮ ಕಾಯ್ದೆ ಆಧಾರದ ಮೇಲೆ ದೇಶದಲ್ಲಿನ ಕೆಲವು ಸಮುದಾಯಗಳನ್ನು ಗುರಿಯಾಗಿಸಿಕೊಂಡು ದೇಶದಿಂದ ಹೊರಹಾಕುವ ಹುನ್ನಾರ ಹಣೆದಿದ್ದಾರೆ. ಬರುವ ದಿನಗಳಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೋಮುವಾದಿ ಪಕ್ಷದ ವಿರುದ್ಧವಾಗಿ ನಿಲ್ಲಬೇಕು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಜೆ.ಎಂ ಕೊರಬು, ದಲಿತ ಸಂಘರ್ಷ ಸಮಿತಿ ಮುಖಂಡ ರಾಜು ಆರೇಕರ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿ.ಪಂ ಮಾಜಿ ಸದಸ್ಯ ಮತೀನ ಪಟೇಲ ಅವರು ರಾಜರತ್ನ ಅವರಿಗೆ ಬೆಳ್ಳಿ ಖಡ್ಗ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಸಂಗಾನಂದ ಬಂತೇಜಿ ಅವರು ತ್ರಿಸರಣ ಪಂಚಶೀಲ ಪ್ರತಿಜ್ಞಾ ವಿಧಿ ಭೋದಿಸಿದರು.
ವೇದಿಕೆಯಲ್ಲಿ ರಾಜ್ಯ ಸಂಚಾಲಕ ಅರ್ಜುನ ಭದ್ರೆ, ತಾ.ಪಂ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ, ತಾ.ಪಂ.ಸದಸ್ಯ ರಾಜು ಬಬಲಾದ, ಪುರಸಭೆ ಸದಸ್ಯರಾದ ಯಮನಪ್ಪ ಭಾಸಗಿ, ನಿಂಗಪ್ಪ ಚಲವಾದಿ, ಮುಖಂಡರಾದ ಬಾಬಾಗೌಡ ಪಾಟೀಲ ಮಾಶಾಳ, ಶಿವಪುತ್ರಪ್ಪ ಸಂಗೋಳಗಿ, ಜೆ.ಎಂ ಕೊರಬೊ, ಪಪ್ಪು ಪಟೇಲ, ಮತೀನ ಪಟೇಲ, ಎಂ.ಎಲ್.ಪಟೇಲ ಬಳೂಂಡಗಿ, ಪ್ರಕಾಶ ಜಮಾದಾರ, ದಯಾನಂದ ಡೊಡ್ಮನಿ, ಶರಣು ಕುಂಬಾರ, ನಾಗಪ್ಪ ಆರೇಕರ, ಸಿದ್ದಾರ್ಥ ಬಸರಿಗಿಡ, ನಾಗೇಶ ಕೊಳ್ಳಿ, ಮಹಾಂತೇಶ ಬಡದಾಳ, ಮಲ್ಲಿಕಾರ್ಜುನ ಕ್ರಾಂತಿ, ಸುರೇಶ ಹಾದಿಮನಿ, ಬೀರಣ್ಣಾ ಕಲ್ಲೂರ, ಚಂದ್ರಕಾಂತ ಇಂಗಳೆ ಸೋಲಾಪೂರ, ರಾಜು ಆರೇಕರ, ಪ್ರಕಾಶ ಮೂಲಭಾರತಿ, ಎ.ಬಿ ಹೊಸಮನಿ, ರವಿ ಗೌರ, ರಮೇಶ ಸೂಲೇಕರ, ಅರವಿಂದ ದೊಡ್ಮನಿ, ಸಿದ್ದು ದಿಕ್ಸಂಗಾ, ಅಶೋಕ ಗುಡ್ಡಡಗಿ, ಗುಂಡಪ್ಪ ಲಂಡನಕರ, ಮಹಾನಿಂಗ ಅಂಗಡಿ, ಮಹಾಂತೇಶ ಗಾಯಕವಾಡ, ಮಲ್ಲಿಕಾರ್ಜುನ ಗೌರ, ಸೋಮು ಬ್ಯಾಡಗಿಹಾಳ, ಹಣಮಂತ ಕೋರವಾರ, ಸಾಹಿತಿಗಳಾದ ಸುಭಾಷ ನಾಯ್ಕೋಡಿ, ಹಿರಿಯ ಸಾಹಿತಿ ಬಿ.ಎಂ ರಾವ ಇತರರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…