ಬಿಸಿ ಬಿಸಿ ಸುದ್ದಿ

ಛಲದಂಕಮಲ್ಲ ಅಂಬಾದಾಸ್ ಕಾಂಬಳೆ ಈಗ ಎಸಿ

ಆಳಂದ: ಕಿತ್ತಿ ತಿನ್ನುವ ಬಡತನ. ಕೂಸಿದ್ದಾಗಲೇ ಅಗಲಿದ ತಂದೆ, ಕೂಲಿ ಮಾಡಿ ಶಿಕ್ಷಣ ನೀಡಿದ ತಾಯಿ ಮತ್ತು ಅಣ್ಣನ ಆಶ್ರಯದಲ್ಲೇ ತಾನೂ ಕೂಲಿ ಮಾಡುತ್ತಲೇ ಶಿಕ್ಷಣ ಕಲಿತು ಬೆಳೆದ ದಲಿತ ಕುಟುಂಬದ ಯುವಕನೋರ್ವ ಈಗ ಕೆಪಿಎಸ್‌ಸಿ ನಡೆಸುವ ಕೆಎಎಸ್ ಪರೀಕ್ಷೆಯಲ್ಲಿ ಪಾಸಾಗಿ ವಾಣಿಜ್ಯ ತೆರಿಗೆ ಇಲಾಖೆಯ ಎಸಿ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಗಡಿ ಗ್ರಾಮ ತಾಲೂಕಿನ ಕೋತನಹಿಪ್ಪರಗಾದ ಅಣ್ಣಪ್ಪ ತಾಯಿ ಚಂದಮ್ಮ ಕಾಂಬಳೆ ಅವರ ಮೂವರು ಗಂಡು, ಮೂವರು ಹೆಣ್ಣುಮಕ್ಕಳು ಪೈಕಿ ಐದನೇ ಪುತ್ರನಾದ ಅಂಬಾದಾಸ ಕಾಂಬಳೆ ವಿವಾಹಿತನಾಗಿದ್ದು, ಇಬ್ಬರು ಪತ್ರಿಯರು ಹಾಗೂ ಓರ್ವ ಪುತ್ರ ಸೇರಿ ಸಂಸಾರದ ಜಂಜಾಟದ ನಡುವೆ ಉನ್ನತ ಸಾಧನೆಯ ಶಿಖರವೇರಿ ಕುಟುಂಬ, ಗ್ರಾಮ ಹಾಗೂ ತಾಲೂಕಿಗೆ ಕೀರ್ತಿಯನ್ನು ತಂದವರು.

ಆದರೆ ಮಗ ಅಂಬಾದಾಸ ಎಸಿ ಆದ ಭಾಗ್ಯವನ್ನು ನೋಡಬೇಕಿದ್ದ ಹೆತ್ತ ತಾಯಿ ೮ ವರ್ಷಗಳ ಹಿಂದೆಯೇ ಮರಣಹೊಂದಿದ್ದು ಬದುಕಿನೊದ್ದಕ್ಕೂ ಅನುಭವಿಸಿದ ನೋವು, ಯಾತನೇ ಬಡತನ ಹೀಗೆ ಇವೆಯಲ್ಲವೂ ಸಾಧಕನಿಗೆ ಒಂದಡೆ ನೋವು ಸಂತಷ ಎರಡನ್ನೂ ಎದುರಿಸುವಂತಾಗಿದೆ.

ಶಿಕ್ಷಣದ ಹಾದಿ: ಸಾಧಕ ಅಂಬದಾಸ್ ಕಾಂಬಳೆ ಅವರು ವಿಶೇಷಚೇತನಾಗಿದ್ದು, ಪ್ರಾಥಮಿಕ ಶಿಕ್ಷಣವನ್ನು ತಮ್ಮ ಗ್ರಾಮ ಕೋತನಹಿಪ್ಪರಗಾದಲ್ಲೇ ಮುಗಿಸಿ ಪ್ರೌಢಶಿಕ್ಷಣವನ್ನು ನೆರೆಯ ತಡಕಲ್ ಗ್ರಾಮದ ಶಿವಲಿಂಗೇಶ್ವರ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ ೧೦ನೇ ವರೆಗೆ ಓದಿ, ಮುಂದೆ ಪಿಯುಸಿ ಕಲಬುರಗಿಯ ಇಂಡಿಪೆಂಡಂಟ್ ಪಿಯು ಕಾಲೇಜಿನಲ್ಲಿ ಓದಿದ್ದು ಹಾಗೂ ಪದವಿಯನ್ನು ಡಾ| ಅಂಬೇಡ್ಕರ್ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದು, ಬಳಿಕ ಗುಲಬರಗಾ ವಿವಿ ಬಿಇಡ್, ಎಂಎ ಕನ್ನಡ ಎಂಫಿಲ್ ಮುಗಿಸಿ ಸದ್ಯ ಪಿಎಚ್‌ಡಿ ಕೈಗೊಂಡಿದ್ದಾರೆ.

ಡ್ರಾಪೌಟ್ ವಿದ್ಯಾರ್ಥಿ: ಬಡತನದಿಂದಾಗಿ ೭ನೇ ತರಗತಿ ಡ್ರಾಪೌಟ್ ವಿದ್ಯಾರ್ಥಿ ಆಗಿದ್ದ ಸಾಧಕ ಅಂಬರಾಯ ಬಾಲ್ಯದಲ್ಲೇ ತುತ್ತಿನ ಚೀಲತುಂಬಿಕೊಳ್ಳಲು ಕೂಲಿ ಕೆಲಸಕ್ಕೆ ಹೋಗಿದ್ದರು. ಶಿಕ್ಷಣ ಕಲಿಯಬೇಕೆಂಬ ಬಯಕೆಯಿಂದ ಮರಳಿ ಶಾಲೆಗೆ ಬಂದು ಓದು ಮುಂದುವರೆಸಿದರು. ಮುಂದೆ ಪಿಯುಸಿ ಫೇಲಾದಾಗ ವಾಣಿಜ್ಯ ನಗರಿ ಮುಂಬೈಗೆ ಕೂಲಿ ಕೆಲಸಕ್ಕೆ ಹೋಗಿ ಅಲ್ಲಿನ ಅಧಿಕಾರಿಗಳನ್ನು ನೋಡಿ ನಾನು ಸಹ ಈ ಅಧಿಕಾರಿಗಳಂತೆ ಆಗಬೇಕು ಎಂಬ ಛಲತೊಟ್ಟು ಮತ್ತೆ ಮರಳಿ ಕಾಲೇಜು ಓದು ಮುಂದುವರೆಸಿದ ಫಲವೇ ಸಾಧನೆಗೆ ದಾರಿಮಾಡಿಕೊಟ್ಟಿದೆ.

ನಾಲ್ಕು ಹುದ್ದೆಗಳು:- ಸಾಧಕ ಕಾಂಬಳೆ ತಾಲೂಕಿನ ತಡಕಲ್ ಮೊರಾರ್ಜಿ ದೇಸಾಯಿ ವಸತಿ ನಿಲಯ ವಾರ್ಡ್‌ನ, ಎಸ್ಸಿ,ಎಸ್ಟಿ ವಸತಿ ನಿಲಯ ವಾರ್ಡ್‌ನ ಪಿಯು ಕಾಲೇಜಿನ ಉಪನ್ಯಾಸಕ ಹುದ್ದೆ ವಲಿದು ಬಂದಿದ್ದವು. ಆದರೆ, ವಾರ್ಡ್‌ನ ಹುದ್ದೆ ತಿರಸ್ಕರಿಸಿದ ಇವರು ಉಪನ್ಯಾಸಕ ಹುದ್ದೆಗೆ ದಾಖಲೆ ಪರಿಶೀಲಿನೆ ಪ್ರಕ್ರಿಯೆ ಮುಗಿಸಿದ್ದರು. ಕೆಎಎಸ್ ಪರೀಕ್ಷೆಯ ಫಲಿತಾಂಶದ ನಿರೀಕ್ಷೆಯಲ್ಲಿದ್ದರು.

ಸಹಕರಿಸಿದವರ ನೆನಪು: ಕಷ್ಟದಿಂದ ಶಿಕ್ಷಣ ಕಲಿತು ಎಂಫಿಲ್ ವೇಳೆ ಆರ್ಥಿಕ ಸಂಕಷ್ಟದಲ್ಲಿದ್ದೇ, ಅದೇ ತಾನೆ ತಾಯಿ ಮರಣ ಹೊಂದಿದ್ದರು. ಹೀಗಾಗಿ ಎಂಪಿಎಲ್ ಓದನ್ನೇ ಕೈಬಿಟ್ಟು ಮನೆಯಲ್ಲೇ ಕುಳಿತುಕೊಂಡಿದ್ದಾಗ ಕಲಬುರಗಿ ವಿವಿ ಕನ್ನಡ ವಿಭಾಗದ ಡೀನ್ ಪ್ರೊ| ಎಚ್.ಟಿ.ಪೋತೆ ಅವರು ಕರೆದು ನೀಡಿದ ಮಾರ್ಗದರ್ಶನ ಸಹಾಯದಿಂದ ಪಿಎಚ್‌ಡಿ ಅಧ್ಯೆಯನ ಮುಂದುವರೆಸಿದ್ದೇ. ಅಣ್ಣ ಶ್ರೀಶೈಲ ಗೌಡಿಕೆಲಸಗಾರ, ತಮ್ಮನಾದ ಮಲ್ಲಿಕಾರ್ಜುನ ಕಾಂಬಳೆ ಕೂಲಿ ಕೆಲಸದ ಹಣದ ಸಹಾಯ ಹಾಗೂ ಸೋಹದರ ಸಂಬಂಧಿ ಪ್ರಕಾಶ ಮೂಲಭಾರತಿ, ದಿಲೀಪ ಕ್ಷೀರಸಾಗರ ಇನ್ನೂ ಅನೇಕರ ಮಾರ್ಗದರ್ಶನ ಸಹಾಯವೇ ನನಗೇ ಸಾಧನೆಗೆ ಸ್ಫೂರ್ತಿತಂದಿದೆ. ಜೊತೆಗೆ ಸರ್ಕಾರಿ ಸೌಲಭ್ಯಗಳು ಸದುಪಯೋಗ ಪಡಿಸಿಕೊಂಡು ನಿರಂತರ ಅಧ್ಯಯನ ಮಾಡಿದ್ದೇನೆ.
ಅಂಬಾದಾಸ ಕಾಂಬಳೆ ಸಾಧಕ

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

16 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

18 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

1 day ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

1 day ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

2 days ago