ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ರಟಕಲ್ ನ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದ ರೈತರೊಬ್ಬರ ಖಾತೆಯಿಂದ ಬರೋಬ್ಬರಿ 28 ಸಾವಿರ ರೂಪಾಯಿ ಏಕಾಏಕಿಯಾಗಿ ಮಂಗಾಮಾಯವಾಗಿದೆ.
ಹೌದು, ರೈತರಿಗೆ ಬೆಟ್ಟದಷ್ಟು ಭರವಸೆಗಳನ್ನು ಕೊಟ್ಟು ಕನಿಷ್ಠ ಪಕ್ಷ ಒಂದನ್ನೂ ಕೂಡ ಈಡೇರಿಸಲಾಗದೆ ರೈತರು ದಿನನಿತ್ಯ ಪರದಾಡುವಂಥಾ ಸ್ಥಿತಿಯಲ್ಲಿದ್ದಾರೆ. ದೇಶದಲ್ಲಿನ ರೈತರು ಬೇರೆ ವಿಧಿಯಲ್ಲಿದೆ ಸಾವಿಗೆ ಕೊರಳೊಡ್ಡುತ್ತಿರುವುದು ದಿನ ಬೆಳಗಾದರೆ ಸಿಗುವ ಬಿಸಿ ಬಿಸಿ ಸುದ್ದಿ. ಈ ತನ್ಮಧ್ಯೆ ಕೆಲ ರೈತರು ಮತ್ತೆ ಮತ್ತೆ ಸಾಲ ಮಾಡಿಕೊಂಡು ಫಸಲು ತೆಗೆಯುವ ಅಗ್ನಿ ಪರೀಕ್ಷೆಗೆ ಕೈ ಹಾಕುತ್ತಿದ್ದಾರೆ.
ಹೀಗಿರುವಾಗಲೇ ಕಲಬುರ್ಗಿ ಜಿಲ್ಲೆಯಲ್ಲಿನ ರೈತರೊಬ್ಬರ ಬ್ಯಾಂಕ್ ಖಾತೆಯಿಂದ ಸುಮಾರು 28,500 ರೂ. ಕಾಣೆಯಾಗಿದೆ. ಈ ಬಗ್ಗೆ ಹಣ ಕಳೆದುಕೊಂಡ ರೈತ ಖುದ್ದಾಗಿ ಬ್ಯಾಂಕ್ ವ್ಯವಸ್ಥಾಪಕರನ್ನ ಭೇಟಿಯಾಗಿ ಮಾಹಿತಿ ಪಡೆದಾಗ ಅಚ್ಚರಿಯ ಮಾಹಿತಿ ಬಯಲಾಗಿದೆ. ಅಂದಹಾಗೆ ತಿಪ್ಪಣ್ಣ ಶರಣಪ್ಪ ತಾಳಮದ್ರಗಿ ಹಣ ಕಳೆದುಕೊಂಡ ರೈತ.
ತಿಪ್ಪಣ್ಣ, ಡಿಸೆಂಬರ್ 29ರಂದು ಮೂರು ಬಾರಿಯಾಗಿ ತನ್ನ ಖಾತೆಯಿಂದ ಹಣ ವಿತ್ ಡ್ರಾ ಆಗಿದೆ ಎಂದು ಬ್ಯಾಂಕ್ ಮ್ಯಾನೇಜರ್ ಗೆ ದೂರು ನೀಡಿದ್ದಾರೆ. ಈ ಬಗ್ಗೆ ತಕ್ಷಣ ಪರೀಶಲನೆ ನಡೆಸಿದ ಬ್ಯಾಂಕ್ ವ್ಯಪಸ್ಥಾಪಕರು, ಖಾತೆಯಿಂದ ಹಣ ಯಾರು ಪಡೆದಿದ್ದಾರೆ ಎಂಬ ಮಾಹಿತಿಯನ್ನ ಕಲೆ ಹಾಕಿದ್ದಾರೆ. ಬ್ಯಾಂಕ್ ಮ್ಯಾನೇಜರ್ ಹೇಳುವ ಹಾಗೆ, ನಕಲಿ ಆಧಾರ್ ಕಾರ್ಡ್ ನಂಬರ್ ಬಳಸಿಕೊಂಡು ಹಣ ವಿತ್ ಡ್ರಾ ಮಾಡಲಾಗಿದೆ ಎಂದಿದ್ದಾರೆ. ಇದು ಈಗ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಈ ವೇಳೆ ಮಾತನಾಡಿದ ಶರಣಬಸಪ್ಪ, ” ಈ ಬ್ಯಾಂಕ್ ನಲ್ಲಿ ಹಣಕಾಸಿನ ವ್ಯವಹಾರವನ್ನ ಬ್ಯಾಂಕ್ ಸಿಬ್ಬಂದಿಗಳು ಖಾಸಗಿ ವ್ಯವಹಾರದ ರೀತಿಯಲ್ಲಿ ಮಾಡಿಕೊಂಡ ಬರುತ್ತಿದ್ದಾರೆ. ಬ್ರೋಕರ್ ಸಹಾಯದಿಂದ ರೈತರಿಗೆ ಇಲ್ಲಿ ಮೋಸ ಮಾಡಲಾಗುತ್ತಿದೆ. ಸಾಲ ಕೇಳಲು ಬರುವ ರೈತರ ಮೇಲೆ ಸಿಬ್ಬಂದಿಗಳು ದರ್ಪ ತೋರಿಸಿ, ಅರಾಜಕತೆ ನಡೆಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಮೋದಿ ಸರ್ಕಾರ ಆಧಾರ್ ಕಾರ್ಡ್ ಜಾರಿಗೆ ತರುವಾಗ ಇದು ಜನಸಾಮಾನ್ಯನ ನೆಮ್ಮದಿಯ ನಾಳೆಗೆ ಎಂಬ ಮಾತನ್ನ ಹೇಳಿತ್ತು. ಆದರೆ ಈ ಘಟನೆ ಆಧಾರ್ ಕಾರ್ಡ್ ಎಂಬ ನೀತಿ ಜನ ಸಾಮಾನ್ಯರ ಹಾಗೂ ರೈತರ ನೆಮ್ಮದಿಯನ್ನ ಕಸಿದುಕೊಂಡಿರೋದಕ್ಕೆ ಸಾಕ್ಷಿ. ನೋಟು ರದ್ದತಿಯ ಬಳಿಕ ದೇಶದಲ್ಲಿ ಹಣದುಬ್ಬರ ಉಂಟಾಗಿದ್ದು, ಶೇರು ಮಾರುಕಟ್ಟೆ ಹಾಗೂ ಕೈಗಾರಿಕ ವಲಯದಲ್ಲಿ ದೊಡ್ಡ ಮಟ್ಟದ ನಷ್ಟಗಳು ಉಂಟಾಗಿದೆ.
ನಿರುದ್ಯೋಗ ಕೂಡ ಮಿತಿ ಮೀರಿದೆ.ಇಂಥಾ ಸಮಯದಲ್ಲಿ ರೈತರು ಕೂಡಿಡೋ ಆರು ಕಾಸು ಮೂರು ಕಾಸು ರೂಪಾಯಿಗೂ ಈ ರೀತಿ ಕನ್ನ ಹಾಕೋದು ಮತ್ತೊಂದ ದುರಂತಕ್ಕಿರುವ ಮುನ್ನುಡಿ. ಈ ಬಗ್ಗೆ ಈಗ ಕಲಬುರ್ಗಿ ಪ್ರಾಂತ್ಯ ರೈತ ಸಂಘ ಮಧ್ಯ ಪ್ರವೇಶಿಸಿದ್ದು, ಸಂಪೂರ್ಣ ತನಿಖೆಗಾಗಿ ಆಗ್ರಹಿಸಿದ್ದಾರೆ. ಇದೇ ವೇಳೆ ಮೋದಿ ಸರ್ಕಾರದ ವಿರುದ್ಧ ರೈತರು ಕಿಡಿಕಾರಿದ್ದಾರೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…