ರಾತ್ರೋ ರಾತ್ರಿ ಖಾತೆಯಿಂದ ಹಣ ಮಂಗಮಾಯ : ಬೆಚ್ಚಿ ಬಿದ್ದ ಬಡ ರೈತ

0
1047
  • ವರದಿ : ಸಾಜಿದ್ ಅಲಿ

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ರಟಕಲ್ ನ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದ ರೈತರೊಬ್ಬರ ಖಾತೆಯಿಂದ ಬರೋಬ್ಬರಿ 28 ಸಾವಿರ ರೂಪಾಯಿ ಏಕಾಏಕಿಯಾಗಿ ಮಂಗಾಮಾಯವಾಗಿದೆ.

ಹೌದು, ರೈತರಿಗೆ ಬೆಟ್ಟದಷ್ಟು ಭರವಸೆಗಳನ್ನು ಕೊಟ್ಟು ಕನಿಷ್ಠ ಪಕ್ಷ ಒಂದನ್ನೂ ಕೂಡ ಈಡೇರಿಸಲಾಗದೆ ರೈತರು ದಿನನಿತ್ಯ ಪರದಾಡುವಂಥಾ ಸ್ಥಿತಿಯಲ್ಲಿದ್ದಾರೆ. ದೇಶದಲ್ಲಿನ ರೈತರು ಬೇರೆ ವಿಧಿಯಲ್ಲಿದೆ ಸಾವಿಗೆ ಕೊರಳೊಡ್ಡುತ್ತಿರುವುದು ದಿನ ಬೆಳಗಾದರೆ ಸಿಗುವ ಬಿಸಿ ಬಿಸಿ ಸುದ್ದಿ. ಈ ತನ್ಮಧ್ಯೆ ಕೆಲ ರೈತರು ಮತ್ತೆ ಮತ್ತೆ ಸಾಲ ಮಾಡಿಕೊಂಡು ಫಸಲು ತೆಗೆಯುವ ಅಗ್ನಿ ಪರೀಕ್ಷೆಗೆ ಕೈ ಹಾಕುತ್ತಿದ್ದಾರೆ.

Contact Your\'s Advertisement; 9902492681

ಹೀಗಿರುವಾಗಲೇ ಕಲಬುರ್ಗಿ ಜಿಲ್ಲೆಯಲ್ಲಿನ ರೈತರೊಬ್ಬರ ಬ್ಯಾಂಕ್ ಖಾತೆಯಿಂದ ಸುಮಾರು 28,500 ರೂ.‌ ಕಾಣೆಯಾಗಿದೆ. ಈ ಬಗ್ಗೆ ಹಣ ಕಳೆದುಕೊಂಡ ರೈತ ಖುದ್ದಾಗಿ ಬ್ಯಾಂಕ್ ವ್ಯವಸ್ಥಾಪಕರನ್ನ ಭೇಟಿಯಾಗಿ ಮಾಹಿತಿ ಪಡೆದಾಗ ಅಚ್ಚರಿಯ ಮಾಹಿತಿ ಬಯಲಾಗಿದೆ. ಅಂದಹಾಗೆ ತಿಪ್ಪಣ್ಣ ಶರಣಪ್ಪ ತಾಳಮದ್ರಗಿ ಹಣ ಕಳೆದುಕೊಂಡ ರೈತ.

ತಿಪ್ಪಣ್ಣ, ಡಿಸೆಂಬರ್ 29ರಂದು ಮೂರು ಬಾರಿಯಾಗಿ ತನ್ನ ಖಾತೆಯಿಂದ ಹಣ ವಿತ್ ಡ್ರಾ ಆಗಿದೆ ಎಂದು ಬ್ಯಾಂಕ್ ಮ್ಯಾನೇಜರ್ ಗೆ ದೂರು ನೀಡಿದ್ದಾರೆ.‌ ಈ ಬಗ್ಗೆ ತಕ್ಷಣ ಪರೀಶಲನೆ‌ ನಡೆಸಿದ ಬ್ಯಾಂಕ್ ವ್ಯಪಸ್ಥಾಪಕರು, ಖಾತೆಯಿಂದ ಹಣ ಯಾರು ಪಡೆದಿದ್ದಾರೆ ಎಂಬ ಮಾಹಿತಿಯನ್ನ ಕಲೆ ಹಾಕಿದ್ದಾರೆ. ಬ್ಯಾಂಕ್ ಮ್ಯಾನೇಜರ್ ಹೇಳುವ ಹಾಗೆ, ನಕಲಿ ಆಧಾರ್ ಕಾರ್ಡ್ ನಂಬರ್ ಬಳಸಿಕೊಂಡು ಹಣ ವಿತ್ ಡ್ರಾ ಮಾಡಲಾಗಿದೆ ಎಂದಿದ್ದಾರೆ. ಇದು ಈಗ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಈ ಬಗ್ಗೆ ಸ್ಥಳೀಯ ರೈತ ಸಂಘಟನೆಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಇದು ಬ್ಯಾಂಕ್ ಮ್ಯಾನೇಜರ್ ನಿರ್ಲಕ್ಷ್ಯ ಎಂದು ಆರೋಪಿಸಿ ಬ್ಯಾಂಕ್ ಮುಂದೆ ಪ್ರತಿಭಟಿಸಿದ್ದಾರೆ. ಅಲ್ಲ ಇದೇ ವೇಳೆ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಮೇಲೆ ಸ್ಥಳೀಯ ರೈತರು ಇದೇ ಮಾದರಿಯ ಆರೋಪಗಳನ್ನ ಮಾಡಿದ್ದಾರೆ. ಇನ್ನು ನ್ಯಾಯ ಒದಗಿಸಿ ಕೊಡದೆ ಹೋದರೆ ಉಗ್ರ ಹೋರಾಟ ಮಾಡೋ ಎಚ್ಚರಿಕೆಯನ್ನ ಸ್ಥಳೀಯ ರೈತ ಮುಖಂಡ ಶರಣಬಸಪ್ಪ ಮಮಶೇಟಿ ತಿಳಿಸಿದ್ದಾರೆ.

ಈ ವೇಳೆ ಮಾತನಾಡಿದ ಶರಣಬಸಪ್ಪ, ” ಈ ಬ್ಯಾಂಕ್ ನಲ್ಲಿ ಹಣಕಾಸಿನ ವ್ಯವಹಾರವನ್ನ ಬ್ಯಾಂಕ್ ಸಿಬ್ಬಂದಿಗಳು ಖಾಸಗಿ ವ್ಯವಹಾರದ ರೀತಿಯಲ್ಲಿ ಮಾಡಿಕೊಂಡ ಬರುತ್ತಿದ್ದಾರೆ. ಬ್ರೋಕರ್ ಸಹಾಯದಿಂದ ರೈತರಿಗೆ ಇಲ್ಲಿ ಮೋಸ ಮಾಡಲಾಗುತ್ತಿದೆ. ಸಾಲ ಕೇಳಲು ಬರುವ ರೈತರ ಮೇಲೆ ಸಿಬ್ಬಂದಿಗಳು ದರ್ಪ ತೋರಿಸಿ, ಅರಾಜಕತೆ ನಡೆಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ಮೋದಿ ಸರ್ಕಾರ ಆಧಾರ್ ಕಾರ್ಡ್ ಜಾರಿಗೆ ತರುವಾಗ ಇದು ಜನಸಾಮಾನ್ಯನ ನೆಮ್ಮದಿಯ ನಾಳೆಗೆ ಎಂಬ ಮಾತನ್ನ ಹೇಳಿತ್ತು. ಆದರೆ ಈ ಘಟನೆ ಆಧಾರ್ ಕಾರ್ಡ್ ಎಂಬ ನೀತಿ ಜನ ಸಾಮಾನ್ಯರ ಹಾಗೂ ರೈತರ ನೆಮ್ಮದಿಯನ್ನ ಕಸಿದುಕೊಂಡಿರೋದಕ್ಕೆ ಸಾಕ್ಷಿ. ನೋಟು ರದ್ದತಿಯ ಬಳಿಕ ದೇಶದಲ್ಲಿ ಹಣದುಬ್ಬರ ಉಂಟಾಗಿದ್ದು, ಶೇರು ಮಾರುಕಟ್ಟೆ ಹಾಗೂ ಕೈಗಾರಿಕ ವಲಯದಲ್ಲಿ ದೊಡ್ಡ ಮಟ್ಟದ ನಷ್ಟಗಳು ಉಂಟಾಗಿದೆ.

ನಿರುದ್ಯೋಗ ಕೂಡ ಮಿತಿ‌ ಮೀರಿದೆ.‌ಇಂಥಾ ಸಮಯದಲ್ಲಿ ರೈತರು ಕೂಡಿಡೋ ಆರು ಕಾಸು ಮೂರು ಕಾಸು ರೂಪಾಯಿಗೂ ಈ ರೀತಿ ಕನ್ನ ಹಾಕೋದು ಮತ್ತೊಂದ ದುರಂತಕ್ಕಿರುವ ಮುನ್ನುಡಿ. ಈ ಬಗ್ಗೆ ಈಗ ಕಲಬುರ್ಗಿ ಪ್ರಾಂತ್ಯ ರೈತ ಸಂಘ ಮಧ್ಯ ಪ್ರವೇಶಿಸಿದ್ದು, ಸಂಪೂರ್ಣ ತನಿಖೆಗಾಗಿ ಆಗ್ರಹಿಸಿದ್ದಾರೆ. ಇದೇ ವೇಳೆ ಮೋದಿ ಸರ್ಕಾರದ ವಿರುದ್ಧ ರೈತರು ಕಿಡಿಕಾರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here