ಕಲಬುರಗಿ: ಬದುಕಿನಲ್ಲಿ ಸಂಭವಿಸುವ ಅನಿರೀಕ್ಷಿತ ಘಟನೆಗಳಿಂದಾಗಿ ಅದೆಂಥದೋ ಕಾರಣಕ್ಕೆ ಮುನುಷ್ಯ ತಪ್ಪು ಮಾಡುತ್ತಾನೆ. ಅದಕ್ಕೆ ತಕ್ಕ ಸಿಕ್ಷೆ ಅನುಭವಿಸುವ ಮೂಲಕ ಜೈಲುವಾಸದಿಂದ ಹೊರ ಬಂದು ಹೊಸ ಜೀವನ ಶುರು ಮಾಡಬೆಕು ಎಂದು ಮುಗಳನಾಗಾವಿ ಕಟ್ಟಿಮನಿ ಸಂಸ್ಥಾನ ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ನುಡಿದರು.
ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿ ಜಿ-೯೯ ಮತ್ತು ಜಿ-೫೫ ಮಿತ್ರ ಮಂಡಳಿಯ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಮನಃ ಪರಿವರ್ತನಾ ಹಾಗೂ ಸಂಗೀತ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವಿವಿಧ ಕಾರಣಗಳಿಂದ ಜೈಲು ಸೇರಿದ ಕಾರಾಗೃಹವಾಸಿಗಳಿಗೂ ಮನಸ್ಸಿರುತ್ತದೆ. ಅವರ ಮನಃಪರಿವರ್ತನೆಯಾಗಲಿ ಅವರಿಗೂ ಮನರಂಜನೆ ದೊರೆಯಲಿ ಎಂಬ ದೃಷ್ಟಿಯಿಂದ ಮಿತ್ರ ಮಂಡಳಿ ಆಯೋಜಿಸಿರುವ ಈ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ ಎಂದು ಅವರು ಬಣ್ಣಿಸಿದರು.
ಕೇಂದ್ರ ಕಾರಾಗೃಹ ಅಧೀಕ್ಷಕ ಐ.ಜೆ. ಮ್ಯಾಗೇರಿ ಅಧ್ಯಕ್ಷತೆ ವಹಿಸಿದ್ದರು. ಸೇಂಟ್ ಮೇರಿ ಚರ್ಚ್‌ನ ಪಾಧರ್ ರೋಷನ್ ಡಿಸೋಜ, ಏಷಿಯನ್ ಬಿಲ್ಡರ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆರೀಫ್ ಅಲಿ ಮನಿಯಾರ್, ಸಿಖ್ ಸಮುದಾಯದ ಮುಖಂಡ ಗುರುಮೀತ್‌ಸಿಂಗ್, ದಲಿತ ಮುಖಂಡ ಪ್ರಕಾಶ ಅವರಾದಕರ್, ಜಿ-೫೫ ನಿರ್ದೇಶಕ ಚನ್ನಬಸಪ್ಪ ಖಂಡೇರಾವ, ಜಿ-೯೯ ನಿರ್ದೇಶಕ ರಮೇಶ ಸ್ವಾಮಿ ಅತಿಥಿಗಳಾಗಿ ಆಗಮಿಸಿದ್ದರು.
ಮಿತ್ರ ಮಂಡಳಿಯ ಮುಖ್ಯಸ್ಥ ಶರಣು ಪಪ್ಪಾ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. ಬಸವರಾಜ ಕಿರಣಗಿ, ಪಶಾಂಡು ಕೋಬಾಳ ಇತರರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…