ಜೈಲು ಹಕ್ಕಿಗಳಿಗೂ ಮನಸ್ಸಿದೆ: ಮುಗಳನಾಗಾವಿ ಅಭಿನವ ಸಿದ್ಧಲಿಂಗಶ್ರೀ

0
138

ಕಲಬುರಗಿ: ಬದುಕಿನಲ್ಲಿ ಸಂಭವಿಸುವ ಅನಿರೀಕ್ಷಿತ ಘಟನೆಗಳಿಂದಾಗಿ ಅದೆಂಥದೋ ಕಾರಣಕ್ಕೆ ಮುನುಷ್ಯ ತಪ್ಪು ಮಾಡುತ್ತಾನೆ. ಅದಕ್ಕೆ ತಕ್ಕ ಸಿಕ್ಷೆ ಅನುಭವಿಸುವ ಮೂಲಕ ಜೈಲುವಾಸದಿಂದ ಹೊರ ಬಂದು ಹೊಸ ಜೀವನ ಶುರು ಮಾಡಬೆಕು ಎಂದು ಮುಗಳನಾಗಾವಿ ಕಟ್ಟಿಮನಿ ಸಂಸ್ಥಾನ ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ನುಡಿದರು.

ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿ ಜಿ-೯೯ ಮತ್ತು ಜಿ-೫೫ ಮಿತ್ರ ಮಂಡಳಿಯ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಮನಃ ಪರಿವರ್ತನಾ ಹಾಗೂ ಸಂಗೀತ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವಿವಿಧ ಕಾರಣಗಳಿಂದ ಜೈಲು ಸೇರಿದ ಕಾರಾಗೃಹವಾಸಿಗಳಿಗೂ ಮನಸ್ಸಿರುತ್ತದೆ. ಅವರ ಮನಃಪರಿವರ್ತನೆಯಾಗಲಿ ಅವರಿಗೂ ಮನರಂಜನೆ ದೊರೆಯಲಿ ಎಂಬ ದೃಷ್ಟಿಯಿಂದ ಮಿತ್ರ ಮಂಡಳಿ ಆಯೋಜಿಸಿರುವ ಈ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ ಎಂದು ಅವರು ಬಣ್ಣಿಸಿದರು.

Contact Your\'s Advertisement; 9902492681

ಕೇಂದ್ರ ಕಾರಾಗೃಹ ಅಧೀಕ್ಷಕ ಐ.ಜೆ. ಮ್ಯಾಗೇರಿ ಅಧ್ಯಕ್ಷತೆ ವಹಿಸಿದ್ದರು. ಸೇಂಟ್ ಮೇರಿ ಚರ್ಚ್‌ನ ಪಾಧರ್ ರೋಷನ್ ಡಿಸೋಜ, ಏಷಿಯನ್ ಬಿಲ್ಡರ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆರೀಫ್ ಅಲಿ ಮನಿಯಾರ್, ಸಿಖ್ ಸಮುದಾಯದ ಮುಖಂಡ ಗುರುಮೀತ್‌ಸಿಂಗ್, ದಲಿತ ಮುಖಂಡ ಪ್ರಕಾಶ ಅವರಾದಕರ್, ಜಿ-೫೫ ನಿರ್ದೇಶಕ ಚನ್ನಬಸಪ್ಪ ಖಂಡೇರಾವ, ಜಿ-೯೯ ನಿರ್ದೇಶಕ ರಮೇಶ ಸ್ವಾಮಿ ಅತಿಥಿಗಳಾಗಿ ಆಗಮಿಸಿದ್ದರು.
ಮಿತ್ರ ಮಂಡಳಿಯ ಮುಖ್ಯಸ್ಥ ಶರಣು ಪಪ್ಪಾ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. ಬಸವರಾಜ ಕಿರಣಗಿ, ಪಶಾಂಡು ಕೋಬಾಳ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here