ಬಿಸಿ ಬಿಸಿ ಸುದ್ದಿ

ಎಡ-ಬಲ ಪಂಥಕ್ಕಿಂತ ಮನುಷ್ಯ ಪಂಥ ಬಹಳ ಮುಖ್ಯ: ಡಾ. ಎಚ್.ಟಿ. ಪೋತೆ

ಕಲಬುರಗಿ: ಇಡೀ ನಾಡಿಗೆ ಕಲ್ಯಾಣ ಕರ್ನಾಟಕ ಭಾಗದ ಕೊಡುಗೆ ಅಪಾರವಾಗಿದೆ ಗುಲ್ಬರ್ಗ ವಿವಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ. ಎಚ್.ಟಿ. ಪೋತೆ ಅಭಿಪ್ರಾಯಪಟ್ಟರು.

ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ, ಬೀದರ್ ನ ಸಿದ್ದೇಶ್ವರ ಪ್ರಕಾಶನದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಲೇಖಕಿ ಪ್ರೇಮಾ ಹೂಗಾರ ಅವರ ಗಜಲ್ ಬಂಧ ಹಾಗೂ ಹಾಯ್ಕುಗಳು ಎರಡು ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಗಜಲ್ ಮತ್ತು ಹಾಯ್ಕುಗಳು ಭಾರತದ ಜಾಯಮಾನದವಲ್ಲ. ಆದರೆ ಈ ಭಾಗದ ಜನರು ಆ ಪ್ರಕಾರಗಳನ್ನು ಬರೆಯುವ ಮೂಲಕ ಅವುಗಳು ಕೂಡ ನಮ್ಮದೇ ಭಾಗವಾಗಿ ಬೆಳೆದಿರುವುದು ಸಂತೋಷದ ವಿಷಯ ಎಂದರು.

ಅನಕ್ಷರತೆ, ಅಸ್ಪೃಷ್ಯತೆ, ಅಜ್ಞಾನ ಭಾರತದ ಇಂದಿನ ಸಮಾಜಕ್ಕೆ ಅಪಾಯಕಾರಿಯಾಗಿದ್ದು, ಈ ಮೂರರ ಮೂಲೋತ್ಪಾಟನೆ ಮಾಡಬೇಕಾಗಿರುವುದು ಇಂದಿನ ಅಗತ್ಯವಾಗಿದೆ ಎಂದು ವಿವರಿಸಿದರು.

ಪ್ರೇಮ-ಪ್ರೀತಿ ಎನ್ನುವುದು ಪ್ರಣಯವನ್ನು ಮೀರಿದ್ದಾಗಿರಬೇಕು. ಪ್ರಣಯವೇ ಪ್ರಧಾನವಾಗಿರಬಾರದು. ಪ್ರೀತಿ-ಪ್ರೇಮ ಸೀಮಾತೀತ. ಇದೊಂದು ವಿಶಿಷ್ಟ ಸಂಸ್ಕೃತಿ. ಕವಿ, ಲೇಖಕ, ಸಾಹಿತಿಗಳಿಗೆ ಜವಾಬ್ದಾರಿ ಇರಬೇಕು ಎಂದು ತಿಳಿಸಿದರು.

ಕುವೆಂಪು ಅವರು ಸಾಕಷ್ಟು ಸಮಸ್ಯೆ-ಸವಾಲುಗಳನ್ನು ಎದುರಿಸಿ ಅವುಗಳನ್ನು ಸಮರ್ಥವಾಗಿ ಎದುರಿಸಿದರು. ಇಂದಿನ ಯುವ ಲೇಖಕರ ಎದುರಿಗೆ ಅನೇಕ ಸವಾಲುಗಳಿವೆ. ಸಾಂಪ್ರದಾಯಿಕತೆಯನ್ನು ಮೀರಿ ಬೆಳೆಯಬೇಕು. ಜಾತಿ ಸಂಕೊಲೆಗಳನ್ನು ಮೀರಿ ಸಮಾಜಮುಖಿಯಾಗಿ ಬೆಳೆಯಬೇಕು. ಎಡ ಬಲ ಯಾವುದೇ ಪಂಥದವರಾಗಿರದೆ, ಮನುಷ್ಯ ಪಂಥೀಯನಾಗುವ ಕಡೆ ಆಲೋಚಿಸುವುದು ಇಂದಿನ ತುರ್ತಾಗಿದೆ ಎಂದು ಹೇಳಿದರು.

“ಗಜಲ್ ಬಂಧ” ಕುರಿತು ಸಿಯುಕೆ ಕನ್ನಡ ಪ್ರಾಧ್ಯಾಪಕ ಡಾ. ಅಪ್ಪಗೆರೆ ಸೋಮಶೇಖರ, “ಹಾಯ್ಕುಗಳು” ಕುರಿತು ಪತ್ರಕರ್ತ-ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಮಾತನಾಡಿದರು.

ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಬೀದರ್ ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ, ಪ್ರತಿಷ್ಠಾನದ ಅಧ್ಯಕ್ಷ ಬಿ.ಎಚ್. ನಿರಗುಡಿ, ಲೇಖಕಿ ಪ್ರೇಮಾ ಹೂಗಾರ ವೇದಿಕೆಯಲ್ಲಿದ್ದರು. ಡಾ. ಶರಣಬಸಪ್ಪ ವಡ್ಡನಕೇರಿ ನಿರೂಪಿಸಿದರು.

ಚಾಮರಾಜ ದೊಡ್ಡಮನಿ, ಪಿ.ಎಂ. ಮಣ್ಣೂರ, ಕಾಶಿನಾಥ ಅಂಬಲಗೆ, ಡಾ.‌ಸುಜಾತಾ ಜಂಗಮಶೆಟ್ಟಿ, ಜ್ಯೋತಿ ಡಿ. ಬೊಮ್ಮಾ, ಶಾಂತಾ ಪಸ್ತಾಪುರ, ಎಸ್. ಪಿ. ಸುಳ್ಳದ, ಪ್ರಭಾಕರ ಸಾತಖೇಡ ಇತರರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

13 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

23 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

23 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

23 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago