ಕಲಬುರಗಿ: ಇದೀಗ ಎಲ್ಲರೂ ಹತ್ತನೇಯ ತರಗತಿಯ ಫಲಿತಾಂಶ ಹೆಚ್ಚಳವಾಗಬೇಕೆಂದು ಬಯಸುತ್ತಿದ್ದಾರೆ. ಎಲ್ಲರ ಚಿತ್ತ ಹತ್ತನೇಯ ಮಕ್ಕಳ ಫಲಿತಾಂಶದ ಇದೆ. ಈ ಸುಧಾರಣೆಯು ಬರಿ ಶಾಲೆಯ ಮಟ್ಟದಲ್ಲಿ ನಡೆದರೆ ಅದು ಸಾಲುವುದಿಲ್ಲ ಅದು ಸಮುದಾಯ ಮಟ್ಟದಲ್ಲಿಯೂ ಆಗಬೇಕು ಅಂತಹ ಕಾರ್ಯಕ್ಕೆ ದಿ ಪ್ರಜ್ಞಾ ಇನ್ಸ್ ಟ್ಯೂಟ್ ಆಫ್ ಲರ್ನಿಂಗ ಹಾಗೂ ಚಾಮ್ಸ್ ಮೈಂಡ್ ಪಾವರ್ ಸಲ್ಯೂಷನ್ ವತಿಯಿಂದ ಕೌನ ಬನೇಗಾ ಜ್ಞಾನಪತಿ ಕಾರ್ಯಕ್ರಮದ ಮೂಲಕ ವಿಶ್ವನಾಥ ಅವರ ತಂಡ ಮಾಡುತ್ತಿದೆ ಎಂದು ಜಿಲ್ಲಾ ಪಂಚಾಯತ್‌ನ ವಿರೋಧ ಪಕ್ಷದ ನಾಯಕರಾದ ಶಿವಾನಂದ ಪಾಟೀಲ ಮರತೂರ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಇಂದು ನಡೆದ ಕೌನ ಬನೇಗಾ ಜ್ಞಾನಪತಿ ಕಾರ್ಯಕ್ರಮದ ಐದನೆ ಸಂಚಿಕೆಯಲ್ಲಿ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಇಂದಿನ ಮಕ್ಕಳಿಗೆ ಸ್ಪರ್ಧಾತ್ಮಕವಾದ ವಾತಾವರಣ ಕೊಡಬೇಕು. ಟಿವಿಗಳಲ್ಲಿ ನಡೆಯುವಂತಹ ಕಾರ್ಯಕ್ರಮಗಳು ನಮ್ಮ ಗ್ರಾಮೀಣ ಮಕ್ಕಳ ಸಿಗುವುದು ಬಹಳ ಕಡಿಮೆ. ಬೆಳೆಯುತ್ತಿರುವ ಜಗತ್ತಿಗೆ ನಮ್ಮ ಭಾಗದ ವಿಧ್ಯಾರ್ಥಿಗಳನ್ನು ತಯಾರಿಗೊಳಿಸುವ ಕೆಲಸ ಈ ಕಾರ್ಯಕ್ರಮ ಮಾಡುತ್ತಿದೆ. ಮಕ್ಕಳಲ್ಲಿ ಪರೀಕ್ಷೆಯ ಬಗ್ಗೆ ಧೈರ್ಯ ತುಂಬುವ ಕೆಲಸ ಈ ಕಾರ್ಯಕ್ರಮದಿಂದ ಸಾಧ್ಯವಾಗುತ್ತಿದೆ. ನಮ್ಮ ಕಲ್ಯಾಣ ಕರ್ನಾಟಕದ ಮಕ್ಕಳಿಗೆ ವಿಶಿಷ್ಠರೀತಿಯ ಅನುಭವ ನೀಡುತ್ತಿರುವುದು ಕೌನ ಬನೇಗಾ ಜ್ಞಾನಪತಿ ಕಾರ್ಯಕ್ರಮ ಇಂತಹ ಕಾರ್ಯಕ್ರಮದಲ್ಲಿ ನಮ್ಮ ಸಹಕಾರ ಯಾವತ್ತಿಗೂ ಇರುತ್ತದೆ ಎಂದು ಆಶ್ವಾಸನೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೆ.ಎಂ.ವಿಶ್ವನಾಥ ಮರತೂರ ಅವರು ಹತ್ತನೇಯ ತರಗತಿಯ ಫಲಿತಾಂಶ ಸುಧಾರಣೆ ಮಾಡುವುದೆಂದರೆ ಬರಿ ಶಿಕ್ಷಣ ಇಲಾಖೆ ಮಾಡುವುದಲ್ಲ ಅವರ ಜೊತೆಗೆ ಪ್ರಜ್ಞಾವಂತ ನಾಗರಿಕರು ಕೈಜೋಡಿಸಬೇಕು. ಹತ್ತನೆಯ ತರಗತಿಯ ಬಗ್ಗೆ ಜ್ಞಾನವಿರುವ ಎಲ್ಲರೂ ಕೈಜೋಡಿಸಬೇಕು. ಪಾಲಕರು ಕೂಡ ಮನೆಯಲ್ಲಿ ಮಕ್ಕಳಿಗೆ ಹೇಳಿಕೊಡಬೇಕು. ಸಮಾಜದಲ್ಲಿರುವ ಎಲ್ಲರೂ ಈ ಫಲಿತಾಂಶ ಸುಧಾರಣೆಗಾಗಿ ಕೆಲಸ ಮಾಡುವ ಅಗತ್ಯವಿದೆ. ಕಲ್ಯಾಣ ಕರ್ನಾಟಕದಲ್ಲಿ ಪ್ರಾರಂಭವಾಗಿರುವ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗುತ್ತಿದ್ದು ತನ್ನ ಐದನೇ ಸಂಚಿಕೆಯಲ್ಲಿ ಮತ್ತಷ್ಟು ಹೊಸತನದೊಂದಿಗೆ ಮುನ್ನುಗ್ಗುತ್ತಿದೆ. ಈ ಕಾರ್ಯಕ್ರಮದ ಮೂಲಕ ಇಲ್ಲಿಯವರೆಗೂ ೧೦೦೭ ಮಕ್ಕಳಿಗೆ ನೇರವಾದ ಪರೀಕ್ಷಾ ಮಾಹಿತಿಯ ಅನುಭವಗಳನ್ನು ನೀಡಿದ್ದು ಕಾರ್ಯಕ್ರಮದ ಹೆಮ್ಮೆಯಾಗಿದೆ. ನಮ್ಮ ಮಕ್ಕಳಿಗೆ ತರಗತಿ ಕೋಣೆಗಿಂತ ವಿಭಿನ್ನವಾದ ಅನುಭವ ನೀಡುವಲ್ಲಿ ಪ್ರಯತ್ನಿಸುತ್ತಿದ್ದೇವೆ. ಮಕ್ಕಳಲ್ಲಿ ಸೃಜನಾತ್ಮಕತೆಯ ಜೊತೆಗೆ ಸಭಾ ಕಂಪನ ಹೋಗಲಾಡಿಸುವ ಕೆಲಸ ಈ ಕಾರ್ಯಕ್ರಮ ಮಾಡುತ್ತಿದೆ. ಬದಲಾದ ಪರೀಕ್ಷಾ ನಿಯಮಗಳನ್ನು ಕಲಿಸುತ್ತಿದ್ದೇವೆ. ಪರೀಕ್ಷೆಯ ಭಯ ಹೋಗಲಾಡಿಸುವ ಪ್ರಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಇನ್ನಷ್ಟು ಸೃಜನಾತ್ಮಕ ಮನಸ್ಸುಗಳು ಕೈಜೋಡಿಸಿದರೆ ನಾವು ಇನ್ನು ಹೆಚ್ಚು ಮಕ್ಕಳಿಗೆ ತಲುಪುವ ಪ್ರಯತ್ನ ಮಾಡಲಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಣ ಪ್ರೇಮಿಗಳಾದ ಅಜೀತಕುಮಾರ ಅವರು ಶಿಕ್ಷಣ ಇಂದು ಅತ್ಯಂತ ದೊಡ್ಡ ರೀತಿಯಲ್ಲಿ ಬೆಳೆಯುತ್ತಿರುವ ಮಾಧ್ಯಮ ಅದರಲ್ಲಿಯೂ ಸ್ಪರ್ಧಾತ್ಮಕವಾದ ರೀತಿಯಲ್ಲಿ ಮಕ್ಕಳಿಗೆ ಬೆಳೆಸಬೇಕು. ಇಂದಿನ ಮಕ್ಕಳು ನಮ್ಮ ಭಾಗದ ವಿಧ್ಯಾರ್ಥಿಗಳ ಮಾನಸಿಕ ಮತ್ತು ಸ್ಪರ್ಧಾತ್ಮಕವಾಗಿ ಈ ಕಾರ್ಯಕ್ರಮ ಬೆಳೆಸುತ್ತಿದೆ. ವಿಶ್ವನಾಥ ಗೆಳೆಯರ ಕಾರ್ಯಕ್ರಮ ಪ್ರಶಂಸನೀಯವಾಗಿದೆ ಎಂದರು.
ಇನ್ನೋರ್ವ ಅಥಿತಿಗಳಾದ ಎ.ಪಿ.ಎಂ.ಸಿ. ಸದಸ್ಯರಾದ ಸಿದ್ದುಗೌಡ ಅಫಜಲಪೂರ ಅವರು ಮಾತನಾಡಿ ಕರ್ನಾಟಕದಲ್ಲಿ ಮೊದಲಬಾರಿಗೆ ಜ್ಞಾನಪತಿ ಎನ್ನುವ ಕಾರ್ಯಕ್ರಮ ಮಾಡುತ್ತಿರುವುದು. ಮಕ್ಕಳ ಬಾಳಿನಲ್ಲಿ ಹೊಸ ನಗೆಯನ್ನು ಬೀರುವಂತೆ ಮಾಡುತ್ತಿದ್ದಾರೆ. ಎಲ್ಲರೂ ಪರೀಕ್ಷೆಯ ಬಗ್ಗೆ ಮಾತನಾಡುತ್ತಾರೆ ಆದರೆ ವಿಶ್ವನಾಥ ಗೆಳೆಯರ ಬಳಗ ಮಕ್ಕಳಿಗಾಗಿ ತಮ್ಮದೇ ಆದ ಅನುಭವದ ಆಧಾರದ ಮೇಲೆ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಹತ್ತನೇಯ ತರಗತಿ ಜೀವನದ ಅತ್ಯಂತ ಮಹತ್ವದ ಘಟ್ಟವಾಗಿದೆ. ಇಲ್ಲಿ ಕಲಿತ ಜ್ಞಾನ ಬದುಕಿನಲ್ಲಿ ಹೆಚ್ಚು ಬಳಕೆಯಾಗುತ್ತದೆ. ಮಕ್ಕಳು ಮನಸ್ಸಿನಿಂದ ಅಧ್ಯಯನಶೀಲರಾಗಬೇಕಾದ ಅಗತ್ಯವಿದೆ. ಬೆಳೆಂಯುತ್ತಿರುವ ಸ್ಪರ್ಧಾತ್ಮಕ ಜಗತ್ತಿಗೆ ನಮ್ಮನ್ನು ತೆರೆದುಕೊಳ್ಳಬೇಕಿದೆ. ಈ ಕಾರ್ಯಕ್ರಮದಲ್ಲಿನ ಪ್ರಶ್ನೆಗಳು ಉತ್ತರಗಳು ಮಕ್ಕಳ ಫಲಿತಾಂಶ ಸುಧಾರಣೆಗೆ ಪೂರಕವಾಗಲಿವೆ ಎಂದರು.
ಕೌನ ಬನೇಗಾ ಜ್ಞಾನಪತಿ ಕಾರ್ಯಕ್ರಮದ ಐದನೇಯ ಸಂಚಿಕೆಯಲ್ಲಿ ರೋಟ್ರಿ ಕ್ಲಬ್ ಪ್ರೌಢ ಶಾಲೆಯು ಪ್ರಥಮ ಸ್ಥಾನ ೨೦೦೦ ರೂಪಾಯಿಯ ಬಹುಮಾನ ಪಡೆಯಿತು. ನಗರದ ಎಂ.ಪಿ.ಎಚ್.ಎಸ್. ಶಾಲೆಯ ವಿಧ್ಯಾರ್ಥಿಗಳು ಹಾಗೂ ಸ್ವಾಮಿ ವಿವೇಕಾನಂದ ಪ್ರೌಢ ಶಾಲೆಯ ವಿಧ್ಯಾರ್ಥಿಗಳು ದ್ವಿತಿಯ ಸ್ಥಾನ ೧೦೦೦ ಹಂಚಿಕೊಂಡವು ಸರಕಾರಿ ಪ್ರೌಢ ಶಾಲೆ ಚಿಂಚನಸೂರ ವಿಧ್ಯಾರ್ಥಿಗಳು ತೃತೀಯ ಸ್ಥಾನ ಪಡೆದು ೫೦೦ ರೂಪಾಯಿಗಳನ್ನು ಪಡೆದರು.
ಕಾರ್ಯಕ್ರಮದಲ್ಲಿ ಇಮಾಮ್ ಪಟೇಲ್, ಕಾಶಿನಾಥ ಮರತೂರ, ವಿಜಯಕುಮಾರ, ಮಲ್ಲಿನಾಥ ದಾಶೆಟ್ಟಿ, ಅನಿಲ ಜಾಧವ, ರಘುನಾಥ, ರಿಯಾಜ ಪಟೇಲ್, ಮಾಲಾಶ್ರಿ, ಹಾಜರಿದ್ದರು.
ಕೌನ ಬನೇಗಾ ಜ್ಞಾನಪತಿ ಕಾರ್ಯಕ್ರಮ ನನಗೆ ಟಿವಿಗಳಲ್ಲಿ ನೋಡಿದ ಕಾರ್ಯಕ್ರಮದಷ್ಟೆ ವಿಶೇಷ ಅನುಭವ ನೀಡಿತು. ನಾವು ಹಳ್ಳಿಯ ಮಕ್ಕಳು ಬರಿ ಟಿವಿಗಳಲ್ಲಿ ಈ ರೀತಿಯ ಕಾರ್ಯಕ್ರಮ ನೋಡಿದ್ದೇವೆ ಆದರೆ ಇದೀಗ ನಮಗೆ ನೈಜ ಅನುಭವ ನೀಡಿದ್ದು ಈ ಕಾರ್ಯಕ್ರಮ. ಹತ್ತನೆಯ ತರಗತಿಯ ಪರೀಕ್ಷೆಗೆ ಸಂಬಂಧಿಸಿದ ವಿವರವಾದ ಮಾಹಿತಿಯನ್ನು ನೀಡಲಾಗಿದೆ. ಪರೀಕ್ಷೆ ಎದುರಿಸಲು ಬೇಕಾಗುವ ಆತ್ಮಸ್ಥೈರ್ಯ ಈ ಕಾರ್ಯಕ್ರಮ ನೀಡಿದೆ. ಬದಲಾಗುತ್ತಿರುವ ಪರೀಕ್ಷೆಗೆ ಹೇಗೆ ಸಿದ್ಧರಾಗಬೇಕೆಂದು ಈ ಕಾರ್ಯಕ್ರಮ ಕಲಿಸಿಕೊಟ್ಟಿದೆ.
ಕು.ಗಿರಿಜಾ ತಂದೆ ಬಾಬುರಾವ ಸರಕಾರಿ ಪ್ರೌಢ ಶಾಲೆ ಚಿಂಚನಸೂರ. (ಭಾಗವಹಿಸಿದ ವಿಧ್ಯಾರ್ಥಿನಿ)
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…