ಬಿಸಿ ಬಿಸಿ ಸುದ್ದಿ

ವಸತಿ ಹಾಗೂ ಸಾರಿಗೆ ಸೌಕರ್ಯದಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಿ: ಪ್ರಿಯಾಂಕ್ ಖರ್ಗೆ

ಕಲಬುರಗಿ: ಮುಂದಿನ ತಿಂಗಳು ೫,೬ ಹಾಗೂ ೭ ರಂದು ನಡೆಯುವ ೮೫ ನೇ ಅಖಿಲ ಭಾರತ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸುವ ಆವ್ಹಾನಿತರಿಗೆ ವಸತಿ ಹಾಗೂ ಸಾರಿಗೆ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಗುರುವಾರದ ಸಂಜೆಯೊಳಗೆ ವಸತಿ ಹಾಗೂ ಸಾರಿಗೆ ವ್ಯವಸ್ಥೆ ಯ ಕುರಿತಂತೆ ವರದಿ ನೀಡಿ ಎಂದು ಸಮ್ಮೇಳನದ ವಸತಿ ಹಾಗೂ ಸಾರಿಗೆ ವ್ಯವಸ್ಥೆಯ ಅಧ್ಯಕ್ಷರು ಹಾಗೂ ಶಾಸಕರಾದ ಪ್ರಿಯಾಂಕ್ ಖರ್ಗೆ ಅವರು ಸೂಚಿಸಿದರು.

ನಗರದ ಹಳೆ ಜಿಪಂ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮೂರು ದಶಕಗಳ ನಂತರ ನುಡಿಹಬ್ಬ ಆಯೋಜಿಸುವ ಅವಕಾಶ ಜಿಲ್ಲೆಗೆ ದೊರಕಿದ್ದು ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಕೇಂದ್ರ ಸಮಿತಿಯೊಂದಿಗೆ ಮಾತನಾಡಿ ಈ ಸಲದ ಸಮ್ಮೇಳನ ನಮ್ಮ ಕಲಬುರಗಿ ಯಲ್ಲಿ ನಡೆಸುವಂತೆ ಒತ್ತಾಯಿಸಿದ್ದೆ. ಈಗ ಸಮ್ಮೇಳನ ನಡೆಸುವ ಅವಕಾಶ ಸಿಕ್ಕಿದೆ ನಾವೆಲ್ಲ ಸೇರಿ ಸಮ್ಮೇಳನ ಯಶಸ್ವಿಗೆ ಸಹಕರದೊಂದಿಗೆ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಸಮ್ಮೇಳನಕ್ಕೆ ಬರುವ ಅವ್ಹಾನಿತರ ವಸತಿ ಹಾಗೂ ಸಾರಿಗೆ ಪ್ರಮುಖ ಅಂಶವಾಗಿದ್ದು ಅಧಿಕಾರಿಗಳು ಈ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ‌ ನಿರ್ವಹಿಸಿಕೊಂಡು‌ ಹೋಗಬೇಕು. ನಗರದಲ್ಲಿ ಇರುವ ಹೊಟೇಲ್, ವಸತಿ ಶಾಲೆಗಳು, ಹೌಸಿಂಗ್ ಬೋರ್ಡ್ ವಸತಿ‌ ನಿಲಯಗಳು, ಕಲ್ಯಾಣ ಮಂಟಪಗಳನ್ನು ವಸತಿಗೆ ಹಾಗೂ ಖಾಸಗಿ ಶಾಲೆಗಳ, ಖಾಸಗಿ ವಾಹನಗಳ ಡೀಲರ್ ಗಳೊಂದಿಗೆ ಮಾತನಾಡಿ ವಾಹನ ಸೌಲಭ್ಯ ಕಲ್ಪಿಸಿ ಎಂದು ಸೂಚಿಸಿದರು.

ಒಟ್ಟು 1200 ರೂಮುಗಳನ್ನು ವ್ಯವಸ್ಥೆ ಮಾಡಬೇಕಾಗಿದ್ದು ಈಗ 850 ರೂಮುಗಳನ್ನು ಗುರುತಿಸಲಾಗಿದೆ.‌ ನಗರದ ಹೊಟೇಲ್ ಗಳು, ಕಲ್ಯಾಣ ಮಂಟಪಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸಮ್ಮೇಳನಕ್ಕೆ ಬರುವ ಆವ್ಹಾನಿತರಿಗೆ ಹಾಗೂ ಸಮ್ಮೇಳನಕ್ಕೆ‌ ಬರುವ ಸಾರ್ವಜನಿಕರಿಗೆ ಅನುಕೂಲವಾಗಲು ಅಗತ್ಯ ಸಾರಿಗೆ ಮಾಡಲಾಗುತ್ತಿದೆ. 50 ಇನ್ನೋವಾ, 50 ಕ್ರೂಸರ್ ಗಳನ್ನು, 20 ಸರಕಾರಿ ಬಸ್ ಗಳು, ಪ್ರತಿ ತಾಲೂಕಿನಿಂದ ಕಲಬುರಗಿಗೆ ಬೆಳಿಗ್ಗೆ ಹಾಗೂ ರಾತ್ರಿ ವೇಳೆಗೆ ಮತ್ತೆ ವಾಪಸ್ ಹೋಗುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಿಇಓ ರಾಜಾ ತಿಳಿಸಿದರು.

ಸಮ್ಮೇಳನಕ್ಕೆ ಬರುವ ಆವ್ಹಾನಿತರನ್ನು ಎ, ಬಿ ಹಾಗೂ ಸಿ‌ ಕೆಟಗರಿ‌ ಎಂದು ವಿಭಾಗಿಸಲಾಗಿದ್ದು ಅವರಿಗೆ ಆದ್ಯತೆಯ ಮೇಲೆ ಹೊಟೇಲ್ ಹಾಗೂ ಕಲ್ಯಾಣ ಮಂಟಪಗಳನ್ನು ಗುರುತಿಸಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಿಇಓ‌ ವಿವರಿಸಿದರು.

ಸರಕಾರಿ ವಸತಿ ಶಾಲೆಗಳಲ್ಲಿ ಕುಡಿಯುವ ನೀರು, ವಿದ್ಯುತ್, ವ್ಯವಸ್ಥೆ ಮಾಡಿ. ಕಲಾ ತಂಡಗಳಿಗೆ ಬೇರೆ ಕಡೆ ವ್ಯವಸ್ಥೆ ಮಾಡಿಸಿ ಅವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ವಸತಿ‌ ನಿಲಯಗಳ ಸುತ್ತ ಮುತ್ತ ಫಾಗಿಂಗ್ ವ್ಯವಸ್ಥೆ,‌ ಮೇಣಬತ್ತಿ ವ್ಯವಸ್ಥೆ ಮಾಡಿ.‌ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆ ನಿಯಂತ್ರಿಸಬೇಕು. ಅಗತ್ಯವಿರುವ ಕಡೆಗಳೆಲ್ಲ ಒನ್‌ ವೇ ಮಾಡಿ. ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆಯಾಗದಂತೆ‌ ನೋಡಿಕೊಳ್ಳಿ ಎಂದು ಖರ್ಗೆ ಸೂಚಿಸಿದರು.

ಅವ್ಹಾನಿತರಿಗೆ ಬೇಕಾಗುವ ಹಾಸಿಗೆ, ಮಗ್, ಬಕೇಟ್ ಇತ್ಯಾದಿ ಗಳನ್ನು ಖರೀದಿಸಿ ಅದರಲ್ಲಿ ಪಾರದರ್ಶಕತೆ ಇರಲಿ ಎಂದು ಸೂಚಿಸಿದರು. ಸಮ್ಮೇಳನ ನಡೆಯುವ ಮೂರು ದಿನಗಳ ಕಾಲ ಪೊಲೀಸರು ಯಾವುದೇ ಅಹಿತಕರ ಘಟನೆಯಾಗದಂತೆ ನೋಡಿಕೊಳ್ಳಬೇಕು. ಜಾಸ್ತಿ ಜನರು ( 200 ಕ್ಕೂ ಅಧಿಕ) ವಸತಿಯಿರುವ ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಎಂದು‌ ನಿರ್ದೇಶಿಸಿದರು.

ಈ ಸಂದರ್ಭದಲ್ಲಿ ಜಿಪಂ ವಿರೋಧ ಪಕ್ಷದ ನಾಯಕರಾದ ಶಿವಾನಂದ್ ಪಾಟೀಲ್, ಜಿಪಂ‌ ಸಿಪಿಓ, ಪ್ರವೀಣಾ‌ ಪ್ರಿಯಾ ಡೇವಿಡ್, ಹೆಚ್ಚುವರಿ ಎಸ್ ಪಿ ಪ್ರಸನ್ನ ದೇಸಾಯಿ‌ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

9 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

12 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

18 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

18 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

19 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago