ಸುರಪುರ: ರಾಜ್ಯದಲ್ಲಿ ನಿತ್ಯ ನಿರಂತರವಾಗಿ ಕೆಲಸ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ಸರಕಾರ ಕಡೆಗಣಿಸುತ್ತಿದೆ.ಇದರಿಂದ ಆಶಾ ಕಾರ್ಯಕರ್ತೆಯರು ವೇತನ ನೀಡುವ ವರೆಗೆ ರಾಜ್ಯಾದ್ಯಂತ ತಮ್ಮ ಸೇವೆಯನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಮುಖಂಡ ರಾಮಲಿಂಗಪ್ಪ ಮಾತನಾಡಿದರು.
ಆಶಾ ಕಾರ್ಯಕರ್ತೆಯರಿಗೆ ಸರಕಾರ ನೀಡಬೇಕಾದ 15 ತಿಂಗಳ ವೇತನ ನೀಡುವಂತೆ ಆಗ್ರಹಿಸಿ ಆರೋಗ್ಯ ಸಚಿವರಿಗೆ ಬರೆದ ಮನವಿಯನ್ನು ತಾಲೂಕು ಆರೋಗ್ಯಾಧಿಕಾರಿಗಳ ಮೂಲಕ ಸಲ್ಲಿಸಿ ಮಾತನಾಡಿ,ಕಳೆದ 3ನೇ ತಾರೀಖು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ವಿವಿಧ ಸಮಸ್ಯೆಗಳನ್ನಿಟ್ಟುಕೊಂಡು ಧರಣಿ ನಡೆಸಿದಾಗ ಸರಕಾರ ಕೆಲವು ಬೇಡಿಕೆ ಈಡೇರಿಸುವುದಾಗಿ ತಿಳಿಸಿರುವುದು ಸಂತೋಷ ತಂದಿದೆ.ಆದರೆ ವೇತನ ಬಿಡುಗಡೆ ವಿಳಂಬವನ್ನು ಸಹಿಸಲಾಗದು.ಇದರಿಂದ ಆಶಾ ಕಾರ್ಯಕರ್ತೆಯರ ಬದುಕು ದುಸ್ತರವಾಗಿದೆ ಆದ್ದರಿಂದ ಸರಕಾರ ಕೂಡಲೆ ವೇತನ ಬಿಡುಗಡೆ ಮಾಡುವಂತೆ ಒತ್ತಾಯಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಾದ ಪದ್ಮಾ, ದೇವಮ್ಮ,ಪದ್ಮಾವತಿ,ಶಾಂತವ್ವ,ಬಸಮ್ಮ,ಶ್ರೀದೇವಿ,ಶೃತಿ,ಗಿರಿಲಿಂಗಮ್ಮ,ಪಾರ್ವತಿ,ದೇವಿಂದ್ರಮ್ಮ,ಶಾಂತಾಬಾಅಯಿ,ರಜೀಯಾಬೇಗಂ,ಚಂದಮ್ಮ,ಸಿದ್ದಮ್ಮ,ಶೇಖಮ್ಮ,ಹುಲಗಮ್ಮ,ಮಾನಮ್ಮ,ಮಲ್ಲಮ್ಮ,ಶೋಭಾ,ಪುಷ್ಪಲತಾ,ವಿಜಯಲಕ್ಷ್ಮೀ,ಶಾಮಲಾಬಾಯಿ,ಲಕ್ಷ್ಮೀ,ಶಿವಕಾಂತಮ್ಮ,ಮಹಾದೇವಿ,ಸಂಗೀತಾ,ಸರಸ್ವತಿ,ಅಕ್ಕಮಾದೇವಿ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…