ಬಿಸಿ ಬಿಸಿ ಸುದ್ದಿ

ನಮ್ಮ ದಾಖಲೆಗಳ ಕೇಳುವ ಮೋದಿ ಶಾ ತಮ್ಮ ದಾಖಲೆ ತೋರಿಸಲಿ:ಪಠಾಣ

ಯಾದಗಿರಿ, ಸುರಪುರ: ಕಾರ್ಮಿಕ ಮತ್ತು ರೈತ ಸಂಘಟನೆಗಳು ಕರೆ ನೀಡಿದ್ದ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಸುರಪುರದಲ್ಲಿ ಸಾಮೂಹಿಕ ಸಂಘಟನೆಗಳ ವೇದಿಕೆ ಹಾಗು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಹಾಗು ದಲಿತ ಮತ್ತು ಪ್ರತಿಪರ ಸಂಘಟನೆಗಳ ಒಕ್ಕೂಟ ಸುರಪುರ ಕರೆ ನೀಡಿದ್ದ ಬಂದ್ ಯಶಸ್ವಿಯಾಯಿತು.

ಬೆಳಿಗ್ಗೆ ಹತ್ತು ಗಂಟೆಗೆ ನಗರದ ಡಾ: ಬಾಬಾ ಸಾಹೇಬ ಅಂಬೇಡ್ಕರ ವೃತ್ತದಲ್ಲಿ ಜಮಾವಣೆಗೊಂಡ  ಸಾವಿರಾರು ಸಂಖ್ಯೆಯ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳ ಹಾಗು ಭಾರತೀಯ ಪೌರತ್ವ ಕಾಯಿದೆ ಜಾರಿ ವಿರುಧ್ಧ ಘೋಷಣೆಗಳನ್ನು ಕೂಗುತ್ತಾ ಮಹಾತ್ಮಾ ಗಾಂಧಿ ವೃತ್ತದಲ್ಲಿ ಬಂದು ಬಹಿರಂಗ ಸಮಾವೇಶ ನಡೆಸಿದರು.

ಈ ಸಂದರ್ಭದಲ್ಲಿ ಹೋರಾಟದ ಅಧ್ಯಕ್ಷತೆ ವಹಿಸಿದ್ದ ಅಹ್ಮದ ಪಠಾಣ ಮಾತನಾಡಿ,ಇಂದು ಕೇಂದ್ರ ಸರಕಾರ ತನ್ನಿಷ್ಟದಂತೆ ನಿಯಮಗಳನ್ನು ರೂಪಿಸುತ್ತಾ ಕಾರ್ಮಿಕರು ಮತ್ತು ರೈತರನ್ನು ನಾಶ ಮಾಡಲು ಹೊರಟಂತಿದೆ.ಕಾರ್ಮಿಕರ ಮತ್ತು ರೈತರು ಅನೇಕ ಬೇಡಿಕೆಗಳನ್ನು ಇಟ್ಟುಕೊಂಡು ಎಷ್ಟುಬಾರಿ ಹೋರಾಟ ನಡೆಸಿದರು ಬೇಡಿಕೆ ಈಡೇರಿಸಲು ಮುಂದಾಗುತ್ತಿಲ್ಲ.ದೇಶದ ಜನರ ಹಣವನ್ನು ಕೊಳ್ಳೆ ಹೊಡೆದು ಅಧಾನಿ ಅಂಬಾನಿಯಂತಹ ಬಂಡವಾಳಶಾಹಿಗಳ ತಿಜೊರಿ ತುಂಬಿಸುತ್ತಿದ್ದಾರೆ ಎಂದರು.

ಈಗ ಸಿಎಎ ಮತ್ತು ಎನ್.ಆರ್.ಸಿ ಕಾಯಿದೆಗಳ ಮೂಲಕ ದೇಶದಲ್ಲಿನ ಅಲ್ಪಸಂಖ್ಯಾತರ ಮತ್ತು ದಲಿತ,ಹಿಂದುಳಿದವರನ್ನು ನಾಶ ಮಾಡಲು ಹೊರಟಿದೆ.ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮತ್ತು ಗೃಹ ಮಂತ್ರಿ ಅಮೀತ್ ಶಾ ಅವರು ದೇಶದ ಜನರ ದಾಖಲಾತಿ ಕೇಳುತ್ತಿದ್ದಾರೆ.ಆದರೆ ಮೊದಲು ತಮ್ಮ ದಾಖಲಾತಿಗಳನ್ನು ತೋರಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸುರೇಖಾ ಕುಲಕರ್ಣಿ ಮಾತನಾಡಿ,ಅಂಗನವಾಡಿ ನೌಕರರು ಸೇರಿದಂತೆ ದೇಶದಲ್ಲಿನ ಎಲ್ಲಾ ಕಾರ್ಮಿಕರಿಗೆ ಕನಿಷ್ಟ ೨೧ ಸಾವಿರ ರೂಪಾಯಿಗಳ ವೇತನ ನಿಗದಿ ಮಾಡಬೇಕು.ಕಾರ್ಮಿಕರಿಗೆ ೧೦ ಸಾವಿರ ರೂಪಾಯಿ ಪಿಂಚಣಿ ನಿಡಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಎಲ್.ಕೆ.ಜಿ,ಯು.ಕೆ.ಜಿ ಆರಂಭಿಸಬೇಕು.ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಲಭ್ಯ ಒದಗಿಸಬೇಕು. ಅಂಗನವಾಡಿ ಮತ್ತು ಬಿಸಿಯೂಟದ ನೌಕರರ ವೇತನ ಬಿಡುಗಡೆ ಮಾಡಬೇಕು.ಕಾರ್ಮಿಕರಿಗೆ ಮನೆಗಳನ್ನು ನೀಡಬೇಕೆಂದು.ರೈತರಿಗಾಗಿ ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸಲು ಒತ್ತಾಯಿಸಿದರು.ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಹಣಮಂತ ಕಟ್ಟಿಮನಿ,ನಾಗಣ್ಣ ಕಲ್ಲದೇವನಹಳ್ಳಿ,ವೆಂಕಟೇಶ ಬೇಟೆಗಾರ, ಅಬ್ದುಲ್ ಅಲಿಂ ಗೋಗಿ,ರಾಹುಲ್ ಹುಲಿಮನಿ,ಯಲ್ಲಪ್ಪ ಚಿನ್ನಾಕಾರ,ಉಸ್ತಾದ ವಜಾಹತ್ ಹುಸೇನ್,ಮೂರ್ತಿ ಬೊಮ್ಮನಹಳ್ಳಿ ಮಾತನಾಡಿದರು.

ಸಿದ್ದಯ್ಯಸ್ವಾಮಿ ಸ್ಥಾವರಮಠ ಸ್ವರಚಿತ ಕವನ ಮಾಟ ಮಾಡಿಸ್ಯಾರ ಪರಧಾನಿಗೆ ಪಾಕಿಸ್ತಾನದವರು ಮಾಟ ಮಾಡಿಸ್ಯಾರ ಎಂದು ಕ್ರಾಂತಿಕಾರಿ ಕವನ ಓದುವ ಮೂಲಕ ಕೇಂದ್ರ ಸರಕಾರದ ಜನ ವಿರೋಧಿ ನೀತಿಗಳ ಕುರಿತು ಜಾಗೃತಿ ಮೂಡಿಸಿದರು ಹಾಗು ದೌಲತ್ ಮೌಲಾನಾ ಪಾಕಿಸ್ಥಾನದಲ್ಲಿ ನಡೆದ ಗುರುನಾನಕ ಮಂದಿರದ ಮೇಲಿನ ದಾಳಿ ಖಂಡಿಸಿ ಪಾಕಿಸ್ಥಾನ ಮುರದಾಬಾದ್ ಎಂದು ಘೋಷಣೆ ಕೂಗುತ್ತಿದ್ದಂತೆ ಎಲ್ಲರೂ ಪಾಕಿಸ್ಥಾನದ ವಿರುಧ್ಧ ಆಕ್ರೋಶದ ಘೋಷಣೆಗಳನ್ನು ಕೂಗಿದರು. ನಂತರ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನ ಮೂಲಕ ಸಲ್ಲಿಸಲಾಯಿತು.ಇದೇ ಸಂದರ್ಭದಲ್ಲಿ ಹಮಾರ ಸಂಘದಿಂದ ಅರ್ಧಕ್ಕೆ ನಿಂತಿರುವ ಮನೆಗಳನ್ನು ನಿರ್ಮಿಸಿಕೊಡಲು ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ವೆಂಕಟೇಶ ಹೊಸ್ಮನಿ,ಮಾಳಪ್ಪ ಕಿರದಳ್ಳಿ,ನಸೀಮಾ ಮುದ್ನೂರ,ಬಸಮ್ಮ ಆಲ್ಹಾಳ,ರಾಧಾಬಾಯಿ ಲಕ್ಷ್ಮೀಪುರ,ಜಯಶ್ರೀ ಪತ್ತಾರ,ಗೀತಾ ಆನಗನೂರ,ಸುವರ್ಣ ಕೆಂಭಾವಿ,ರಮೇಶ ದೊರೆ,ಅಬ್ದುಲಗಫೂರ ನಗನೂರಿ,ಮಹಿಬೂಬ ಒಂಟಿ,ಪ್ರಕಾಶ ಆಲ್ಹಾಳ,ಖಲೀಲ ಅಹ್ಮದ ಅರಕೇರಿ,ಅಬೀದ್ ಪಗಡಿ,ರಫೀಕ್ ಸುರಪುರ,ರಮೇಶ ಅರಕೇರಿ,ಶಂಕರ ಬೊಮ್ಮನಹಳ್ಳಿ,ತಿಪ್ಪಣ್ಣ ಶೆಳ್ಳಿಗಿ,ಖಾಲೀದ್ ಅಹ್ಮದ,ಲಿಯಾಖತ್ ಹುಸೇನ,ಭಿಮರಾಯ ಸಿಂಧಗೇರಿ ಸೇರಿದಂತೆ ನೂರಾರು ಜನರಿದ್ದರು.

ಪ್ರತಿಭಟನೆಯ ಅಂಗವಾಗಿ ನಗರದ ಎಲ್ಲಾ ವ್ಯಾಪಾರಸ್ಥರು ತಮ್ಮ ಅಂಗಡಿ ಮಂಗಟ್ಟುಗಳನ್ನು ಮುಚ್ಚಿ ಹೋರಾಟಕ್ಕೆ ಬೆಂಬಲಿಸಿದರು.ವಾಹನ ಓಡಾಟವು ವಿರಳವಾಗಿತ್ತು.ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು.ನಗರದೆಲ್ಲೆಡೆ ಶಾಂತಿ ಸುವ್ಯವಸ್ಥೆಗಾಗಿ ಪೊಲೀಸ್ ಇನ್ಸ್ಪೇಕ್ಟರ್ ಆನಂದರಾವ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

6 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

6 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

6 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

23 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago