ಕಲಬುರಗಿ: ಕೇವಲ ಕಲ್ಪನೆ ಆಧಾರಿತ ಸಾಹಿತ್ಯಕ್ಕೆ ಹೆಚ್ಚಿ ಭವಿಷ್ಯವಿಲ್ಲ. ಬದಲಿಗೆ ಜೀವನದ ನೈಜತೆ, ಸಮಾಜದ ಮೇಲೆ ಬೆಳಕು ಚೆಲ್ಲುವು, ಮೌಲ್ಯಗಳನ್ನು ಹೊಂದಿರುವ ಸಾಹಿತ್ಯವು ಶ್ರೇಷ್ಠವೆನಿಸಿಕೊಳ್ಳಲು ಸಾಧ್ಯ. ಇಂತಹ ಸಾಹಿತ್ಯವನ್ನು ರಚಿಸಿ, ಅದರಂತೆ ಬದುಕಿ ತೋರಿಸಿದ ಕೆಲವೇ ಸಾಹಿತಿಗಳಲ್ಲಿ ಡಾ.ಎಂ.ಗೋಪಾಲಕೃಷ್ಣ ಅಡಿಗರು ಪ್ರಮುಖರಾಗಿ ಕಂಡುಬರುತ್ತಾರೆಂದು ಉಪನ್ಯಾಸಕ, ಲೇಖಕ ಪ್ರೊ.ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ಅವರು ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ನಗರದ ಆಳಂದ ರಸ್ತೆಯ ಶಿವನಗರದಲ್ಲಿನ ’ಮಲ್ಲಿನಾಥ ಮಹಾರಾಜ ಶಾಲೆ’ಯಲ್ಲಿ ಬುಧವಾರ ಹಮ್ಮಿಕೊಂಡ ’ಡಾ.ಎಂ.ಗೋಪಾಲಕೃಷ್ಣ ಅಡಿಗ’ರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಮಾತನಾಡುತ್ತಿದ್ದರು.
ಅಡಿಗರು ತಮ್ಮ ಜೀವನದ ಪಯಣದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿ, ಕೊನೆಯವರೆಗೂ ಸಾಹಿತ್ಯ ಕೃಷಿಯಿಂದ ಎಂದಿಗೂ ಕೂಡಾ ವಿಮುಖರಾಗಲಿಲ್ಲ. ’ದೇಹಕ್ಕೆ ಮುಪ್ಪಾದರೆ, ಮನಸಿಗೆ ಮುಪ್ಪಿಲ್ಲ’ ಎಂಬ ಮಾತಿನಂತೆ ಸದಾ ಚೈತನ್ಯದಿಂದ ಕೂಡಿದ ಜೀವನ ಮತ್ತು ಸಾಹಿತ್ಯ ಹೊಂದಿದ ವಿಶಿಷ್ಠ ಕವಿ ಇವರಾಗಿದ್ದಾರೆ. ’ಭಾವತರಂಗ’ ’ಕಟ್ಟುವೆವು ನಾವು’ ’ ನಡೆದು ಬಂದ ದಾರಿ’ ಭೂಮಿಗೀತ’ ’ವರ್ಧಮಾನ’ ಸೇರಿದಂತೆ ಮುಂತಾದ ಕೇತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆಂದು ಹೇಳಿದರು.
ಕುವೆಂಪು. ಬೇಂದ್ರೆ ಸಾಲಿಗೆ ಸೇರುವ ಅಡಿಗರು, ವಿಶಿಷ್ಠ ಬರವಣಿಗೆ ಅವರದಾಗಿತ್ತು. ಯುವಕರಿಗೆ ಸೂಕ್ತ ಮಾರ್ಗದರ್ಶನ, ವೈಚಾರಿಕತೆ, ಸಮಾಜಮುಖಿ ಚಿಂತನೆಯ ಮೂಲಕ ನವ್ಯ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅಡಿಗರು ನೀಡಿರುವ ಕೊಡುಗೆ ತುಂಬಾ ಅವಿಸ್ಮರಣೀಯವಾಗಿದೆ. ’ಸಾಹಿತ್ಯದಲ್ಲಿ ರಾಜಕೀಯವಿರಬಾರದು. ರಾಜಕೀಯದಲ್ಲಿ ಸಾಹಿತ್ಯ ಬೆಳೆಸಬೇಕು’ ಎಂಬುದು ಅವರ ಅಚಲವಾದ ಹೇಳಿಕೆ ಪ್ರಸ್ತುತ ಅವಶ್ಯಕವಾಗಿದೆಯೆಂದು ಅಭಿಮತ ವ್ಯಕ್ತಪಡಿಸಿದರು.
ಸಂಸ್ಥೆಯ ಅಧ್ಯಕ್ಷ ಅಮರ ಬಂಗರಗಿ ಮಾತನಾಡಿ, ಅಡಿಗರಂತಹ ಮೇರು ಸಾಹಿತಿಗಳ ಜೀವನ, ಸಾಧನೆಯನ್ನು ವಿದ್ಯಾರ್ಥಿ ದೆಸೆಯಿಂದಲೆ ಮಕ್ಕಳಿಗೆ ತಿಳಿಸಿಹೇಳಿದರೆ, ಅವರು ಮುಂದೆ ಖಂಡಿತವಾಗಿಯೂ ನಾಡಿಗೆ ತಮ್ಮದೇ ಆದ ಸಾಹಿತ್ಯಿಕ ಕೊಡುಗೆಯನ್ನು ನೀಡಲು ಸ್ಪೂರ್ತಿ ದೊರೆಯತ್ತದೆ. ಇಂತಹ ಕಾರ್ಯವನ್ನು ಬಳಗವು ಮಾಡುತ್ತಿರುವುದು ತುಂಬಾ ಔಚಿತ್ಯಪೂರ್ಣ ಹಾಗೂ ಶ್ಲಾಘನೀಯವಾಗಿದೆಯೆಂದು ನುಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಚಂಪಾಕಲಾ ನೆಲ್ಲೂರೆ, ಸಹ ಶಿಕ್ಷಕರಾದ ನಿಂಗಮ್ಮ ಬಿರಾದಾರ, ಗಿರಿಜಾ ರ‍್ಯಾಕಾ, ಸಿಬ್ಬಂದಿ ಶಾರದಾಬಾಯಿ ಗೌಳಿ, ಒಂಕಾರ ಗೌಳಿ, ಗಣೇಶ ಗೌಳಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಗಿರೀಶ, ಗುರುಕಿರಣ, ಸುನಿಲ, ಐಶ್ವರ್ಯ ಸೇರಿದಂತೆ ಬಳಗದ ಸದಸ್ಯರು, ಶಾಲೆಯ ಸಿಬ್ಬಂದಿ, ಪಾಲಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಲಬುರಗಿ: ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಸರ್ಕಾರಿ ಪದವಿ ಸ್ವಾಯತ್ತ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಮಹಾನಗರ ಪಾಲಿಕೆ,ಸಮಾಜ ಕಲ್ಯಾಣ ಇಲಾಖೆ, ಕನ್ನಡ…
ಕಲಬುರಗಿ: ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿ ಹಾಗೂ ಸಿ.ಆರ್.ಸಿ ಸ್ನೇಹ ಬಳಗ ಕಲಬುರಗಿ ಮತ್ತು ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ…
ಕಲಬುರಗಿ: ಸುವರ್ಣ ಭವನ (ಕನ್ನಡ ಭವನ)ದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ ವತಿಯಿಂದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ…
ಕಲಬುರಗಿ : ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿಯಲ್ಲಿ ಎನ್.ಎಸ್.ಎಸ್, ರೆಡ್‍ಕ್ರಾಸ್, ಸ್ಕೌಟ್ಸ್ ಆಂಡ್ ಗೈಡ್ಸ್, ಐ.ಕ್ಯೂ.ಎ.ಸಿ ಮತ್ತು ಸಾಂಸ್ಕøತಿಕ ಘಟಕಗಳ…
ಕಲಬುರಗಿ; ಶಿಶು ಮಗುವಿಗೆ ಅಪಹರಣಕಾರರನ್ನು ಬಂಧಿಸಿದ ಕಲಬುರಗಿ ಪೆÇೀಲೀಸ್ ಇಲಾಖೆಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಅಭಿನಂದನೆ ವ್ಯಕ್ತಪಡಿಸಿದೆ.…
ಕಲಬುರಗಿ; ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಜೇವರ್ಗಿ, ಯಡ್ರಾಮಿ, ಅಫಜಲಪೂರ, ಸೇಡಂ, ಆಳಂದ, ಚಿಂಚೋಳಿ ತಾಲೂಕಿನಲ್ಲಿ ಜಂಗಲ್ ಕಟಿಂಗ್ ಹಾಗೂ ಮೆಂಟನೆನ್ಸ್…