ಬಿಸಿ ಬಿಸಿ ಸುದ್ದಿ

ಭಾರತ ಬಂದ್ ಚಿತ್ತಾಪುರದಲ್ಲಿ ವಿಫಲ, ಕೇವಲ ಪ್ರತಿಭಟನೆಗೆ ಸೀಮಿತ

ಚಿತ್ತಾಪುರ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಇಂದು ನಡೆದ ಭಾರತ ಬಂದ್ ಮುಷ್ಕರ ತಾಲೂಕಿನಲ್ಲಿ ಸಂಪೂರ್ಣ ವಿಫಲಗೊಂಡು ಬಂದ್ ಕೇವಲ ಪ್ರತಿಭಟನೆಗೆ ಸೀಮಿತಗೊಂಡಿತ್ತು.

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಭಾರತ ಬಂದ್ ಗೆ ಕರೆ ನೀಡಿತು ಇಂದು ಬೆಳಗ್ಗಿನಿಂದಲೇ ಶಾಲಾ-ಕಾಲೇಜುಗಳು, ವ್ಯಾಪಾರ-ವಹಿವಾಟು ಸೇರಿದಂತೆ ಸಾರಿಗೆ ಸಂಚಾರ ಯಥಾರೀತಿಯಲ್ಲಿ ನಡೆಯಿತು.

ಪಟ್ಟಣದ ಎಪಿಎಂಸಿ ಆವರಣದಿಂದ ತಾಲೂಕಿನ ಪ್ರಮುಖ ಬೀದಿಗಳ ಮುಖಾಂತರ ಆಗಮಿಸಿ ಪ್ರತಿಭಟನೆಯ ಮೆರವಣಿಗೆ ಬಸ್ ನಿಲ್ದಾಣದ ಮುಂದೆ ಕುಳಿತು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಮಾತನಾಡುತ್ತಾ ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ದೇಶದ ಪ್ರಜಾಪ್ರಭುತ್ವ ಆಶಯದ ವಿರುದ್ಧ ಆಡಳಿತ ನಡೆಸಿ ಕಾರ್ಮಿಕ ಕಾನೂನುಗಳನ್ನು ನಾಶ ಮಾಡುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಶೋಕ ಮ್ಯಾಗೇರಿ ಆಕ್ರೋಶ ವ್ಯಕ್ತಪಡಿಸಿದರು.

ಈರುಳ್ಳಿ ಪೆಟ್ರೋಲ್ ಸೇರಿದಂತೆ ವಸ್ತುಗಳ ಬೆಲೆ ಏರಿಕೆಯನ್ನು ತಡೆಗಟ್ಟಿ.ಕನಿಷ್ಠ ವೇತನ ರೂಪಾಯಿ 21000 ನಿಗದಿಪಡಿಸಿ. ಕಾರ್ಮಿಕ ವಿರೋಧಿ ಲೇಬರ್ ಕೋಡ್ ರದ್ದುಪಡಿಸಿ. ಗುತ್ತಿಗೆ ಹಾಗೂ ಹೊರ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಿ. ಸಾರ್ವಜನಿಕ ಉದ್ಯಮಿಗಳ (ಪಿಎಸ್ ಯು) ಖಾಸಗೀಕರಣವನ್ನು ನಿಲ್ಲಿಸಿ. ಆಶಾ ಅಂಗನವಾಡಿ ಹಾಗೂ ಅಕ್ಷರ ದಾಸೋಹ ಸೇರಿದಂತೆ ಇತರೆ ಸ್ಕೀಂ ನೌಕರರನ್ನು ಕಾಯಂ ಮಾಡಿ.ರೈತರ ಕಲ್ಯಾಣಕ್ಕಾಗಿ ಕಾನೂನು ಮಾಡಿ.ಡಾ ಎಂಎಸ್ ಸ್ವಾಮಿನಾಥನ್ ಆಯೋಗದ ವರದಿ ಅನುಸರಿಸಿ ಭೂಮಿ ಬಾಡಿಗೆ ಕುಟುಂಬದ ಶ್ರಮ ನಿರ್ಧರಿಸಿ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ.ತೊಗರಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿಪಡಿಸಿ ಹಾಗೂ ಸಬ್ಸಿಡಿ 1000 ರೂಪಾಯಿ ನೀಡಿ ರೈತರು ಬೆಳೆದಂತಹ ಸಂಪೂರ್ಣ ತೊಗರಿ ಖರೀದಿ ಮಾಡಬೇಕು.

ಉದ್ಯೋಗ ಖಾತ್ರಿ ಕೂಲಿಯನ್ನು 600 ರೂಪಾಯಿಗೆ ಹೆಚ್ಚಿಸಬೇಕು ಹಾಗೂ ಮೂರು ತಿಂಗಳಿಂದ ದುಡಿದ ಉದ್ಯೋಗಖಾತ್ರಿ ವೇತನದ ಹಣ ಬಿಡುಗಡೆ ಮಾಡಬೇಕು.ಕಟ್ಟಡ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದವರಿಗೆ ಪಿಂಚಣಿ ಹತ್ತು ಸಾವಿರ ರೂಪಾಯಿ ನೀಡಿ.ಜನವಿರೋಧಿ ಸಿಎಎ ಮತ್ತು ಎನ್ ಆರ್ ಸಿ ಹಾಗೂ ಎನ್ ಪಿ ಆರ್ ಕೂಡಲೇ ಹಿಂಪಡೆಯಿರಿ,ಮೂರರಿಂದ 9 ವರ್ಷ ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿ ಕೈಬಿಡಬೇಕು.ಐಸಿಡಿಎಸ್ ಯೋಜನೆ 50% ರಷ್ಟು ಬಜೆಟ್ ಕಡಿತಗೊಳಿಸಿ ರುವುದನ್ನು ವಾಪಸಾಗಬೇಕು.ಬಿಸಿ ಊಟವನ್ನು ಖಾಸಗೀಕರಣಗೊಳಿಸುವ ಕೈಬಿಡಬೇಕು ಬಿಸಿಊಟದ ನೌಕರರನ್ನು ಕಾಯಂಗೊಳಿಸಿ ಕನಿಷ್ಠ ವೇತನ ಜಾರಿ ಮಾಡಬೇಕು.

ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೆಂಟರ್ ಆಫ್ ಇಂಡಿಯಾ ಟ್ರೇಡ್ ಯೂನಿಯನ್ (CITU) ಮತ್ತು ಕರ್ನಾಟಕ ಪ್ರಾಂತ ರೈತ ಸಂಘವು ಮಾನ್ಯ ರಾಷ್ಟ್ರಪತಿಗಳಿಗೆ ಬರೆದ ಪ್ರತಿಭಟನಾ ಮೆರವಣಿಗೆಯ ಮನವಿಯನ್ನು ತಹಸಿಲ್ದಾರ ಉಮಾಕಾಂತ್ ಹಳ್ಳೆ ಸ್ವೀಕರಿಸಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿತ್ತು.

ಪ್ರತಿಭಟನೆಯಲ್ಲಿ ಶೇಖಮ್ಮ ಕುರಿ ಅಧ್ಯಕ್ಷರು ಸಿಐಟಿಯು, ದೇವಮ್ಮ ಅನ್ನದಾನಿ ಅಧ್ಯಕ್ಷೆ ಅಂಗನವಾಡಿ ನೌಕರರ ಸಂಘ, ಮಲ್ಲಣ್ಣ ಹೊನಗುಂಟಿ ಕಾರ್ಯದರ್ಶಿ ಗ್ರಾಂ ಪಂ ನೌಕರರ ಸಂಘ, ಶಾಮರಾವ್ ಸಂಗಾವಿ ಸಿಐಟಿಯು ಮುಖಂಡ, ಶಿವಪುತ್ರಪ್ಪ ಹೊಟ್ಟಿ ಸಿಐಟಿಯು ಕಾರ್ಯದರ್ಶಿ, ಸಂಗೀತ ಗುತ್ತೇದಾರ್ ಸಿಐಟಿಯು ಖಜಾಂಚಿ, ಚಿತ್ರಾಶೇಖರ್ ದೇವರಮನೆ, ವಿದ್ಯಾನಿಧಿ, ದೇವಿಂದ್ರಮ್ಮ, ಅಕ್ಕಮಾದೇವಿ,ಸೇರಿದಂತೆ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

11 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

21 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

21 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

21 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago