ಬಿಸಿ ಬಿಸಿ ಸುದ್ದಿ

ಸರಕಾರದಿಂದ ಮೇದಾರ ಕೇತಯ್ಯ ಜಯಂತಿ ಆಚರಿಸಿ: ಇಮ್ಮಡಿ ಬಸವ ಕೇತೇಶ್ವರ ಸ್ವಾಮಿಜಿ ಆಶಯ

ಸುರಪುರ: ಮೇದಾರ ಕೇತೇಶ್ವರರು ೧೨ ನೇ ಸತಮನಾದಲ್ಲಿ ಜನಸಿ ತಮ್ಮ ಕಾಯಕದಲ್ಲಿ ಆ ದೇವರನ್ನು ಮೆಚ್ಚಿಸಿಕೊಂಡವರು,ಎಲ್ಲಾ ಶರಣರ ಜಯಂತಿ ಆಚರಿಸುವ ಸರಕಾರ ಕೇತಯ್ಯನವರ ಜಯಂತಿಯನ್ನು ಆಚರಿಸಲಿ ಎಂದು ಚಿತ್ರದುರ್ಗದ ಇಮ್ಮಡಿ ಬಸವ ಕೇತೆಶ್ವರ ಮಹಾ ಸ್ವಾಮಿಜಿ ಆಶಯ ವ್ಯಕ್ತ ಪಡಿಸಿದರು.

ನಗರದ ಮೇದಾಗಲ್ಲಿಯಲ್ಲಿ ಮೇದಾರ ಸಮುದಾಯದ ಸರ್ಕಾರಿ ನೌಕರರ ಸಂಘ ಹಾಗೂ ಕೇತಯ್ಯನವರ ಜಯಂತಿ ಮತ್ತು ಕೇತಯ್ಯನವರ ಜ್ಯೋತಿ ರಥಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ನಮ್ಮ ಸಮಾಜ ಹಿಂದುಳಿಯಲು ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ನೀಡದೆ ಇರುವುದು ಕಾರಣವಾಗಿದೆ. ನಮ್ಮ ಕಾಯಕದೊಂದಿಗೆ ನಮ್ಮ ಮಕ್ಕಳಿಗೆ ವಿದ್ಯಾಬ್ಯಾಸ ನೀಡಲು ಸಮಾಜ ಭಾಂಧವರು ಮುಂದಾಗಬೇಕು ಅಂದಾಗ ಶೈಕ್ಷಣಿಕವಾಗಿ,ಆರ್ಥಿಕ ಮತ್ತು ರಾಜಕೀಯವಾಗಿ ಮೇಲೆ ಬರಲು ಸಾಧ್ಯ ಎಂದರು.

ನಂತರ ಶ್ರೀ ಸಿದ್ದಬಸವ ಕಬೀರಾನಂದ ಸ್ವಾಮಿಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಮೇದಾರ ಕೇತಯ್ಯನವರಂತಹ ಮಹಾನ ಶರಣರು ಜನಿಸಿದ ಸಮಾಜ ನಮ್ಮ ಮೇದಾರ ಸಮಾಜವಾಗಿದೆ, ಇತಂಹ ಸಮಾಜದಲ್ಲಿ ಜನಿಸಿದ ನಾವುಗಳು ಅವರ ತತ್ವಾದರ್ಶಗಳನ್ನು ಪಾಲಿಸಿ ನಮ್ಮ ಸಮಾಜದ ಉದ್ಧಾರಕ್ಕೆ ಶ್ರಮಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾ ಭಾಗವಹಿಸಿದ್ದ ಅಖಿಲ ಕರ್ನಾಟಕ ಮೇದಾರ ಕೇತೆಶ್ವರ ಟ್ರಸ್ಟ್‌ನ ರಾಜ್ಯಾಧ್ಯಕ್ಷ ಸಿ.ಪಿ.ಪಾಟೀಲ ಮಾತನಾಡಿ, ನಮ್ಮ ಸಮಾಜದ ಉದ್ಧರಕ್ಕಾಗಿ ನಾವು ನೀವೆಲ್ಲರು ಕಂಕಣಬದ್ಧರಾಗಬೇಕಾಗಿದೆ ನಾವೆಲ್ಲರು ನಮ್ಮ ಮನೆಯ ದೇವರ ಮನೆಯಲ್ಲು ನಮ್ಮ ಕುಲದೇವರೊಂದಿಗೆ ನಮ್ಮ ಕುಲಗುರುವಾದ ಕೇತಯ್ಯನವರ ಚಿತ್ರವಿಟ್ಟು ಪೂಜಿಸಬೇಕು ಹಾಗೂ ಸಮಾಜದ ಉದ್ಧಾರಕ್ಕಾಗಿ ದಿನಕ್ಕೆ ಒಂದುರೂಪಾಯನ್ನು ಒಂದು ಹೂಂಡಿಯಲ್ಲಿ ಹಾಕಿ ಅದನ್ನು ನಮ್ಮ ಸಮಾಜದ ಶ್ರೀ ಮಠಕ್ಕೆ ನೀಡಬೇಕು ನೀವುಗಳು ನೀಡಿದ ದಾನದಿಂದ ಶ್ರೀ ಮಠವು ಬೆಳೆಯುತ್ತದೆ ಹಾಗೂ ನಮ್ಮಲ್ಲಿರುವ ಬಡಮಕ್ಕಳು ವಿದ್ಯಾವಂತರಾಗಲು ಉಚಿತ ವಸತಿಯೊಂದಿಗೆ ಪಾಠ ಶಾಲೆಯನ್ನು ತೆರೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೀಮರಾಯ ಕುಲಕರ್ಣಿ,ಶರಣಗೌಡ ಪಾಟೀಲ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಹಣಮಂತಪ್ಪ ಮೇದಾರ,ಉಪಧ್ಯಕ್ಷರಾದ ಎಂ.ಕೃಷ್ಣಪ್ಪ,ರಮೇಶ ಬುರುಡು,ಮೇದಾರ ನೌಕರರ ಸಂಘ ಅಧ್ಯಕ್ಷ ಪ್ರಕಾಶ ಪಾಟೀಲ,ಶರಣಪ್ಪ ಪಿ.ಎಸ್.ಐ,ಮಾನ್ವಿ ಮೇದಾರ ಸಮಾಜದ ಅಧ್ಯಕ್ಷ ತ್ರಿಯಂಬಕೇಶ,ರಾಮಣ್ಣ ಮೇದಾ ಮಾನ್ವಿ,ಬಸವರಾಜ ಕೊಡೇಕಲ್,ನರಸಪ್ಪ ನಿವೃತ್ತ ಸಾರಿಗೆ ಇಲಾಖೆ ನೌಕರರು ವೇದಿಕೆ ಮೇಲಿದ್ದರು.ನಾಗಪ್ಪ ಚವಲ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು,ನಾಗರಾಜ ಚವಲ್ಕರ್ ವಕೀಲ ನಿರೂಪಿಸಿದರು,ಪರಶುರಾಮ ಚಾಮನಾಳ ಸ್ವಾಗತಿಸಿದರು,ಕ್ಯಾತಪ್ಪ ಮೇದಾ ವಂದಿಸಿದರು.ಸ

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

7 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

7 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

9 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

9 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

9 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

10 hours ago