ಬಿಸಿ ಬಿಸಿ ಸುದ್ದಿ

ಸುರಪುರ ಇತಿಹಾಸದ ಕುರಿತು ನಾಟಕ ರಚಿಸಿ ಅಭಿನಯಿಸಿ: ರಾಜಾ ಮದನಗೋಪಾಲ ನಾಯಕ

ಸುರಪುರ: ಎಲ್ಲರೂ ಕಲ್ಯಾಣ ಕರ್ನಾಟಕ ಭಾಗದ ಕಲಾವಿದರೆ ನಟಿಸಿರುವ ರಸಗಂಗಾಧರ ನಾಟಕವು ಅನೇಕ ಸಂದೇಶವುಳ್ಳ ಅದ್ಭುತವಾದ ನಾಟಕವಾಗಿದೆ ಎಂದು ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಮಾತನಾಡಿದರು.

ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಅಭಿನಯಿಸಲ್ಪಟ್ಟ ರಸಗಂಗಾಧರ ನಾಟಕ ವೀಕ್ಷಣೆಯ ನಂತರ ಮಾತನಾಡಿ,ವಿಕ್ರಮ ವಿಸಾಜಿಯವರು ಒಳ್ಳೆಯ ನಾಟಕ ರಚನೆ ಮಾಡಿದ್ದಾರೆ.ಇದರಲ್ಲಿ ಸಾಹಿತ್ಯದ ಜೊತೆಗೆ ಸಮಾಜದಲ್ಲಿನ ಸಾಮರಸ್ಯ ಮತ್ತು ಸೌಹಾರ್ಧತೆಯನ್ನು ಎತ್ತಿ ಹಿಡಿಯುವ ಸಂದೇಶವಿದೆ.ಇಂತಹ ಒಂದು ಒಳ್ಳೆಯ ನಾಟಕವನ್ನು ನಿರ್ದೇಸಿದ ಶಂಕ್ರಯ್ಯ ಗಂಟಿಯವರಿಗೆ ಮತ್ತು ಎಲ್ಲಾ ಕಲಾಅವಿದರಿಗೆ ವಂದನೆಗಳನ್ನು ಸಲ್ಲಿಸಿದರು.ನಮ್ಮ ಸುರಪುರದ ಇತಿಹಾಸವು ಭವ್ಯವಾಗಿದೆ.ರಾಣಿ ಈಶ್ವರಮ್ಮನ ಕುರಿತು ಎಲ್.ಬಿ.ಕೆ.ಆಲ್ದಾಳವರು ನಾಟಕ ರಚಿಸಿದ್ದಾರೆ.ಶಿಘ್ರದಲ್ಲಿ ಅದೂ ಪ್ರದರ್ಶನವಾಗಲಿದೆ.ಅದರಂತೆ ಸುರಪುರ ಇತಿಹಾಸದ ಕುರಿತು ನಾಟಕ ರಚಿಸಿ ಅಭಿನಯಿಸುವಂತೆ ಕಲಾ ತಂಡದಲ್ಲಿ ಮನವಿ ಮಾಡಿದರು.

ನಾಟಕದ ನಿರ್ದೇಶಕ ಶಂಕ್ರಯ್ಯ ಗಂಟಿ ಮಾತನಾಡಿ,ಬಿ.ಎ.ವಿದ್ಯಾರ್ಥಿಗಳ ಪಠ್ಯಕ್ಕಿರುವ ಈ ನಾಟಕವನ್ನು ಸುಮಾರು ೨೦ ಪ್ರಯೋಗ ಮಾಡಿಸುವ ಉದ್ದೇಶವಿದೆ.ಇದು ಹನ್ನೆರಡನೆ ಪ್ರಯೋಗವಾಗಿದೆ ಎಂದರು.ನಾಟಕದ ಕುರಿತು ತಾವೆಲ್ಲರು ಅಭಿಪ್ರಯಾ ತಿಳಿಸಿದರೆ ಇನ್ನೂ ಹೆಚ್ಚಿನ ಕಾಳಜಿವಹಿಸಿ ಅಭಿನಯಿಸಲು ಅನುಕೂಲವಾಗಲಿದೆ ಎಂದರು.
ಮುಖಂಡ ದೇವೆಂದ್ರಪ್ಪ ಹೆಗ್ಗಡೆ ಮಾತನಾಡಿ,ಇಂತಹ ಒಂದು ಅಮೋಘವಾದ ನಾಟಕದ ಪ್ರದರ್ಶನಕ್ಕೆ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕರು ವ್ಯವಸ್ಥೆ ಕಲ್ಪಿಸಿದ್ದಾರೆ ಅವರಿಗೆ ಎಲ್ಲರು ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.ಅಲ್ಲದೆ ಈ ನಾಟಕದಲ್ಲಿ ನಮ್ಮ ಕಲ್ಯಾಣ ಕರ್ನಾಟಕ ಭಾಗದವರೇ ಎಲ್ಲಾ ಕಲಾವಿದರು ಅಭಿನಯಿಸುತ್ತಿರುವುದು ಹೆಚ್ಚಿನ ಸಂತಸ ತಂದಿದೆ ಎಂದರು.ನಂತರ ಬಲಭೀಮ ದೇಸಾಯಿ,ರಾಹುಲ್ ಹುಲಿಮನಿ ನಾಟಕದ ಕುರಿತು ಮಾತನಾಡಿದರು.

ನಾಟಕದಲ್ಲಿ ಜಗದೀಶ ಕಲಬುರ್ಗಿ,ಅಂಬ್ರೇಶ ಪೂಜಾರಿ,ಪ್ರಸಾದ ಎನ್.ಶೆಳ್ಳಿಗಿ,ಭೈರವ ಪೂಜಾರಿ,ವಿನೂತ ಹುಬ್ಳಿ,ರೋಹಿತ ಕಲಬುರ್ಗಿ,ಅಶೋಕ ಕುಮಾರ ಕಲಬುರ್ಗಿ,ಕೃಷ್ಣಾ,ಅಪೂರ್ವ ನಂದದಾಸ್ ವಿವಿಧ ಪಾತ್ರಗಳ ಮೂಲಕ ಅಭಿನಯಿಸಿದರು. ಮದಸೂಧನ ಮಾಸ್ತಾರ್ ಸಂಚಿಕೆ ನಿರ್ದೇಶಿಸಿದರು,ವಿಜಯಲಕ್ಷ್ಮೀ ವಸ್ತ್ರಾಲಂಕಾರ, ಕಲ್ಯಾಣಿ ಸಂಗೀತ ನೀಡಿದರು.ಮಲ್ಲಯ್ಯ ಕಮತಗಿ,ಬಸವರಾಜ ಜಮದ್ರಖಾನಿ,ಬಸವರಾಜಪ್ಪ ನಿಷ್ಠಿ ದೇಶಮುಖ, ಶ್ರೀನಿವಾಸ ಜಾಲವಾದಿ, ಮಾಳಪ್ಪ ಕಿರದಳ್ಳಿ,ಸಿದ್ದಯ್ಯಸ್ವಾಮಿ ಸ್ಥಾವರಮಠ,ಅಹ್ಮದ ಪಠಾಣ,ಮೂರ್ತಿ ಬೊಮ್ಮನಹಳ್ಳಿ,ಮಲ್ಲಿಕಾರ್ಜುನ ಕಮತಗಿ,ಮಹಾಂತೇಶ ದೇವರಗೋನಾಲ,ರಾಘವೇಂದ್ರ ಹಾರಣಗೇರಾ,ಯಲ್ಲಪ್ಪ ಚಿನ್ನಾಕಾರ,ತಿಪ್ಪಣ್ಣ ಶೆಳ್ಳಿಗಿ,ನಿಂಗಣ್ಣ ಗೋನಾಲ ಉಪಸ್ಥಿತರಿದ್ದರು. ತಾಲೂಕಿನ ನೂರಾರು ಜನ ಭಾಗವಹಿಸಿ ನಾಟಕ ವೀಕ್ಷಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

4 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

14 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

14 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

14 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago