ಬಿಸಿ ಬಿಸಿ ಸುದ್ದಿ

ಬಸವೇಶ್ವರ ಪತ್ತಿನ ಸಹಕಾರ ಸಂಘದ ಬೆಳ್ಳಿ ಹಬ್ಬ: ಬಸವೇಶ್ವರ ಮೂರ್ತಿ ನಿರ್ಮಾಣಕ್ಕೆ ಅಡಿಗಲ್ಲು

ಸುರಪುರ: ಇಂದು ಬಸವೇಶ್ವರ ಪತ್ತಿನ ಸಹಕಾರ ಸಂಘದ ಬೆಳ್ಳಿ ಹಬ್ಬದಲ್ಲಿ ಪಾಲ್ಗೊಂಡಿದ್ದು ತುಂಬಾ ಸಂತೋಷವಾಗಿದೆ,ಈ ಸಂಘವು ಕಲ್ಯಾಣ ಮಂಟಪ,ವಿದ್ಯಾರ್ಥಿ ನಿಲಯ ಸೇರಿದಂತೆ ಅನೇಕ ಸಮಾಅಜಮುಖಿ ಕೆಲಸ ಮಾಡಿದೆ.ಬಸವೇಶ್ವರ ಪತ್ತಿನ ಸಹಕಾರ ಸಂಘ ನಮಗೂ ಮಾದರಿಯಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು.

ನಗರದ ರಂಗಂಪೇಟೆಯ ವೀರಶೈವ ಲಿಂಗಾಯತ ಕಲ್ಯಾಣ ಮಂಟಪದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂಘದ ಬೆಳ್ಳಿ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇವತ್ತು ಸಹಕಾರ ಸಂಘಗಳ ಸೇವೆ ಸಮಾಜಕ್ಕೆ ಅವಶ್ಯವಾಗಿದೆ.ರಾಷ್ಟ್ರೀಕೃತ ಬ್ಯಾಂಕುಗಳು ಗ್ರಾಹಕರ ಹಿತ ಕಾಯುವುದಿಲ್ಲ.ಸಹಕಾರ ಸಂಘಗಳೆ ಮುಖ್ಯವಾಗಿವೆ.ನಮ್ಮ ವಿಜಯಪುರದಲ್ಲಿ ಆರಂಭಿಸಿರುವ ಸಿದ್ದಸಿರಿ ಪತ್ತಿನ ಸೌಹಾರ್ಧದಲ್ಲಿ ಸುಮಾರು ೫೩೦ ಕೋಟಿ ಹಣ ಹೊಂದಿದ್ದು ಒಟ್ಟು ೧೨೧ ಶಾಖೆಗಳನ್ನು ಹೊಂದಿದೆ.ಅದರಂತೆ ಸುರಪುರ ಶಾಖೆಯು ಬೆಳೆಯುವಂತಾಗಲಿ ಎಂದರು.ಹಿಂದೆ ಅರುಣ ಜೇಟ್ಲಿಯವರಿಗೆ ಸಹಕಾರ ಸಂಘಗಳಿಗೆ ವಿಧಿಸುವ ತೆರಿಗೆ ರದ್ದು ಮಾಡುವಂತೆ ಮನವಿ ಮಾಡಿರುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.ಇವತ್ತು ಸಹಕಾರ ಸಂಘಗಳಿಗೆ ನಕಲಿ ಕಂಪನಿಗಳಿಂದ ಕೆಟ್ಟ ಹೆಸರು ಬರುತ್ತಿದೆ.ಅಂತಹ ನಕಲಿ ಕಂಪನಿಗಳಿಗೆ ಕಡಿವಾಣ ಬೀಳಬೇಕಿದೆ ಎಂದರು.

ಮಠಾಧೀಶರು ರಾಜಕಾರಣದಲ್ಲಿ ಕೈಯಾಡಿಸುವುದು ಬೇಡ,ಅವರಿಗೆ ಕೋಡಿ ಇವರಿಗೆ ಕೊಡಿ ಎನ್ನುವುದು ನೀವು ಮಾಡಿದರೆ ನಾವೆಲ್ಲ ಮಠಗಳಲ್ಲಿರುತ್ತೆವೆ,ಸ್ವಾಮಿಗಳು ರಾಜಕಾರಣ ಮಾಡಿ ಎಂದು ಹೆಸರು ಹೇಳದೆ ವಚನಾನಂದರ ಕುರಿತು ವ್ಯಂಗ್ಯದ ಮಾತನಾಡಿದರು.

ಬಸವೇಶ್ವರ ಪುತ್ಥಳಿ ನಿರ್ಮಾಣ ಹಾಗೂ ಕಕ್ಕೇರಾ ಶಾಖೆಯ ಕಟ್ಟಡದ ಅಡಿಗಲ್ಲು ಸಮಾರಂಭ ನೆರವೇರಿಸಿದ ಶಹಾಪುರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ,ಸಹಕಾರ ಸಂಘದಲ್ಲಿಯೇ ಎಲ್ಲರು ವ್ಯವಹಾರವನ್ನು ನಡೆಸಿ ಇದರಿಂದ ಹೆಚ್ಚಿನ ಲಾಭ ಬಂದು ಸಮಾಜದ ಬೆಳವಣಿಗೆಗೆ ಅನುಕೂಲವಾಗಲಿದೆ.ಸುರಪುರದಲ್ಲಿ ಬಸವೇಶ್ವರರ ಮೂರ್ತಿ ನಿರ್ಮಾಣದ ಅವಶ್ಯಕತೆಯಿತ್ತು ಅದನ್ನು ಈಗ ಮಾಡುತ್ತಿರುವುದು ಸಂತೋಷದ ಸಂಗತಿ ನಾನುಕೂಡ ತನು ಮನ ಧನ ಸಹಕಾರ ನೀಡುವುದಾಗಿ ತಿಳಿಸಿದರು.ಇದೇ ಸಂದರ್ಭದಲ್ಲಿ ಕರ್ನಾಟಕಕ್ಕೆ ಯಡಿಯೂರಪ್ಪನವರ ನಂತರ ಯತ್ನಾಳರು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.ನಂತರ ಸಹಕಾರ ಮಹಾ ಮಂಡಳದ ರಾಜ್ಯ ನಿರ್ದೇಶಕ ಶೇಖರಗೌಡ ಮಾಲಿಪಾಟೀಲ ಹಾಗು ಪ್ರಾಸ್ತಾವಿಕವಾಗಿ ಸುರೇಶ ಸಜ್ಜನ ಮಾತನಾಡಿದರು.

ಕಾರ್ಯಕ್ರಮದ ಆರಂಭದಲ್ಲಿ ಬಸವೇಶ್ವರರ ಹಾಗು ಸಹಕಾರ ಕ್ಷೇತ್ರದ ಪಿತಾಮಹ ಸಿದ್ದನಗೌಡ ಪಾಟೀಲರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ,ನಂತರ ಸುರಪುರ ಸಂಸ್ಥಾನದ ರಾಜಾ ಲಕ್ಷ್ಮೀನಾರಾಯಣ ನಾಯಕ ಸಹಕಾರ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ವೇದಿಕೆ ಮೇಲಿನ ಎಲ್ಲರು ಜ್ಯೋತಿ ಬೆಳಗಿ ಚಾಲನೆ ನೀಡಿದರು ಹಾಗೂ ಕಾಯಕ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಭುಲಿಂಗ ಮಹಾಸ್ವಾಮೀಜಿ, ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಅಡವಿಲಿಂಗ ಮಹಾರಾಜರು, ಶಿವಕುಮಾರ ಮಹಾಸ್ವಾಮೀಜಿ, ಗುರುಶಾಂತಮೂರ್ತಿ ಶಿವಾಚಾರ್ಯರು, ಶಾಂತರುದ್ರ ಮಹಾಸ್ವಾಮೀಜಿ, ಚನ್ನಬಸವ ಶಿವಾಚಾರ್ಯರು, ಸಿದ್ದಚನ್ನ ಮಲ್ಲಿಕಾರ್ಜುನ ಶಿವಾಚಾರ್ಯರು, ಬಸವಲಿಂಗ ದೇವರು, ಮಹಾಂತೇಶ ಹಿರೇಮಠ, ಚೆಟ್ನಳ್ಳಿ ಸ್ವಾಮೀಜಿ ಸಾನಿಧ್ಯವಹಿಸಿದ್ದರು.ವೇದಿಕೆ ಮೇಲೆ ರಾಜಶೇಖರಗೌಡ ವಜ್ಜಲ ಜಿ.ಪಂ ಅಧ್ಯಕ್ಷ, ಬಸವಲಿಂಗಪ್ಪ ಪಾಟೀಲ, ಬಸವರಾಜ ಜಮದ್ರಖಾನಿ, ಸಂಗನಬಸಪ್ಪ ಸಜ್ಜನ, ರಾಜಾ ಮುಕುಂದ ನಾಯಕ, ಬಸವರಾಜ ಸ್ಥಾವರಮಠ, ಬಸನಗೌಡ ಯಡಿಯಾಪುರ, ದೊಡ್ಡ ದೇಸಾಯಿ, ಶಂಕರ ನಾಯಕ, ಸುರೇಂದ್ರನಾಥ ಸಜ್ಜನ, ಬಾಪುಗೌಡ ಪಾಟೀಲ, ಶಾಂತು ಬಾರಿ, ಬಸವರಾಜಪ್ಪ ನಿಷ್ಠಿ,ಪ್ರಕಾಶ ಸಜ್ಜನ, ಸೂಗುರೇಶ ವಾರದ, ವಿರೇಶ ದೇಶಮುಖ, ಶಾರದಾ ಎಂ.ಜಾಲಹಳ್ಳಿ, ಜಯಲಲಿತ ಪಾಟೀಲ, ಮಂಜುನಾಥ ಜಾಲಹಳ್ಳಿ, ಬಸವರಾಜ ಬೂದಿಹಾಳ, ರವಿಚಂದ್ರ ಹುದ್ದಾರ, ವಿರಸಂಗಪ್ಪ ಹಾವೇರಿ ಉಪಸ್ಥಿತರಿದ್ದರು.

ವಿರೇಶ ಪಂಚಾಂಗಮಠ, ಚಂದ್ರಶೇಖರ ಡೊಣೂರ, ಶಿವರುದ್ರ ಉಳ್ಳಿ, ಚನ್ನು ದೇಸಾಯಿ, ರವಿಗೌಡ ಹೆಮನೂರ, ಪ್ರದೀಪ ಕದರಾಪುರ ಸೇರಿ ಅನೇಕರಿದ್ದರು. ಅಮರಯ್ಯಸ್ವಾಮಿ ನಿರೂಪಿಸಿದರು, ಪ್ರಕಾಶ ಅಂಗಡಿ ಸ್ವಾಗತಿಸಿದರು, ಕ್ಷೀರಲಿಂಗಯ್ಯ ಬೋನಾಳ ವಂದಿಸಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

58 mins ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

60 mins ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 hour ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

18 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

20 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago