ಸುರಪುರ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮೀತ ಶಾ ಅವರು ಹುಬ್ಬಳಿಗೆ ಸಿಎಎ ಪರವಾಗಿ ಜಾಗೃತಿ ಮೂಡಿಸಲು ಬರುತ್ತಿದ್ದಾರೆ, ಅಮೀತ ಶಾ ಅವರು ಬಂದಾಗ ಏನು ಚರ್ಚೆಯಾಗುತ್ತದೆ ಗೊತ್ತಾಗುವದಿಲ್ಲ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಈ ವೇಳೆ ಚರ್ಚೆ ಆಗಬಹುದು,ಆಗಲಿಕಿಲ್ಲ ಸಚಿವ ಸಂಪುಟ ಸೇರ್ಪಡೆ ಹೆಸರು ಅಂತಿಮ ಅದು ದೇಹಲಿಯಲ್ಲಿ ಆಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ನೀಡಿದರು.
ಅವರು ನಗರದ ಬಸವೇಶ್ವರ ಪತ್ತಿನ ಸಹಕಾರ ಸಂಘದ ಬೆಳ್ಳಿ ಮೊಹೊತ್ಸವ ಕಾರ್ಯಕ್ರಮಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರಕಾರ ರಚನೆ ಮಾಡಲು ಯಾರು ಸಹಾಯ ಮಾಡಿದ್ದಾರೆ ಅವರಿಗೆ ಸಚಿವ ಸ್ಥಾನ ಸಿಗುವ ವಿಶ್ವಾಸ, ಸಿಎಂ ಬಿಎಸ್ ವೈ ಹಾಗೂ ಅಮೀತ ಶಾ ಅವರು ಕೂಡಿ, ಸರಕಾರ ಬರಲು ಕಾರಣರಾದವರಿಗೆ ಒಳ್ಳೆದು ಮಾಡುವ ನಿರ್ಣಯಕೈಗೊಳ್ಳುತ್ತಾರೆ ಎಂದರು.
ನಂತರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಮಾಜಿ ಸಚಿವ ಮುರುಗೇಶ ನಿರಾಣಿ ಅವರು ಸಿಎಂ ಗೆ ಕ್ಷೇಮೆ ಕೇಳಿದ ವಿಚಾರ, ನಾನು ಯಾರಿಗು ಏನು ಹೇಳಲ್ಲ, ವಚನಾನಂದ ಸ್ವಾಮಿಜಿ ಸಿಎಂಗೆ ನಿರಾಣಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯ ಮಾಡಿರುವ ಬಗ್ಗೆ, ಅನೇಕ ಸ್ವಾಮಿಗಳು ಈ ಘಟನೆ ಬಗ್ಗೆ ಕ್ಷಮೆ ಕೋರಿ ವಿಶಾಧ ವ್ಯಕ್ತಪಡಿಸಿದ್ದಾರೆ, ಮುರುಗೇಶ ನಿರಾಣಿ ಅವರು ಸಿಎಂಗೆ ಕ್ಷೆಮೆ ಕೇಳಬೇಕಾಗುತ್ತದೆ, ತಪ್ಪು ಮಾಡಿದವರು ಕ್ಷೆಮೆ ಕೊರುವದು ಧರ್ಮ ಆ ಕೆಲಸ ನಿರಾಣಿ ಮಾಡಿದ್ದಾರೆ ,ಮಠಾದೀಶರಾಗಿ ಸ್ವಾಮಿಗಳು ರಾಜಕೀಯದ ಬಗ್ಗೆ ಒತ್ತಡ ಹಾಕುವುದು ಸರಿಯಲ್ಲ, ಸಚಿವ ಸ್ಥಾನದ ಬಗ್ಗೆ ಒತ್ತಡ ಹಾಕುವದು ಅವರ ಕೆಲಸವಲ್ಲ. ಸ್ವಾಮೀಜಿ ಗಳು ಕೆಲಸ ಧರ್ಮದ ಕೆಲಸ ಹಾಗೂ ಬಡಬಗ್ಗರ ಹಿತ ಕಾಪಾಡಬೇಕು. ಸ್ವಾಮಿಗಳು ಹಾಗೂ ರಾಷ್ಟ್ರಪತಿಗಳು ಯಾರೆ ಆಗಲಿ ತಪ್ಪು ಮಾಡಿದ್ರು ಅದು ತಪ್ಪೆ. ಎಂದು ತಿಳಿಸಿದರು.
ಕಾಂಗ್ರೆಸ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಆಗಿ ಉಳಿದಿಲ್ಲ ಅದು ಪಾಕಿಸ್ತಾನದ ರಾಷ್ಟ್ರೀಯ ಕಾಂಗ್ರೆಸ್ ಕಾಂಗ್ರೆಸ್ ಪಕ್ಷದ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ವ್ಯಂಗ್ಯವಾಡಿದರು. ರಾಜ್ಯದಲ್ಲಿ ಎಸ್ ಡಿಪಿಐ ಹಾಗೂ ಪಿಎಫ್ ಐ ಸಂಘಟನೆ ನಿಷೇಧ ಮಾಡುವ ಸರಕಾರದ ನಿರ್ಧಾರದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ರಾಜ್ಯದಲ್ಲಿ ದೇಶ ವಿರೋಧಿ ಚಟುವಟಿಕೆ ಮಾಡುವಂತಹ ಯಾವುದೇ ಸಂಘಟನೆಗಳಿದ್ರು ನಿಷೇಧ ಮಾಡಬೇಕು. ಅವುಗಳ ಮೇಲೆ ತೀವ್ರ ನಿಗಾವಹಿಸಬೇಕು. ರಾಜ್ಯದಲ್ಲಿ ಗುಪ್ತಚರ ಇಲಾಖೆ ಚುರುಕುಗೊಳಿಸಬೇಕು. ದೇಶ ವಿರೋಧಿ ಚಟುವಟಿಕೆ ನೀಡುವರ ಮೇಲೆ ಕುಮ್ಮಕ್ಕು ನೀಡುವ ರಾಜಕೀಯ ನಾಯಕರ ಮೇಲೆ ನಿಗಾ ಇಡಬೇಕು.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ದೇಶ ಬೇಕಾಗಿಲ್ಲ. ತಮ್ಮ ಓಟ್ ಬ್ಯಾಂಕ್ ಗಾಗಿ ದೇಶ ಮಾರಾಟ ಮಾಡಿದ್ರು ಪರವಾಗಿಲ್ಲ ಎನ್ನುವ ಧೋರಣೆ ಸಂಸ್ಕೃತಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳದ್ದು. ಎಸ್ ಡಿಪಿಐ ಹಾಗೂ ಪಿಎಫ್ ಐ ಸಂಘಟನೆಗಳು ದೇಶ ಸೇವೆ ಮಾಡಲ್ಲ. ಅವರು ಪಾಕಿಸ್ತಾನದ ಏಜೆಂಟಗಳಂತೆ ವರ್ತಿಸುತ್ತಿದ್ದಾರೆ ಹಾಗೂ ಐಎಸ್‌ಐ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಇದೆ. ಇವರು ಎಲ್ಲಾ ಕಡೆ ಕೋಮು ಗಲಭೆ ಮಾಡುವ ಕುತಂತ್ರ ಹೊಂದಿದ್ದಾರೆ. ಎಂದು ಗುಡುಗಿದರು.ರಾಮ ಮಂದಿರ ಆಯ್ತು, ಈಗಾಗಲೆ ಪೌರತ್ವ ಕಾಯಿದೆ ಬಂತು,ತಲಾಕ್ ನಿಷೇಧವಾಯ್ತು, ಮುಂದೆ ನಮ್ಮ ಯೋಜನೆ ಹಮ್ ದೊ ಹಮೆ ದೋ ಎನ್ನುವುದನ್ನು ಜಾರಿಗೆ ತರಬೇಕಾಗಿದೆ ಎಂದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…