ಬಿಸಿ ಬಿಸಿ ಸುದ್ದಿ

ಸಾಹಿತ್ಯ ಸಮ್ಮೇಳನ: ದಾಖಲೆ ಪ್ರಮಾಣದಲ್ಲಿ 21030 ಪ್ರತಿನಿಧಿಗಳ ನೋಂದಣಿ

ಕಲಬುರಗಿ: ಸಾಂಸ್ಕೃತಿಕ ಸಿರಿವಂತ ಹಾಗೂ ಸಾಮರಸ್ಯದ ನೆಲವಾಗಿರುವ ಕಲಬುರಗಿಯಲ್ಲಿ ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ದಾಖಲೆಯ ಪ್ರಮಾಣದಲ್ಲಿ 21030 ಪ್ರತಿನಿಧಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿ?ತ್ತಿನ ಅಧ್ಯಕ್ಷರು ಮತ್ತು ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ವೀರಭದ್ರ ಸಿಂಪಿ ಅವರು ತಿಳಿಸಿದರು.

ಶನಿವಾರ ಇಲ್ಲಿನ ಕನ್ನಡ ಸಾಹಿತ್ಯ ಪರಿ?ತ್ತಿನ ಭವನದಲ್ಲಿ ಸಾಹಿತ್ಯ ಸಮ್ಮೇಳನ ಅಂಗವಾಗಿ ವಿವರಿಸಲು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದೆ ನಡೆದ ರಾಯಚೂರಿನಲ್ಲಿ ೧೨೫೦೦, ಮೈಸೂರಿನಲ್ಲಿ ೧೩೦೦೦ ಹಾಗೂ ಧಾರವಾಡದಲ್ಲಿ ೧೩೫೦೦ ಜನ ನೋಂದಣಿ ಮಾಡಿಕೊಂಡಿದ್ದರು. ಆದರೆ ಕಲಬುರಗಿಯಲ್ಲಿ ದಾಖಲೆಯಾಗಿ ೨೧,೦೦೦ ಜನ ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ ೧೫೧೭೮ ಪುರುಷರು ಮತ್ತು ೫೮೫೨ ಮಹಿಳೆಯರು ಸೇರಿದ್ದಾರೆ. ಇದರಲ್ಲಿ ಕಲಬುರಗಿ ಜಿಲ್ಲೆಯಿಂದ ೩೫೦೦ಕ್ಕೂ ಹೆಚ್ಚು ಜನ ನೋಂದಣಿ ಮಾಡಿಕೊಂಡಿದ್ದಾರೆ ಎಂದರು.

೫೬೬ ಮಳಿಗೆಗಳ ನೋಂದಣಿ: ೩೭೯ ಪುಸ್ತಕ ಮತ್ತು ೧೭೭ ವಾಣಿಜ್ಯ ಮಳಿಗೆಗಳು ಸೇರಿದಂತೆ ಇದೂವರೆಗೆ ೫೬೬ ಮಳಿಗೆಗಳ ನೋಂದಣಿಯಾಗಿದ್ದು, ಎಲ್ಲವು ಗುಣಮಟ್ಟದಿಂದ ಕೂಡಿರಲಿವೆ ಎಂದರು.

ಕನ್ನಡಮ್ಮನ ತೇರು ಎಳೆಯಲು ಎಲ್ಲರೂ ಸಕ್ರಿಯವಾಗಿದ್ದಾರೆ: ನುಡಿ ಜಾತ್ರೆ ಅಂಗವಾಗಿ ಕನ್ನಡಮ್ಮನ ತೇರು ಎಳೆಯಲು ಜಿಲ್ಲೆಯ ಎಲ್ಲ ಕನ್ನಡಪರ ಸಂಘಟನೆಗಳು, ಸಾಹಿತಿಗಳು, ಅಧಿಕಾರಿಗಳು ಸಮ್ಮೇಳನ ಯಶಸ್ಸಿಗೆ ದುಡಿಯುತ್ತಿದ್ದು, ಅಕ್ಷರ ಜಾತ್ರೆ ಐತಿಹಾಸಿಕ ಯಶಸ್ವಿಯಾಗಲಿದೆ. ಇದರಲ್ಲಿ ಎರಡು ಮಾತಿಲ್ಲ ಎಂದು ಸಿಂಪಿ ವಿವರಿಸಿದರು.

೧೦ ಕೋಟಿ ರೂ. ಘೋಷಣೆ: ನುಡಿ ಜಾತ್ರೆಗೆ ರಾಜ್ಯ ಸರ್ಕಾರ ೧೦ ಕೋಟಿ ರೂ. ಘೋ?ಣೆ ಮಾಡಿದ್ದು, ಎರಡ್ಮೂರು ದಿನದಲ್ಲಿ ಅನುದಾನ ಬಿಡುಗಡೆಯಾಗಲಿದೆ. ಕನ್ನಡ ಸಾಹಿತ್ಯ ಪರಿ?ತ್ತಿನಿಂದ ಈಗಾಗಲೆ ೧೦ ಲಕ್ಷ ರೂ. ಅನುದಾನ ನೀಡಿದೆ. ಇದರ ಜೊತೆಗೆ ಜಿಲ್ಲೆಯಲ್ಲಿ ದೇಣಿಗೆ ಸಂಗ್ರಹ ಮುಂದುವರೆದಿದೆ ಎಂದರು.

೧೨೬ ಲೇಖನಗಳ ಸ್ಮರಣ ಸಂಚಿಕೆ ಸಿದ್ಧ: ೧೨೬ ಲೇಖನಗಳನ್ನು ಒಳಗೊಂಡ ೭೦೦ ಪುಟಗಳ ವೈವಿಧ್ಯಮಯ ಸ್ಮರಣ ಸಂಚಿಕೆ ಸಿದ್ಧಗೊಂಡಿದೆ. ಜನವರಿ ೨೭ರಿಂದ ಕಲಬುರಗಿ ಜಿಲ್ಲೆಯಲ್ಲಿ ಹಿರಿಯ ಸಾಹಿತಿಗಳಿಂದ ಆಮಂತ್ರಣ ಪತ್ರಿಕೆ ವಿತರಣೆಗೆ ಚಾಲನೆ ನೀಡಲಾಗುವುದು.

ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿ?ತ್ತಿನ ಗೌರವ ಅಧ್ಯಕ್ಷ ದೌಲತರಾವ ಪಾಟೀಲ, ಗೌರವ ಕಾರ್ಯದರ್ಶಿ ವಿಜಯಕುಮಾರ್ ಪೊರತೆ, ಮಡಿವಾಳಪ್ಪ ನಾಗರಹಳ್ಳಿ, ಎಸ್.ಸಿ.ಎಸ್.ಟಿ. ಅಧ್ಯಕ್ಷ ಅಂಬಾಜಿ ಕವಲಗಾ, ಉತ್ತರ ವಲಯದ ಲಿಂಗರಾಜ, ದಕ್ಷಿಣ ವಲಯದ ಆನಂದ ನಂದೂರ್ಕರ್ ಇದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

15 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

17 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

1 day ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

1 day ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago