ಆಳಂದ: ತಾಲೂಕಿನ ಕಿಣ್ಣಿಸುಲ್ತಾನ ಗ್ರಾಮದಲ್ಲಿ ಶಾಸಕ ಸುಭಾಷ್ ಆರ್ ಗುತ್ತೇದಾರ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಚಾಲನೆ ನೀಡಿದರು.
ನಬಾರ್ಡ್ ಅನುದಾನದ ೧೧ ಲಕ್ಷ ರೂ ವೆಚ್ಚದ ಅಂಗನವಾಡಿ ಕೇಂದ್ರ, ೫ ಲಕ್ಷ ರೂ ವೆಚ್ಚದ ಲಿಂಗಾಯತ ಸಮುದಾಯ ಭವನ, ೪ ಲಕ್ಷ ರೂ ವೆಚ್ಚದ ಅಂಗನವಾಡಿ ಆವರಣ ಗೋಡೆ, ವಾರ್ಡ ನಂ ೧ರಲ್ಲಿ ೧೦ ಲಕ್ಷ ರೂ ವೆಚ್ಚದ ಪೈಪಲೈನ್ ಕಾಮಗಾರಿ, ೧.೫೦ ಲಕ್ಷ ರೂ ವೆಚ್ಚದ ಹೈಮಾಸ್ಟ್ ವಿದ್ಯುದ್ವೀಪ ಅಳವಡಿಸುವ ಕಾಮಗಾರಿ, ಕಿಣ್ಣಿಸುಲ್ತಾನ ಮುನ್ನಹಳ್ಳಿ ಮಧ್ಯದ ೪.೫೦ ಲಕ್ಷ ವೆಚ್ಚದ ಕಚ್ಚಾ ರಸ್ತೆ ಕಾಮಗಾರಿ, ಕಿಣ್ಣಿಸುಲ್ತಾನ ರುದ್ರವಾಡಿ ಗ್ರಾಮದವರೆಗಿನ ೫೦ ಲಕ್ಷ ರೂ ವೆಚ್ಚದ ರಸ್ತೆ ಸೇರಿದಂತೆ ಗ್ರಾಮದಲ್ಲಿ ಸುಮಾರು ೧.೫೦ ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಹಣಮಂತರಾವ ಮಲಾಜಿ, ತಾ.ಪಂ ಸದಸ್ಯ ಸಿದ್ದಾರಾಮ ವಾಗ್ಮೋಡೆ, ಮಲ್ಲಿಕಾರ್ಜುನ ಕಂದಗೂಳೆ, ಸಿದ್ದಾರಾಮ ದೇಸಾಯಿ, ರಾಜು ಪಾಟೀಲ, ಬಸವರಾಜ ಕೋರೆ, ವಿಶ್ವನಾಥ ಧೂಳೆ, ಸಂತೋಷ ಭಾವಿ, ಶಿವಾನಂದ ಕುಂಬಾರ, ಸಂದೀಪ ಪಾಟೀಲ, ನಾಗರಾಜ ಧಮ್ಮೂರೆ, ಬಸವರಾಜ ಪಾಟೀಲ, ಪಿಡಬ್ಲುಡಿ ಎಇಇ ಈರಣ್ಣ ಕುಣಕೇರಿ, ಎಇ ಕರಬಸಪ್ಪ ರಾಜಕುಮಾರ, ಚೆನ್ನಬಸಪ್ಪ ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…