ವರದಿ: ಮೋಹನ ಮದ್ದೂರ
ಮಂಡ್ಯ: ಮಂಡ್ಯ ಫಲಿತಾಂಶದ ಕುರಿತ ಝಲಕ್ ನೀಡುವಂತಹ ಮಕ್ಕಳ ದೇವರ ಆಟದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ಮೈ ಮೇಲೆ ದೇವರು ಬಂದಂತೆ ಮಂಡ್ಯ ತಾಲೂಕಿನ ಲೋಕಸರ ಗ್ರಾಮದ ಚಿಕ್ಕ ಮಕ್ಕಳ ದೇವರ ಆಟದ ಮಾತುಗಳು ನೆಟ್ಟಿಗರ ಹುಬ್ಬೇರುವಂತೆ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಮಂದಿರ ಗುಡಿಯ ಹತ್ತಿರ ವಿರುವ ವಿಡಿಯೋದಲ್ಲಿ ಒಂದು ಮಗು ಮೈ ಮೇಲೆ ದೇವರು ಬಂದಂತೆ ಕುಣಿಯುತ್ತ, ಬಂದು ಭಕ್ತರ ಮಧ್ಯೆ ನಿಲ್ಲುತಾನೆ. ಭಕ್ತ ಬಂದು ನಿನ್ ಮೈಯಾಗ, ನಿಖಿಲ್, ಸುಮಲತಾ, ಎಂದು ಕೇಳುತಾನೆ. ಮೈ ಮೇಲೆ ದೇವರು ಬಂದಂತೆ ನಟಿಸಿದ ಮಗು ಸುಮಲತ ಎಂದು ಗದರಿಸುವ ಮೂಲಕ ಕುಣಿಯುತ್ತ, ಹೋಗುತ್ತಾನೆ. 24 ಸೆಂಕಡ್ ನ ಈ ವಿಡಿಯೋ ನಗೆ ತರಿಸುತ್ತದೆ.
ದೇಶದ ಹಾಗೂ ರಾಜ್ಯದ ಗಮನವೇ ತನ್ನತ್ತ, ಸೆಳೆದುಕೊಂಡಿದ್ದು, ಮಂಡ್ಯ ಕ್ಷೇತ್ರ ಲೋಕಸಭೆ ಚುನಾವಣೆ ಇದೀಗ ಮಕ್ಕಳ ಆಟಗಳಲ್ಲಿಯೂ ಒಕ್ಕರಿಸಿಕೊಂಡದ್ದು, ಈ ವಿಡಿಯೋನಲ್ಲಿ ನೋಡಬಹುದು.
ಮಂಡ್ಯ ಲೋಕ ಸಮರದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖೀಲ್ ಕುಮಾರಸ್ವಾಮಿ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಚಿತ್ರ ನಟ,ಮಾಜಿ ಸಚಿವ ದಿ.ಅಂಬರೀಶ ಅವರ ಪತ್ನಿ ಸುಮಲತಾ ಅಂಬರೀಶ ಅವರ ಮಧ್ಯೆ ನೇರ ಸ್ಪರ್ಧೆ ಇದ್ದು, ರಾಜ್ಯದ ಬಹುತೇಕ ಮಾಧ್ಯಮ ಹಾಗೂ ಸ್ಯಾಂಡ್ ವುಡ್ ವುಡ್ ಜಗತ್ತೆ ಚುನಾವಣೆ ಪ್ರಚಾರದಲ್ಲಿ ಈ ಕ್ಷೇತ್ರಕ್ಕೆ ಲಗ್ಗೆ ಇಟ್ಟಿತು.
ಇನ್ನೂ ಮೇ 23 ಕ್ಕೆ ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬೀಳಲಿದೆ, ಮಂಡ್ಯೆ ಲೋಕ ಸಭಾ ಕ್ಷೇತ್ರ ಯಾರ ಮಡಲಿಗೆ ಬಿಳಲಿದೆ ಎಂಬುದು ಮಂಡ್ಯ ಕ್ಷೇತ್ರ ಹಾಗೂ ರಾಜ್ಯದ ಜನರಲ್ಲಿ ಕುತೂಹಲ ಮನೆ ಮಾಡಿದೆ.
ಈ ವಿಡಿಯೋ ಕೇವಲ ಮಕ್ಕಳ ಆಟಕ್ಕೆ ಸಿಮಿತವಾಗಿದ್ದು, ಯಾವುದೇ ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿ ಪರವಾಗಿ ನೋಡದೆ, ನಗೆ ಚಟಾಕಿಯಾಗಿ ಸ್ವೀಕರಿಸಲು ಇ-ಮಿಡಿಯಾ ಲೈನ್ ಇಲ್ಲಿ ಪ್ರಸಾರ ಮಾಡುತ್ತಿದೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…