ಸುರಪುರ: ನಮ್ಮ ಹೆಳವ ಸಮಾಜದ ಸರ್ವತೋಮುಖ ಬೆಳವಣಿಗೆಗೆ ನಾವೆಲ್ಲರು ಸಂಘಟಿತರಾಗುವುದು ಮುಖ್ಯವಾಗಿದೆ.ಆದ್ದರಿಂದ ಇಂದು ಹೆಳವರ ಸಂಘದ ನೂತನ ತಾಲೂಕು ಪದಾಧಿಕಾರಿಗಳನ್ನು ನೇಮಕಗೊಳಿಸಲಾಗಿದೆ ಎಂದು ಹೆಳವ ಸಮಾಜದ ಜಿಲ್ಲಾಧ್ಯಕ್ಷ ಡಾ. ಹಣಮಂತ ಹಳಿಸಗರ ಮಾತನಾಡಿದರು.
ನಗರದ ಪ್ರಭು ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ತಾಲೂಕಿನಲ್ಲಿರುವ ಎಲ್ಲ ಹೆಳವ ಸಮುದಾಯದ ಬಂಧುಗಳಿಗೆ ಭೇಟಿ ನೀಡಿ ಸಂಘಟನೆಯನ್ನು ಬಲಪಡಿಸೋಣ ಹಾಗು ಸರಕಾರದಿಂದ ಸಮುದಾಯದ ಅಭಿವೃಧ್ಧಿಗಾಗಿ ಹೋರಾಟ ಮಾಡೋಣ ಎಂದರು.
ನಂತರ ನೂತನ ತಾಲೂಕು ಘಟಕದ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.ಗೌರವಾಧ್ಯಕ್ಷರಾಗಿ ರಾಮಣ್ಣ ಸತ್ಯಂಪೇಟೆ, ಅಧ್ಯಕ್ಷರಾಗಿ ಮಲ್ಲಪ್ಪ ಕೆಂಭಾವಿ,ಉಪಾಧ್ಯಕ್ಷ ದೇವಪ್ಪ ಮಂಗಳೂರು,ಪ್ರಧಾನ ಕಾರ್ಯದರ್ಶಿ ಅಂಬ್ರೇಶ ಹೆಗ್ಗಣದೊಡ್ಡಿ,ಖಜಾಂಚಿ ಪರಶುರಾಮ ದೇವಿಕೇರಿಯವರನ್ನು ನೇಮಿಸಲಾಯಿತು.ಈ ಸಂದರ್ಭದಲ್ಲಿ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಅಂಕಿತಾ,ಸಂತೋಷ ಚಿತಾಪೂರ,ಯಲ್ಲಪ್ಪ ಕೋರಿ,ಮರೆಪ್ಪ ಹಂಚಿನಾಳ,ನಾಗು ಸಗರ,ನೆಹರು ಹಳಿಸಗರ,ದೇವು ದೇವಕೇರಿ,ಸಾಬಣ್ಣ ತಡಬಿಡಿ ಇತರರು ಉಪಸ್ಥಿತರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…