ಸುರಪುರ: ಸ್ಥಳಿಯ ಕಾಂಗ್ರೇಸ್ ಪಕ್ಷದ ಯುವ ಮುಖಂಡರಾಗಿದ್ದ ದಿ. ಶ್ರೀ ರಾಜಾ ಶ್ರೀರಾಮನಾಯಕ ರವರ ಸ್ಮರ್ಣಾರ್ಥವಾಗಿ 08 ರಂದ ನಗರದ ಶ್ರೀ ಪ್ರಭು ಮಹಾ ವಿದ್ಯಾಲಯದ ಮೈದಾನದಲ್ಲಿ ರಾಜ್ಯ ಮಟ್ಟದ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ರಾಜಾ ಮೌನೇಶ್ವರ ನಾಯಕ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದು, ನಮ್ಮ ಆರ್.ಕೆ.ಎನ್ ಕ್ರಿಕೆಟ್ ಕ್ಲಬ್‌ನಿಂದ ಪ್ರತಿವರ್ಷ ಈ ಟೂರ್ನಿಯನ್ನು ಆಯೋಜಿಸಿಕೊಂಡು ಬರುತ್ತಿದ್ದು,ಈ ವರ್ಷವೂ ನಡೆಸಲಾಗುತ್ತಿದೆ. ಈಗಾಗಲೆ ಕ್ರೀಡಾಕೂಟದ ನೊಂದಣಿ ಕಾರ್ಯ ಆರಂಭವಾಗಿದ್ದು ದಿನಾಂಕ ೦೫-೦೨-೨೦೨೦ ತಂಡಗಳ ಹೆಸರು ನೊಂದಣಿಗೆ ಕೊನೆಯ ದಿನವಾಗಿದೆ.
ಟೂರ್ನಿಯ ಪ್ರಥಮ ಬಹುಮಾನ ೧.೫೦ ಲಕ್ಷ ರೂಪಾಯಿಗಳು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಇವರ ವತಿಯಿಂದ ಹಾಗು ಒಂದು ಟ್ರೋಫಿ ದ್ವಿತಿಯ ಬಹುಮಾನ ೭೫ ಸಾವಿರ ರೂಪಾಯಿಗಳು ಒಂದು ಟ್ರೋಫಿ ವಿಠಲ ವಿ ಯಾದವ ರಾಜ್ಯ ಅಪೆಕ್ಸ್ ಬ್ಯಾಂಕ ನಿರ್ದೇಶಕರು ಹಾಗೂ ವೆಂಕೋಬ ಯಾದವ ಪ್ರಥಮ ದರ್ಜೆ ಗುತ್ತಿಗೆದಾರರು ಇವರುಗಳಿಂದ ನೀಡಲಾಗುತ್ತಿದೆ.ಇದರ ಜೊತೆಗೆ ಇನ್ನೂ ಅನೇಕ ವೈಯಕ್ತಿಕವಾದ ಬಹುಮಾನಗಳನ್ನು ನೀಡಲಾಗುತ್ತಿದ್ದು, ಪಂದ್ಯಾವಳಿಗಳಲ್ಲಿ ಭಾಗವಹಿಸುವವರು ಹೆಚ್ಚಿನ ಮಾಹಿತಿಗಾಗಿ ಸಂಪತ್(ಚೀನಿ ಮರೆಪ್ಪ):೯೪೪೮೫೨೨೨೨೨, ವೆಂಕಟೇಶ ಸೂರ್ಯವಂಶಿ: ೯೭೩೧೬೩೪೪೮೫೬, ಸಂಕೇತ ಬುಕ್‌ಸ್ಟಾಲ್:೮೮೬೧೪೮೭೯೪೭, ವೆಂಕಟೇಶ ಸ್ಪೊರ್ಟಸ್ ಗ್ಯಾಲರಿ: ೯೮೪೫೭೭೯೧೪೩ ಇವರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಆಯೋಜಕ ಮಂಡಳಿ ವತಿಯಿಂದ ತಿಳಿಸಿದ್ದಾರೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…