ಬಿಸಿ ಬಿಸಿ ಸುದ್ದಿ

ಕಾಲೇಜುಗಳಿಗೂ ಮಧ್ಯಾಹ್ನ ಪೌಷ್ಟಿಕ ಆಹಾರ ಕೊಡಿ: ಮಹದೇವ

ಕಲಬುರಗಿ: ಯುವಜನರ ಸರ್ವತೋಮುಖ‌ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ರಾಜ್ಯ ಸರ್ಕಾರವು ಸರಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಮಧ್ಯಾಹ್ನದ ಪೌಷ್ಠಿಕ ಆಹಾರ ಯೋಜನೆ ಜಾರಿಗೆ ತರಬೇಕು  ಎಂದು ಯುವ ಮುನ್ನಡೆ ತಂಡದ ಮುಂದಾಳು ಮಹದೇವ ಅಭಿಪ್ರಾಯಪಟ್ಟರು.

ನಗರದ ಎಂ.ಪಿ.ಎಚ್.ಎಸ್ ಪದವಿಪೂರ್ವ ಕಾಲೇಜಿನಲ್ಲಿ ಯುವ ಮುನ್ನಡೆ ಮತ್ತು ಸಂವಾದ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಡೆದ ‘ಯುವಜನ ಆರೋಗ್ಯ ಅರಿವಿನ ಅಭಿಯಾನ’ ಕುರಿತು ಮಾತನಾಡುತ್ತ ಯುವಜನ ಸರ್ವತೋಮುಖ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ರಾಜ್ಯ ಸರ್ಕಾರವು ಸರಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಮಧ್ಯಾಹ್ನದ ಪೌಷ್ಠಿಕ ಆಹಾರ ಯೋಜನೆ ಜಾರಿಗೆ ತರಲಿ. ಕರ್ನಾಟಕ ರಾಜ್ಯ ಯುವಜನ ಆಯೋಗ ಸ್ಥಾಪನೆ ಮಾಡಲಿ. ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯ ಯುವನೀತಿ-2012 ನ್ನು ಜಾರಿಗೆ ತರಲಿ. ಯೂತ್ ಹೆಲ್ಪ್ ಲೈನ್ 18004251448 ಯುವಜನರ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುವ ಸಹಾಯವಾಣಿಯಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿ. ಯುವ ಸ್ಪಂದನ ಕೇಂದ್ರಗಳಲ್ಲಿ ತರಬೇತಿ ಹೊಂದಿದ ಆಪ್ತ ಸಮಾಲೋಚಕರನ್ನು ನೇಮಕ ಮಾಡಬೇಕು ಮತ್ತು ತಾಲ್ಲೂಕು ಕೇಂದ್ರಗಳಲ್ಲಿಯೂ ಯುವಸ್ಪಂದನ ಆಪ್ತ ಸಮಾಲೋಚನಾ ಕೇಂದ್ರಗಳನ್ನು ತೆರೆಯಲಿ ಎಂದರು.

ನಂತರ ಯುವ ಮುನ್ನಡೆ ತಂಡದ ಸದಸ್ಯೆ ಲಕ್ಷ್ಮೀ ಮಾತನಾಡಿ ದೇಶದಲ್ಲಿ ನಡೆಯುವ ಒಟ್ಟು ಆತ್ಮಹತ್ಯೆಯ ಪ್ರಕರಣಗಳಲ್ಲಿ ಸುಮಾರು 40% ಮಂದಿ 15 ರಿಂದ 29 ವಯಸ್ಸಿನವರು ಎಂದು ನ್ಯಾಷನಲ್ ಕ್ರೈಂ ಬ್ಯೂರೋ ವರದಿಗಳು ಹೇಳುತ್ತವೆ.  15 ರಿಂದ 29 ವರ್ಷದೊಳಗಿನ ಯುವಜನರ ಸಾವು ಆತ್ಮಹತ್ಯೆ, ಹೆಚ್.ಐ.ವಿ ಸೋಂಕು, ಮದ್ಯ ಸೇವನೆಗೆ ಸಂಬಂಧಿಸಿದ ಕಾಯಿಲೆ, ಅಪೌಷ್ಟಿಕತೆಯ ಕಾರಣಕ್ಕೆ ಬರುವ ಕ್ಷಯ, ಭೇದಿ ಮುಂತಾದವುಗಳಿಂದ ಸಂಭವಿಸುತ್ತಿವೆ ಎಂದು ಕರ್ನಾಟಕ ಜ್ಞಾನ ಆಯೋಗದ ವರದಿ ಹೇಳುತ್ತಿದೆ ಎಂದರು. ಒಂದು ಅಧ್ಯಯನದ ಪ್ರಕಾರ ನಮ್ಮ ದೇಶದ 30% ಯುವಜನರಿಗೆ ಮಾನಸಿಕ ಕಾಯಿಲೆ ಮತ್ತ ಒತ್ತಡಗಳಿವೆ.

ಯುವಜನರ ಆರೋಗ್ಯ, ಅಪೌಷ್ಟಿಕತೆಯ ಕುರಿತಂತೆ ಬಹಳಷ್ಟು ಮಾಹಿತಿ ಲಭ್ಯವಿಲ್ಲ. ಆ ನಿಟ್ಟಿನಲ್ಲಿ ಅಧ್ಯಯನಗಳು ನಡೆಯಲಿ. ಅದಕ್ಕಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

ಯುವ ಮುನ್ನಡೆ ತಂಡದ ಸದಸ್ಯ ಮೌನೇಶ ವಗ್ಗನ್ ಮಾತನಾಡಿ ಯುವಜನರು ತಮ್ಮ ಆರೋಗ್ಯದ ರಕ್ಷಣೆಗಾಗಿ ಸ್ವತಃ ಸಾಕಷ್ಟು ಪ್ರಯತ್ನ ಮಾಡಬೇಕಿದೆ. ಜಂಕ್ ಫುಡ್ ಸೇವನೆ ಕಡಿಮೆ ಮಾಡಿ ಪೌಷ್ಠಿಕ ಆಹಾರ ಸೇವನೆ ಮಾಡಬೇಕಿದೆ. ವ್ಯಾಯಾಮ ಮಾಡುವುದು. ದುಷ್ಚಟಗಳಿಗೆ ಸಿಲುಕಿಕೊಳ್ಳದಂತೆ ನೋಡುವುದು ಅಪಾಯಕಾರಿ ಸಾಹಸಗಳ ಬಗ್ಗೆ ಎಚ್ಚರವಾಗಿರಿವುದು ಯುವಜನರು ಮಾಡಬೇಕಿರುವ ತುರ್ತು ಕೆಲಸಗಳು ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂಧಿ ರಾಜೇಂದ್ರ ದೊಡ್ಡಮನಜ, ನಾಗಪ್ಪ ಸರ್, ಸಂಗೀತಾ ಕಟ್ಟಿಮನಿ, ಸಂಗೀತಾ ಕಪ್ಪೂರ ಸಂವಾದ ಸಂಸ್ಥೆಯ ರುಕ್ಮಿಣಿ ಎನ್, ನಾಗೇಶ ಹರಳಯ್ಯ ಮತ್ತು ಯುವ ಮುನ್ನಡೆ ತಂಡದ ಸದಸ್ಯರಾದ ಸುನೀಲ ತಳಕೇರಿ, ಲಕ್ಷ್ಮೀ, ಮಹೇಶ ಕಟ್ಟಿಮನಿ ಉಪಸ್ಥಿತರಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

11 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

14 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

20 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

21 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

21 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago