ಚಿತ್ತಾಪುರ: ನಲಿ- ಕಲಿ ಕಾರ್ಯಕ್ರಮದ ಮೂಲಕ ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಮುಖ್ಯ ವಾಹಿನಿಗೆ ತರುವಲ್ಲಿ ಸಹಕಾರಿಯಾಗಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಅಭಿಪ್ರಯಾಪಟ್ಟರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಅಜೀಂ ಪ್ರೇಂಜೀ ಫೌಂಡೇಶನ್ ಸಂಸ್ಥೆ ಸಹಯೋಗದಲ್ಲಿ ಪಟ್ಟಣದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ‘ನಲಿ-ಕಲಿ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಮಕ್ಕಳು ಸ್ವಭಾವತಃ ಸೂಕ್ಷ್ಮ ಸ್ವಭಾವದವರು ಆಗಿರುತ್ತಾರೆ ಯಾವುದೇ ವಿಷಯವಾಗಲೀ ಅವರಿಗೆ ಸರಳ ರೀತಿಯಲ್ಲಿ ತಿಳಿಯುವ ಹಾಗೆ ಹೇಳಿದರೆ ಬಹು ಬೇಗ ಅರ್ಥಮಾಡಿಕೊಂಡು ಬಿಡುತ್ತಾರೆ, ನಲಿ-ಕಲಿ ಎಂದರೆ ತಪ್ಪುಗಳನ್ನು ತಿದ್ದಿಕೊಳ್ಳಬಹುದಾಗಿದೆ. ಈ ಮೂಲಕ ಕಲಿಯಲು ಅನುಕೂಲವಾಗುತ್ತವೆ. ಜೊತೆಗೆ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರತರಲು ಅನುಕೂಲವಾಗುತ್ತದೆ ಎಂದರು.
ಮಕ್ಕಳು ಯಾವ ವಿಷಯದಲ್ಲಿ ಮಕ್ಕಳು ಹಿಂದೆ ಇದ್ದಾರೆ, ಯಾವ ವಿಧ್ಯಾರ್ಥಿಗಳಿಗೆ ಸ್ವಲ್ಪ ನಾಚಿಕೆ ಸ್ವಭಾವದವರು ಆಗಿದ್ದಾರೆ ಅಂತವರನ್ನು ಗುರಿತಿಸಿ ಅವರ ಬೌದ್ದಿಕ ಬೆಳವಳಿಗೆಗೆ ಬೇಕಾಗುವ ರೀತಿಯ ಕಾರ್ಯಕ್ರಮ ಹಾಕಿಕೊಳ್ಳಬೇಕು, ಜೊತೆಗೆ ಪ್ರಶ್ನೆ ಕೇಳುವಂತೆ ಮಕ್ಕಳನ್ನು ತಯಾರು ಮಾಡಬೇಕು ಎಂದು ಸಲಹೆ ನೀಡಿದರು
ಅಲ್ಲದೆ ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಇಂತಹ ನಲಿ- ಕಲಿ ಕಾರ್ಯಕ್ರಮ ಏರ್ಪಡಿಸಲು ನಾನು ಸರ್ವರೀತಿಯ ಸಹಕಾರ ನೀಡುತ್ತೇನೆ, ಹಾಗೂ ಅಜೀಂ ಪ್ರೇಮಜಿ ಫೌಂಡೇಶನ್ ಯಾವುದೇ ರೀತಿಯ ಹಿಂಜರಿಕೆ ಮಾಡದೇ ಮುಂದೆ ಬಂದರೆ ಅದಕ್ಕೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು ನಾನು ಕೊಡಲು ತಯಾರಿದ್ದೇನೆ ಎಂದು ಶಾಸಕರು ಭರವಸೆ ಕೊಟ್ಟರು.
ಕಳೆದ ಐದು ವರ್ಷದಲ್ಲಿ ರೂ 800 ಕೋಟಿ ಹಣವನ್ನು ಕೇವಲ ಶೈಕ್ಷಣಿಕ ಕ್ಷೇತ್ರಕ್ಕೆ ಖರ್ಚು ಮಾಡಲಾಗಿದೆ. ಈಗ ಅದರ ದುಪ್ಪಟ್ಟು ಖರ್ಚು ಮಾಡಲು ತಯಾರಿದ್ದೇನೆ. ಶಿಕ್ಷಣವನ್ನು ಒದಗಿಸುವ ಮೂಲಕ ಈಗಿನ ಮಕ್ಕಳ ಭವಿಷ್ಯ ರೂಪಿಸುವುದರ ಜೊತೆಗೆ ಭದ್ರ ಸಮಾಜ ಹಾಗೂ ಸಧೃಢ ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ವೇದಿಕೆಯ ಮೇಲೆ ತಾಪಂ ಅಧ್ಯಕ್ಷ ಜಗದೇವರಡ್ಡಿ ಪೊಲೀಸ್ ಪಾಟೀಲ್,ಶಿವರುದ್ರ ಬೇಣಿ,ಶಿವಾನಂದ ಪಾಟೀಲ್,ಶಿಕ್ಷಣಾಧಿಕಾರಿಗಳಾದ ಶಂಕ್ರಮ್ಮ ಢವಳಗಿ,ಶೀಲಾಕಾಶಿ, ಪಾಷಾಮೀಯ ಖುರೇಷಿ, ಚಂದ್ರಶೇಖರ ಕಾಶಿ, ರುದ್ರೇಶ್, ಸೇರಿದಂತೆ ಮತ್ತಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…