ಸುರಪುರ: ನಗರದ ರಂಗಂಪೇಟೆ ತಿಮ್ಮಾಪುರದ ಸದ್ಗುರು ಸಹಜಾನಂದ ಸರಸ್ವತಿ ಸ್ವಾಮೀಜಿಗಳ ೮೫ ನೇ ಪುಣ್ಯಾರಾಧನೆ ಕಾರ್ಯಕ್ರಮವೂ ಬುಧವಾರದಿಂದ ಆರಂಭಗೊಂಡಿತು. ಮೂರು ದಿನಗಳ ಕಾಲ ನಡೆಯಲಿದೆ.
ಬುಧವಾರ ಮುಂಜಾನೆ ಪ್ರಧಾನ ಅರ್ಚಕರಾದ ಕಲ್ಲಂಭಟ್ ರಾಜ್ ಜೋಷಿ, ರವಿ ರಾಜ್ ಜೋಷಿ ಅವರಿಂದ ವಿವಿಧ ಕಾರ್ಯಕ್ರಮಗಳು ಸೇರಿದಂತೆ ಬೆಳಿಗ್ಗೆ ಎಂಟು ಗಂಟೆಗೆ ಧ್ವಜಾರೋಹಣ ಪಾರಂಪಾರಿಕ ಅಖಂಡ ಭಜನೆ ಆರಂಭವಾಯಿತು. ಬೆಳಿಗ್ಗೆ ೯ ಗಂಟೆಗೆ ಅನ್ನಪೂರ್ಣೇಶ್ವರಿ ಹಾಗೂ ಉಗ್ರಣ ಪೂಜೆ ನಡೆಯಿತು.
ಮೂರ್ತಿಗೆ ವಸ್ತ್ರಾಲಂಕಾರ ವಿವಿಧ ಅಭಿಷೇಕ ಜರುಗಿತು. ಪಾಂಡುರಂಗ ರುಕ್ಮಿಣಿ ದೇವಸ್ಥಾನದ ಭಜನೆ ಮೆರವಣಿಗೆ ಮೂಲಕ ಭಜನೆ ಆರಂಭವಾಯಿತು. ಶಹಾಪುರದ ಶರಣಪ್ಪ ಕಮ್ಮಾರ ಇತರರು ಭಜನೆ ನಡೆಸಿಕೊಟ್ಟರು ಹಾಗೂ ಅಹೋರಾತ್ರಿ ದಾಸವಾಣಿ ಭಜನೆ ಜರುಗಿತು.
ಈ ವೇಳೆ ಭೂಮ್‌ದೇವ್ ಮಹೇಂದ್ರಕರ್, ಜ್ಞಾನದೇವ ಪಾಣಿಭಾತೆ, ನಿಂಗಣ್ಣ ರಾಯಚೂರುಕರ್, ಹೊನ್ನಪ್ಪ ಹಳಿಜ್ವಾಳ, ಸೋಮಶೇಖರ್ ಶಾಬಾದಿ, ಜನಾರ್ಧನ್ ಪಾಣಿಭಾತೆ, ಮಾರುತಿ ಶಿರವಾಳ, ಸುರೇಶ ಅಂಬುರೆ, ಜನಾರ್ಧನ ಪಾಣಿಭಾತೆ, ಲಕ್ಷ್ಮಯ್ಯ ಕಲಕೊಂಡ, ಭೀಮು ಪತಂಗೆ, ಜಯಣ್ಣ ಪತಂಗೆ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…