ಸಹಜಾನಂದ ಸರಸ್ವತಿ ಸ್ವಾಮೀಜಿಗಳ ೮೫ನೇ ಪುಣ್ಯಾರಾಧನೆ ಆರಂಭ

0
39

ಸುರಪುರ: ನಗರದ ರಂಗಂಪೇಟೆ ತಿಮ್ಮಾಪುರದ ಸದ್ಗುರು ಸಹಜಾನಂದ ಸರಸ್ವತಿ ಸ್ವಾಮೀಜಿಗಳ ೮೫ ನೇ ಪುಣ್ಯಾರಾಧನೆ ಕಾರ್ಯಕ್ರಮವೂ ಬುಧವಾರದಿಂದ ಆರಂಭಗೊಂಡಿತು. ಮೂರು ದಿನಗಳ ಕಾಲ ನಡೆಯಲಿದೆ.

ಬುಧವಾರ ಮುಂಜಾನೆ ಪ್ರಧಾನ ಅರ್ಚಕರಾದ ಕಲ್ಲಂಭಟ್ ರಾಜ್ ಜೋಷಿ, ರವಿ ರಾಜ್ ಜೋಷಿ ಅವರಿಂದ ವಿವಿಧ ಕಾರ್ಯಕ್ರಮಗಳು ಸೇರಿದಂತೆ ಬೆಳಿಗ್ಗೆ ಎಂಟು ಗಂಟೆಗೆ ಧ್ವಜಾರೋಹಣ ಪಾರಂಪಾರಿಕ ಅಖಂಡ ಭಜನೆ ಆರಂಭವಾಯಿತು. ಬೆಳಿಗ್ಗೆ ೯ ಗಂಟೆಗೆ ಅನ್ನಪೂರ್ಣೇಶ್ವರಿ ಹಾಗೂ ಉಗ್ರಣ ಪೂಜೆ ನಡೆಯಿತು.

Contact Your\'s Advertisement; 9902492681

ಮೂರ್ತಿಗೆ ವಸ್ತ್ರಾಲಂಕಾರ ವಿವಿಧ ಅಭಿಷೇಕ ಜರುಗಿತು. ಪಾಂಡುರಂಗ ರುಕ್ಮಿಣಿ ದೇವಸ್ಥಾನದ ಭಜನೆ ಮೆರವಣಿಗೆ ಮೂಲಕ ಭಜನೆ ಆರಂಭವಾಯಿತು. ಶಹಾಪುರದ ಶರಣಪ್ಪ ಕಮ್ಮಾರ ಇತರರು ಭಜನೆ ನಡೆಸಿಕೊಟ್ಟರು ಹಾಗೂ ಅಹೋರಾತ್ರಿ ದಾಸವಾಣಿ ಭಜನೆ ಜರುಗಿತು.

ಈ ವೇಳೆ ಭೂಮ್‌ದೇವ್ ಮಹೇಂದ್ರಕರ್, ಜ್ಞಾನದೇವ ಪಾಣಿಭಾತೆ, ನಿಂಗಣ್ಣ ರಾಯಚೂರುಕರ್, ಹೊನ್ನಪ್ಪ ಹಳಿಜ್ವಾಳ, ಸೋಮಶೇಖರ್ ಶಾಬಾದಿ, ಜನಾರ್ಧನ್ ಪಾಣಿಭಾತೆ, ಮಾರುತಿ ಶಿರವಾಳ, ಸುರೇಶ ಅಂಬುರೆ, ಜನಾರ್ಧನ ಪಾಣಿಭಾತೆ, ಲಕ್ಷ್ಮಯ್ಯ ಕಲಕೊಂಡ, ಭೀಮು ಪತಂಗೆ, ಜಯಣ್ಣ ಪತಂಗೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here