ಕಲಬುರಗಿ: ಸತ್ಯಾತ್ಮರನ್ನು ಸ್ಮರಿಸಿಕೊಳ್ಳುವುದು ಸತ್‌ಸಂಪ್ರದಾಯವಾಗಿರುವ ಹಿನ್ನೆಲೆಯಲ್ಲಿ ವಿಶ್ವಜ್ಯೋತಿ ಪ್ರತಿಷ್ಠಾನದ ವತಿಯಿಂದ ಸಾಹಿತಿ ಲಿಂ.ಶಿವಯ್ಯ ಮಠಪತಿ ಸ್ಮರಣಾರ್ಥವಾಗಿ ಸರಣಿ ಉಪನ್ಯಾಸ ಮಾಲೆ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದೆ.
ಸೇಡಂನ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಚಾರ್ಯರಾಗಿ-ಆಡಳಿತಾಧಿಕಾರಿಯಾಗಿಯೂ ತನ್ಮೂಲಕ ಸಾಹಿತ್ಯ-ಸಂಸ್ಕೃತಿಗಳ ಜತೆಗೆ ಸಾಮಾಜಿಕ ಶಿಸ್ತು ಮೈಗೂಡಿಸಿಕೊಂಡಿದ್ದ ಮಾರ್ಗದರ್ಶಿ ಲಿಂ. ಶಿವಯ್ಯಾ ಮಠಪತಿ ಅವರಾಗಿದ್ದಾರೆ.
ಇಂಥ ಆದರ್ಶ ವ್ಯಕ್ತಿಯ ಸ್ಮರಣಾರ್ಥವಾಗಿ ಭಾವಗಾರುಡಿಗ ಬೇಂದ್ರೆ, ಸಿದ್ಧಯ್ಯಾ ಪುರಾಣಿಕ, ಹರ್ಡೇಕರ್ ಮಂಜಪ್ಪ, ಹರಿಶ್ಚಂದ್ರ ಕಾವ್ಯ, ಬಸವಣ್ಣ ಕಟ್ಟ ಬಯಸಿದ ಸಮಾಜ ಎಂಬ ಐದು ಉಪನ್ಯಾಸ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಪ್ರತಿಷ್ಠಾನದ ಸಂಸ್ಥಾಪಕರೂ ಆದ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ತಿಳಿಸಿದ್ದಾರೆ.
ಅದರ ಮೊದಲ ಭಾಗವಾಗಿ ಸೇಡಂ ಪಟ್ಟಣದ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಾಳೆ (ಜ.೩೧) ಶುಕ್ರವಾರದಂದು ಬೆಳಗ್ಗೆ ೧೧ ಗಂಟೆಗೆ ‘ವರಕವಿ ಎಂದರೆ… ಭಾವಗಾರುಡಿಗ ಬೇಂದ್ರೆ’ (ಅಂಬಿಕಾತನಯದತ್ತ ಜನ್ಮದಿನದ ನಿಮಿತ್ತ) ಅವರ ಕುರಿತು ಆಯೋಜಿಸಿದ ಸಮಾರಂಭವು ಸಾಹಿತ್ಯ ಪ್ರೇರಕ ಸಿದ್ದಪ್ಪ ತಳ್ಳಳ್ಳಿ ಉದ್ಘಾಟಿಸಲಿದ್ದು, ಬೇಂದ್ರೆ ಮಾಸ್ತರರೆಂದೇ ಖ್ಯಾತಿಯ ಸೇಡಂನ ಸಾಹಿತಿ-ಪತ್ರಕರ್ತ ಜಗನ್ನಾಥ ಎಲ್.ತರನಳ್ಳಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕಾಲೇಜಿನ ಪ್ರಿನ್ಸಿಪಾಲ್ ಡಾ.ಶಿವಶರಣಪ್ಪ ಧಾಬಾ ಅಧ್ಯಕ್ಷತೆ ವಹಿಸಲಿದ್ದು, ಪ್ರಮುಖರಾದ ಮನೋಹರ ದೊಂತಾ, ಶ್ರೀನಿವಾಸ ಕಾಸೋಜು, ಜನಪರ ಹೋರಾಟಗಾರ ಕಿಶೋರ ಗಾಯಕವಾಡ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…