ಬಿಸಿ ಬಿಸಿ ಸುದ್ದಿ

ಮರಡಿ ಮಲ್ಲಿಕಾರ್ಜುನ ಜಾತ್ರೆಯಲ್ಲಿ ಎತ್ತುಗಳಿಂದ ಭಾರ ಎಳೆಯುವ ಸ್ಪರ್ಧೆ

ಸುರಪುರ: ತಾಲೂಕಿನ ಲಕ್ಷ್ಮೀಪುರ ಗ್ರಾಮದ ಶ್ರೀ ಮರಡಿ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಎತ್ತುಗಳಿಂದ ಭಾರ ಎಳೆಯುವ ಸ್ಪರ್ಧೆಗೆ ಜಿಲ್ಲಾ ಪಂಚಾಯತಿ ಸದಸ್ಯ ಮರಿಲಿಂಗಪ್ಪ ಕರ್ನಾಳ ಚಾಳನೆ ನೀಡಿದರು.

ಎತ್ತುಗಳು ಭಾರ ಎಳೆಯುವ ಸಾಧನಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿ,ಇಂದು ಗ್ರಾಮೀಣ ಭಾಗದಲ್ಲಿ ಎತ್ತುಗಳ ಸಂಖ್ಯೆಯೆ ತೀರಾ ಕಡಿಮೆಯಾಗಿದೆ.ಮೊದಲು ಗ್ರಾಮೀಣ ಭಾಗವದಲ್ಲಿ ಜಾನುವಾರಗುಗಳಿಗಾಗಿ ಅನೇಕ ಸ್ಪರ್ಧೆಗಳನ್ನು ನಡೆಸಲಾಗುತ್ತಿತ್ತು,ಆದರೆ ಇಂದು ಎಲ್ಲಾ ಕ್ರೀಡೆಗಳು ಮಾಯವಾಗುತ್ತಿರುವ ದಿನಗಳಲ್ಲಿ ಶ್ರೀಮಠದ ಸ್ವಾಮೀಜಿಯವರು ರೈತರಲ್ಲಿ ಉತ್ಸಹ ಮೂಡಿಲು ಎತ್ತುಗಳಿಂದ ಭಾರ ಎಳೆಯುವ ಸ್ಪರ್ಧೆ ನಡೆಸುವ ಮೂಲಕ ಜಾನುವಾರಗಳ ಮೇಲಿನ ಪ್ರೇಮವನ್ನು ಮೆರೆದಿದ್ದಾರೆ ಎಂದರು.

ಶ್ರೀಗಿರಿ ಮಠದ ಬಸವಲಿಂಗ ದೇವರು ಮಾತನಾಡಿ,ಜಾನುವಾರುಗಳು ನಮ್ಮಂತೆ ಅವುಗಳಿಗು ನೋವು ನಲಿವು ಎಂಬುದು ಇರಲಿದೆ.ಅವುಗಳಲ್ಲು ನಲಿವನ್ನು ಕಾಣಲು ಇಂತಹ ಸ್ಪರ್ಧೆಗಳನ್ನು ನಡೆಸಬೇಕು.ಇಂದು ನಡೆಯುವ ಸ್ಪರ್ಧೆಯಲ್ಲಿ ಅತೀ ಹೆಚ್ಚಿನ ಪ್ರಮಾಣದ ಭಾರ ಎಳೆಯುವ ಮೂಲಕ ಪ್ರಥಮ ಸ್ಥಾನದಲ್ಲಿನ ಎತ್ತುಗಳ ಜೋಡಿಗೆ ಅರ್ಧ ತೊಲೆ ಬಂಗಾರವನ್ನು ತೊಡಿಸಲಾಗುವುದು.ದ್ವೀತಿಯ ಸ್ಥಾನದಲ್ಲಿನ ಎತ್ತುಗಳ ಜೋಡಿಗೆ ೯ ಸಾವಿರ ಹಾಗು ತೃತಿಯ ಸ್ಥಾನದ ಎತ್ತಿನ ಜೋಡಿಗೆ ೨ ಸಾವಿರ ೫ನೂರು ರೂಪಾಯಿಗಳ ಬಹುಮಾನ ನೀಡಲಾಗುವುದು.ಪ್ರಥಮ ಬಹುಮಾನವನ್ನು ಶ್ರೀಮಠದ ಭಕ್ತರಾದ ಸಿದ್ರಾಮರಡ್ಡಿಗೌಡ ಕರ್ನಾಳ ನೀಡುತ್ತಿದ್ದು ಇನ್ನುಳಿದ ಬಹುಮಾನ ಶ್ರೀಮಠದಿಂದ ನೀಡಲಾಗುವುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಆಂಜನೇಯ ರಾಮದುರ್ಗ,ಹಯ್ಯಾಳಪ್ಪ ಮಂಜಲಾಪುರ,ಸಿದ್ದಪ್ಪ ಯರಡೋಣಿ ಹಾಗು ಮಲ್ಲಪ್ಪ ಯರಡೋಣಿ ಸೇರಿದಂತೆ ಇತರೆ ರೈತರ ಎತ್ತುಗಳು ಸ್ಪರ್ಧೆಯಲ್ಲಿದ್ದವು.ಸೋಮೆಶ್ವರ ಶಿವಾಚಾರ್ಯ ಸ್ವಾಮೀಜಿ ಸಗರ,ರಾಜೇಂದ್ರ ಒಡೆಯರ್ ನವದಗಿ,ವಿಶ್ವರಾಧ್ಯ ದೇವರು ಚಟ್ನಳ್ಳಿ,ಗುಂಡಪ್ಪ ಮಟ್ಲ,ರಾಚಯ್ಯಸ್ವಾಮಿ,ಸೂಲಪ್ಪ ಕಮತಗಿ,ರಂಗನಾಥ ಜಾಲಹಳ್ಳಿ,ಚಂದ್ರಶೇಖರ ಡೊಣೂರ,ಮಲ್ಲು ಹೂಗಾರ ಸೇರಿದಂತೆ ಅನೇಕ ಜನ ರೈತರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

4 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

4 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

4 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

21 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

23 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago