ಬಿಸಿ ಬಿಸಿ ಸುದ್ದಿ

ಮಹಾತ್ಮ ಗಾಂಧಿ ಹುತಾತ್ಮ ದಿನ: ಸುರಪುರದಲ್ಲಿ ಸೌಹಾರ್ಧ ಸಂಕಲ್ಪದ ಮಾನವ ಸರಪಳಿ

ಯಾದಗಿರಿ, ಸುರಪುರ: ಸತ್ಯ ಅಹಿಂಸೆಯ ಪ್ರತೀಕದಂತಿದ್ದ ಮಹಾತ್ಮ ಗಾಂಧಿಯವರನ್ನು ದುಷ್ಟರು ಹತ್ಯೆ ಮಾಡುವ ಮೂಲಕ ಸತ್ಯವನ್ನು ಹರಣ ಮಾಡಿದರು,ಇಂದು ನಾವೆಲ್ಲರೂ ಮಹಾತ್ಮನ ಸಂದೇಶವನ್ನು ಅರಿತು ನಡೆಯುವ ಮೂಲಕ ಮಹಾತ್ಮನ ಹುತಾತ್ಮ ದಿನವನ್ನು ಮಹಾ ಸಂಕಲ್ಪದ ದಿನವನ್ನಾಗಿ ಆಚರಿಸಬೇಕಿದೆ ಎಂದು ಪ್ರಗತಿಪರ ಚಿಂತಕ ಯಲ್ಲಪ್ಪ ಚಿನ್ನಾಕಾರ ಮಾತನಾಡಿದರು.

ದಲಿತ ಪ್ರಗತಪರ ಹಾಗು ಅಲ್ಪಸಂಖ್ಯಾತ ಸಾಮೂಹಿಕ ಸಂಘಟನೆಗಳ ಒಕ್ಕೂಟದಿಂದ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಸೌಹಾರ್ದ ಸಂಕಲ್ಪದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಇಂದು ದೇಶದಲ್ಲಿ ಕೋಮು ಸಂಘರ್ಷ,ದಲಿತ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿವೆ.ಇವುಗಳನ್ನು ಖಂಡಿಸುವ ಜೊತೆಗೆ ದೇಶದಲ್ಲಿ ಶಾಂತಿ ಸಹಬಾಳ್ವೆ ನೆಲೆಸಲು ನಾವೆಲ್ಲ ಸಂಕಲ್ಪ ಮಾಡೋಣ ಎಂದರು.

ಹೋರಾಟಗಾರ ರಾಹುಲ ಹುಲಿಮನಿ ಮಾತನಾಡಿ,ದೇಶದಲ್ಲಿ ಇಂದು ಎಲ್ಲೆಡೆ ಅಶಾಂತಿ ತಾಂಡವವಾಡುತ್ತಿದೆ.ಇದರ ಮದ್ಯೆ ಸಿಎಎ,ಎನ್.ಆರ್.ಸಿ ಮತ್ತು ಎನ್.ಪಿ.ಆರ್ ಎಂಬ ಜನವಿರೋಧಿ ಕಾಯಿದೆಗಳನ್ನು ಕೇಂದ್ರ ಸರಕಾರ ಜಾರಿಗೆ ತರುವ ಮೂಲಕ ದೇಶದಲ್ಲಿನ ದಲಿತ,ಶೋಷಿತ,ಅಲ್ಪಸಂಖ್ಯಾತ,ಆದಿವಾಸಿ,ಬುಡಕಟ್ಟು ಸಮುದಾಯಗಳನ್ನು ಸಂಕಷ್ಟಕ್ಕೀಡು ಮಾಡುವ ಉದ್ದೇಶದಿಂದ ಇಂತಹ ಕಾಯಿದೆಗಳನ್ನು ತಂದಿದ್ದು,ಇದನ್ನು ದೇಶದ ಜನರು ವಿರೋಧಿಸುತ್ತಿದ್ದರು ಸರಕಾರ ತನ್ನ ಮೊಂಡು ಧೋರಣೆ ಮುಂದುವರೆಸುತ್ತಿರುವುದರ ವಿರುಧ್ಧ ಎಲ್ಲರೂ ಎದ್ದು ನಿಲ್ಲಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಉಪನ್ಯಾಸಕರ ಸಿದ್ದಯ್ಯ ಸ್ಥಾವರಮಠ ಮಾತನಾಡಿ,ಮಹಾತ್ಮ ಗಾಂಧಿ ಭೋದಿಸಿದ ಶಾಂತಿ,ಸಹಬಾಳ್ವೆ,ದೇಶಪ್ರೇಮವನ್ನು ಎಲ್ಲರಲ್ಲಿ ಬಿತ್ತುವ ಮೂಲಕ ಮಹಾತ್ಮನ ಹುತಾತ್ಮ ದಿನವನ್ನು ನಾವೆಲ್ಲರು ಸಾರ್ಥಕಗೊಳಿಸಬೇಕಿದೆ.ದುಷ್ಟ ಶಕ್ತಿಗಳಲ್ಲಿ ಒಳ್ಳೆಯ ಬುಧ್ಧಿ ಬೆಳೆಸಲು ನಾವೆಲ್ಲರು ಪಣ ತೊಡಬೇಕಿದೆ ಎಂದರು.ನಂತರ ಇದೇ ಸಂದರ್ಭದಲ್ಲಿ ಭಾಗವಹಿಸಿದ್ದ ಎಲ್ಲರಿಗು ಸಂವಿಧಾನದ ಮೂಲ ಆಶಯಗಳನ್ನು ಓದಿಸುವ ಮೂಲಕ ಪ್ರತಿಜ್ಞಾ ಸ್ವೀಕಾರ ಭೋದಿಸಿದರು.

ಮಾನವ ಸರಪಳಿ ರಚಿಸುವ ಮುನ್ನ ಡಾ: ಬಾಬಾ ಸಾಹೇಬ ಅಂಬೇಡ್ಕರ ವೃತ್ತದಿಂದ ಮಹಾತ್ಮ ಗಾಂಧಿ ವೃತ್ತದವರೆಗೆ ಶಾಂತಿ ಸಂದೇಶದ ಜಾಥಾ ನಡೆಸಿದರು ನಂತರ ಮಹಾರ‍್ಮ ಗಾಂಧಿಗೆ ಎರಡು ನಿಮಿಷಗಳ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮೂರ್ತಿ ಬೊಮ್ಮನಹಳ್ಳಿ,ಮಾಳಪ್ಪ ಕಿರದಳ್ಳಿ,ಖಾಜಾ ಖಲೀಲಹ್ಮದ ಅರಕೇರಿ,ಶಣಪ್ಪ ಅನಕಸುಗೂರ,ಭೀಮರಾಯ ಸಿಂದಗೇರಿ,ಅಬ್ದುಲ ಗಫೂರ ನಗನೂರಿ,ಮಹಿಬೂಬ ಒಂಟಿ,ಂಆಲಿದ ಅಹ್ಮದ ತಾಳಿಕೋಟೆ,ಮಜೀದ್ ಸಾಬ್,ಮುಫ್ತಿ ಅಬ್ದುಲ್ ಖದೀರ್,ಅಬೀದ್ ಹುಸೇನ ಪಗಡಿ,ಹೆಚ್.ಬಿ.ಇಲಕಲ್,ಇಸ್ತಾಕ್ ಹುಸೇನ ಸವಾರ,ಲಿಯಾಕತ್ ಹುಸೇನ್ ಉಸ್ತಾದ,ಮುಫ್ತಿ ಯಕಬಲ್ ಸಾಬ್ ಒಂಟಿ,ರಾಜ್ ಮಹ್ಮದ,ತೋಫಿಕ್ ಅಹ್ಮದ ಅರಕೇರಿ ಸೇರಿದಂತೆ ಅನೇಕರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

2 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

2 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

2 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

18 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

20 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago