ಸುರಪುರ: ಇದೇ ಮೊದಲ ಬಾರಿಗೆ ಪಕ್ಕದ ತಾಲೂಕಾದ ಶಹಾಪುರದ ತಾಲೂಕು ಕ್ರೀಡಾಂಗಣದಲ್ಲಿ ಫೆಬ್ರವರಿ ೪ ರಂದು ಸಾಯಂಕಾಲ ೫ ಗಂಟೆಗೆ ದೇಶದ ಪ್ರಖ್ಯಾತ ಚಿಂತಕರಾದ ಶ್ರೀ ಶ್ರೀ ರವಿಶಂಕರ ಗುರೂಜಿಯವರ ಕಲ್ಯಾಣ ಕರ್ನಾಟಕ ಮಹೋತ್ಸವ ಹಾಗೂ ಸತ್ಸಂಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಇದರಲ್ಲಿ ಎಲ್ಲರೂ ಭಾಗವಹಿಸುವಂತೆ ರವಿಶಂಕರ ಗುರೂಜಿಯವರ ಅನುಯಾಯಿ ಹನುಮಂತರಡ್ಡಿ ತಿಳಿಸಿದರು.
ನಗರದ ತಿಮ್ಮಾಪುರದಲ್ಲಿ ಹಮ್ಮಿಕೊಂಡಿದ್ದ ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಫೆಬ್ರವರಿ ೪ ರಂದು ಬೆಳಿಗ್ಗೆ ೧೧ ಗಂಟೆಗೆ ಭೀಮರಾಯನ ಗುಡಿಯ ಕೃಷಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ರೈತರ ಸಮಾವೇಶವನ್ನು ನಡೆಸಲಾಗುವುದು,ನಂತರ ಸಾಯಂಕಾಲ ಸತ್ಸಂಗ ನಡೆಯಲಿದೆ.ಆದ್ದರಿಂದ ರವಿಶಂಕರ ಗುರೂಜಿಯವರ ಹಿತ ವಾಣಿಯನ್ನು ಕೇಳಲು ತಾವೆಲ್ಲರು ಭಾಗವಹಿಸಿ.ಇದರಿಂದ ಮನಸ್ಸಿಗೆ ನೆಮ್ಮದಿ ಮಾತ್ರವಲ್ಲದೆ ನಮ್ಮ ದೈನಂದಿನ ಬದುಕಲ್ಲಿನ ಅನೇಕ ಕಷ್ಟಗಳಿಗೆ ಪರಿಹಾರೋಪಾಯ ದೊರೆಯಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನಗರ ಯೊಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೂಗುರೇಶ ವಾರದ ಮಾತನಾಡಿ,ಇಂದು ದೇಶದ ಬೇರೆ ಬೇರೆ ಭಾಗದಲ್ಲಿಯ ಜನರು ರವಿಶಂಕರ ಗುರೂಜಿಯವರ ಅನುಭವಾಮೃತದ ನುಡಿಗಳನ್ನು ಕೇಳಲು ಕಾತರರಾಗಿದ್ದಾರೆ.ಅಂತಹ ಮಹಾತ್ಮ ಗುರೂಜಿಯವರು ನಮ್ಮಲ್ಲಿಗೆ ಬರುತ್ತಿರುವುದು ಸಂತೋಷದ ಸಂಗತಿಯಾಗಿದೆ.ನಮ್ಮ ತಾಲೂಕಿನಿಂದ ವೀರಶೈವ ಲಿಂಗಾಯತ ಯುವ ವೇದಿಕೆ ನೇತೃತ್ವದಲ್ಲಿ ಎಲ್ಲಾ ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ಜೊತೆಗೆ ಎಲ್ಲರಿಗೂ ಕರೆದುಕೊಂಡು ಬರುವುದಾಗಿ ತಿಳಿಸಿದರು.
ಮತ್ತೋರ್ವ ಗುರೂಜಿಯವರ ಅನುಯಾಯಿ ಬಸವರಾಜ ಬೂದಿಹಾಳ ಮಾತನಾಡಿ,ವೀರಶೈವ ಲಿಂಗಾಯತ ಯುವ ವೇದಿಕೆಯಿಂದ ಗುರೂಜಿಯವರ ಆಗಮನದ ಬಗ್ಗೆ ಎಲ್ಲೆಡೆ ಪ್ರಚಾರಕಾರ್ಯ ನಡೆಸುವಂತೆ ಹಾಗು ಶಹಾಪುರಕ್ಕೆ ಅವರನ್ನು ಕರೆತರಲು ಮೆರವಣಿಗೆ ನಡೆಸುವಂತೆ ಸಲಹೆ ನೀಡಿದರು.ನಂತರ ಕಾರ್ಯಕ್ರಮದ ಕರಪತ್ರಗಳ ಬಿಡುಗಡೆಗೊಳಿಲಾಯಿತು. ರಾಕೇಶ್ ಹಂಚಾಟೆ,ಯುವ ವೇದಿಕೆ ರಾಜ್ಯ ಉಪಾಧ್ಯಕ್ಷ ಮಂಜುನಾಥ ಜಾಲಹಳ್ಳಿ, ಸಿದ್ದು ಬ್ಯಯಾ,ಶರಣು ಅರಕೇರಿ, ರವಿಕುಮಾರ ಗೌಡ ಹೆಮನೂರ,ಜಗದೀಶ ಪಾಟೀಲ ಸುಗೂರ,ಹನುಮೇಶ ಮರಸಿಂಹಪೇಟ,ಮಂಜುನಾಥ ಸ್ವಾಮಿ ಸೇರಿದಂತೆ ಇತರರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…