ಸುರಪುರ: ನಾನು ಕರ್ತವ್ಯಕ್ಕೆ ಬಂದಾಗಿನಿಂದಲೂ ನೋಡುತ್ತಿದ್ದು ನಗರದಲ್ಲಿ ಬಹುತೇಕ ಶೇ ನೂರರಷ್ಟು ಸಂಚಾರಿ ನಿಯಮಗಳು ಪಾಲನೆಯಾಗುತ್ತಿಲ್ಲ.ಸಂಚಾರಿ ನಿಯಮಗಳಿರುವುದು ನಿಮ್ಮ ಸುರಕ್ಷತೆಗಾಗಿ ಎಂಬುವುದನ್ನು ಮರೆಯಬೇಡಿ ಎಂದು ಪೊಲೀಸ್ ಉಪ ಅಧೀಕ್ಷಕ ವೆಂಕಟೇಶ ಹುಗಿಬಂಡಿ ಮಾತನಾಡಿದರು.
ನಗರದ ಪೊಲೀಸ್ ಠಾಣೆಯಲ್ಲಿ ಆಟೋ,ಜೀಪ್,ಶಾಲಾ ವಾಹನಗಳು ಮತ್ತಿತರೆ ವಾಹನಗಳ ಚಾಲಕರ ಮತ್ತು ಶಾಲಾ ಆಡಳಿತ ಮಂಡಳಿ ಪ್ರತಿನಿಧಿಗಳಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರಿ ನಿಯಮಗಳ ಜಾಗೃತಿ ಕುರಿತಾದ ಕಾರ್ಯಗಾರ ನಡೆಸಿ ಮಾತನಾಡಿ,ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಲ್ಲ,ಮೂರು ಸೀಟು ಹಾಕಿಕೊಂಡು ಗಾಡಿ ಓಡಿಸುವುದು,ಸಂಚಾರಿ ನಿಯಮಗಳನ್ನು ಪಾಲಿಸುವುದಿಲ್ಲ.ಇವೆಲ್ಲವುಗಳಿಗೆ ಇನ್ನು ಮುಂದೆ ಕಡಿವಾಣ ಹಾಕಲಾಗುವುದು.ಹೆಲ್ಮೆಟ್ ಇಲ್ಲದೆ ಗಾಡಿ ಓಡಿಸಿದರೆ,ಮೂರು ಸೀಟು ಹಾಕಿದ್ದರೆ ದಂಡ ವಿಧಿಸಲಾಗುವುದು.ಇನ್ನು ಆಟೋ ಮತ್ತಿತರೆ ಯಾವುದೇ ವಾಹನಗಳ ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಧರಿಸಿರಬೇಕು ಇಲ್ಲವಾದರೆ ಕ್ರಮ ಕೈಗೊಳ್ಳಲಾಗುವುದು.ಟಂ ಟಂ ಆಟೋಗಳಲ್ಲಿ ನಿಯಮ ಮೀರಿ ಜನರು ತುಂಬಿ ಮೇಲೆ ಕೂಡಿಸಿ ಓಡಿಸುವಿರಿ,ಐದು ಹತ್ತು ರೂಪಾಯಿಗಳ ಆಸೆಗಾಗಿ ಜನರ ಪ್ರಾಣ ತಿನ್ನುವಿರಿ ಈ ಮುಂದೆ ನಿಯಮ ಮೀರಿ ಆಟೋಗಳಲ್ಲಿ ಸೀಟು ಹಾಕಿದ್ದರ ದಂಡ ಬೀಳಲಿದೆ.ಶಾಲಾ ವಾಹನಗಳಿಗೆ ಚಾಲಕರನ್ನು ನೇಮಿಸಿಕೊಳ್ಳುವ ಮುನ್ನ ಶಾಲಾ ಆಡಳಿತ ಮಂಡಳಿ ಕನಿಷ್ಟ ಐದು ವರ್ಷ ಅನುಭವವಿರುವ ಚಾಲಕರ ನೇಮಿಸಿಕೊಳ್ಳಿ,ಅವರ ಪೂರ್ವಾಪರ ತಿಳಿದುಕೊಳ್ಳಿ ಎಂದು ತಿಳಿಸಿದರು.
ಡ್ರೈವಿಂಗ್ ಲೈಸೆನ್ಸ್ ಇಲ್ಲದವರಿಗೆ ಶೀಘ್ರದಲ್ಲಿ ಆರ್.ಟಿ.ಒ ಅಧಿಕಾರಿಗಳೊಂದಿಗೆ ಮಾತನಾಡಿ,ಇಲ್ಲಿಯೆ ಲೈಸೆನ್ಸ್ ಕೊಡಿಸುವುದಾಗಿ ತಿಳಿಸಿದರು.ಮಹಾತ್ಮ ಗಾಂಧಿ ವೃತ್ತದಲ್ಲಿ ಯಾವುದೇ ವಾಹನಗಳನ್ನು ನಿಲ್ಲಿಸುವಂತಿಲ್ಲ.ನಿಲ್ಲಿಸಿದರೆ ಅಂತವರ ಮೇಲೆ ಕ್ರಮ ಕೈಗೊಳ್ಳಲಾಗುವುದೆಂದರು.ಕಿರಾಣಿ ಅಂಗಡಿಗಳಿಗೆ ಸರಕು ತರುವ ವಾಹನಗಳು ರಾತ್ರಿ ೧೦ ಗಂಟೆಯಿಂದ ಬೆಳಿಗ್ಗೆ ೮ ಗಂಟೆವರೆಗೆ ತಾವು ತಂದ ಮಾಲನ್ನು ಇಳಿಸಬಹುದು ಎಂದು ತಿಳಿಸಿದರು.
ಆರಕ್ಷಕ ನಿರೀಕ್ಷಕ ಆನಂದರಾವ್ ಮಾತನಾಡಿ,ನಗರದ ಮೂರು ಕಡೆಗಳಲ್ಲಿ ಆಟೋ ನಿಲ್ದಾಣಕ್ಕೆ ಅನುಮತಿ ನೀಡಲಾಗಿದೆ.ಆದರೆ ಆಟೋ ಚಾಲಕರು ನಾಲ್ವಡಿ ರಾಜಾ ವೆಂಕಟಪ್ಪ ಚೌಕ್ ಮತ್ತು ಅಂಬೇಡ್ಕರ ವೃತ್ತದಲ್ಲಿ ಮನಸ್ಸಿಗೆ ಬಂದಂತೆ ನಿಲ್ಲಿಸುವಿರಿ.ವೃತ್ತಗಳಿಂದ ದೂರದಲ್ಲಿ ಆಟೋಗಳನ್ನು ನಿಲ್ಲಿಸಿ.ಬಸ್ ನಿಲ್ದಾಣದ ಒಳಗಡೆ ಯಾವುದೆ ಖಾಸಗಿ ವಾಹನಗಳು ಹೋಗುವಂತಿಲ್ಲ.ಒಂದು ವೇಳೆ ಯಾವುದೆ ವಾಹನ ಹೋದರೆ ದಂಡ ಬೀಳಲಿದೆ ಎಂದು ಎಚ್ಚರಿಸಿದರು.ನಿಮ್ಮ ವಾಹನಗಳಲ್ಲಿ ಎಲ್ಲಾ ದಾಖಲಾತಿಗಳನ್ನು ಕಡ್ಡಾಯವಾಗಿ ಇಟ್ಟುಕೊಳ್ಳಿ,ಕಡ್ಡಾಯವಾಗಿ ವಾಹನಗಳ ಪರ್ಮಿಟ್ ಮಾಡಿಸಿ ಹಾಗು ಎಲ್ಲಾ ವಾಹನಗಳಿಗೆ ವಿಮೆಯನ್ನು ಮಾಡಿಸುವಂತೆ,ವಿಮೆ ಮಾಡಿಸದ ವಾಹನಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಇನ್ನು ಟಂ ಟಂ ಸೇರಿದಂತೆ ಅನೇಕ ವಾಹನಗಳಲ್ಲಿ ಸೌಂಡ್ ಸಿಸ್ಟ್‌ಮ್ ಹಚ್ಚಿರುವಿರಿ ಇದರಿಂದ ಇತರೆ ವಾಹನ ಸವಾರರಿಗೆ ತೊಂದರೆಯಾಗಲಿದೆ.ಸೌಂಡ್ ಸಿಸ್ಟ್‌ಮ್ ಕಂಡರೆ ಕ್ರಮ ಗ್ಯಾರಂಟಿ ಎಂದರು.ಶಾಲಾ ವಾಹನಗಳಲ್ಲಿ ನಿಗದಿಪಡಿಸಿದ ಸೀಟುಗಳಿಗಿಂತ ಹೆಚ್ಚಿನ ಸೀಟುಗಳು ಹಾಕದಂತೆ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಕ್ಷೆತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಆಗಮಿಸಿದ್ದ ನಿಂಗಪ್ಪ ಪೂಜಾರಿ ಹಾಗು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಂಚಾರಿ ನಿಯಂತ್ರಕ ದ್ಯಾವಪ್ಪ ಮಾತನಾಡಿದರು.ನಂತರ ಆರಕ್ಷಕ ಉಪ ನಿರೀಕ್ಷಕ ಚೇತನ್ ಸಂಚಾರಿ ನಿಯಮಗಳ ಉಲ್ಲಂಘನೆಯಿಂದ ವಿಧಿಸುವ ದಂಡದ ಮೊತ್ತದ ಕುರಿತು ಮಾಹಿತಿ ನೀಡಿದರು.ವೇದಿಕೆ ಮೇಲೆ ಪಿಎಸ್‌ಐ ಶರಣಪ್ಪ ಇದ್ದರು.ಕಾರ್ಯಕ್ರಮವನ್ನು ಪೇದೆ ಚಂದ್ರಶೇಖರ ನಿರೂಪಿಸಿ ವಂದಿಸಿದರು.ಅನೇಕ ಜನ ವಾಹನ ಮತ್ತು ಆಟೋ ಚಾಲಕರು ಮತ್ತು ಮಾಳಪ್ಪ ಕಿರದಳ್ಳಿ,ಶರಣಪ್ಪ ತಳವಾರಗೇರಾ ಸೇರಿ ಇತರೆ ಸಾರ್ವಜನಿಕರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…