ಆಳಂದ; ತಾಲೂಕಿನ ಕಡಗಂಚಿ ಗ್ರಾಮದ ಭೀಮ ನಗರದಲ್ಲಿನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಕಲಿಕಾ ಮೇಳವನ್ನು ಗ್ರಾಮ ಪಂಚಾಯತ ಅಧ್ಯಕ್ಷೆ ರುಕ್ಮಿಣಿ ವಿಠ್ಠಲ್ ಉದ್ಘಾಸಿದರು.
ಈ ಸಂದರ್ಭದಲ್ಲಿ ಕಲಿಕಾಮೇಳದ ಉದ್ದೇಶದ ಕುರಿತು ಶಿಕ್ಷಕಿ ವಸುಧಾ ಮಾತನಾಡಿ, ಮಕ್ಕಳ ಆತ್ಮಸ್ಥೈರ್ಯ , ಕೌಶಲ್ಯ ಮತ್ತು ಸೃಜನಾತ್ಮಕತೆಗಳನ್ನು ಗಳಿಸುವಲ್ಲಿ ಕಲಿಕಾಮೇಳವು ಉತ್ತೇಜನ ನೀಡುತ್ತದೆ ಮತ್ತು ಈ ಮೇಳದಿಂದ ವಿದ್ಯಾರ್ಥಿಗಳ ಜ್ಞಾಪಕ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆ ಗ್ರಾಮ ಪಂಚಾಯತ ಉಪಾಧ್ಯಕ್ಷ ವಿಜಯಕುಮಾರ್ ಮತ್ತು ಮಕ್ಕಳು ತಯಾರಿಸಿದ ವಿಶೇಷ ದಿನದರ್ಶಿಕೆಯನ್ನು ಎಸ್ ಡಿ ಎಂ ಸಿ ದತ್ತರಾಜ್ ಬೊಮ್ಮನಳ್ಳಿ ಬಿಡುಗಡೆಗೊಳಿಸಿದರು.
ಕಲಿಕಾ ಮೇಳವು ಮಕ್ಕಳ ಕಲಿಕಾಂಶದಲ್ಲಿ ಪ್ರಭುತ್ವತೆ ಸಾಧಿಸಲು, ಶಿಕ್ಷಕರಿಗೆ ಉತ್ತಮ ವೇದಿಕೆ, ಪಾಲಕರಿಗೆ ಶಿಕ್ಷಣದ ಕುರಿತು ಒಲವು ಮೂಡಿಸುವುದು, ಮಕ್ಕಳ ಅಭಿವ್ಯಕ್ತಿ ಕೌಶಲ್ಯ ವೃದ್ಧಿಸುವುದು ಈ ಮೇಳದ ಉದ್ದೇಶವಾಗಿದೆ. ಈ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಸಹಕಾರ ನೀಡಿದರು.
ಇದೇ ಸಂದರ್ಭದಲ್ಲಿ ಮೇಳದ ನಿರ್ದೇಶಕಿ ನೀಲಮ್ಮ, ಸಹ ಶಿಕ್ಷಕ ಪ್ರಕಾಶ, ಶಿಕ್ಷಕಿ ಸರಸ್ವತಿ, ದಾನಮ್ಮ ಉಪಸ್ಥಿತರಿದ್ದರು
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…