ಬಿಸಿ ಬಿಸಿ ಸುದ್ದಿ

ನಾಳೆ ಜ. 31, ಫೆ. ೧ರಂದು ವಿವಿಧ ಬೇಡಿಕೆಗಳಿಗಾಗಿ ಬ್ಯಾಂಕ್ ನೌಕರರಿಂದ ಮುಷ್ಕರ

ಕಲಬುರಗಿ: ವಿವಿಧ ಬೇಡಿಕೆಗಳಿಗೆ ಅನೇಕ ಬಾರಿ ಕೇಂದ್ರ ಸರಕಾರಕ್ಕೆ ಹಾಗೂ ಆರ್.ಬಿ.ಐಗೆ ಮನವಿ ಸಲ್ಲಿಸಲಾಗಿದೆ. ಆದರೆ ನಮ್ಮ ಮನವಿಗೆ ಸರಿಯಾದ ಸ್ಪಂದನೆ ಇಲ್ಲ. ಅದಕ್ಕಾಗಿ ಮೊದಲ ಹಂತವಾಗಿ ನಾಳೆ(ಜ.೩೧) ಹಾಗೂ ಫೆ. ೧ ರಂದು ಕೆಲಸ ಸ್ಥಗಿತ ಮಾಡಿ ಮುಷ್ಕರ ನಡೆಸಲಾಗುವದು ಎಂದು ಸಂಯುಕ್ತ ಬ್ಯಾಂಕ್ ಸಂಘಗಳು ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಮೋಹನ ತಿಳಿಸಿದರು.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬ್ಯಾಂಕ್‌ಗಳ ವಿಲಿನದಿಂದಾಗಿ ವೇತನಗಳಲ್ಲಿ ತಾರತಮ್ಯಗಳು ಕಂಡು ಬಂದಿವೆ. ಅನೇಕರಿಗೆ ವೇತನ ಪರಿಷ್ಕರಣೆ ಯಾಗಿಲ್ಲ. ಸದ್ಯದ ಮಾರುಕಟ್ಟೆಯ ಅನುಸಾರವಾಗಿ ಎನ್ನಾ ನೌಕರರ ವೇತನ ಪರಿಷ್ಕರಣೆಯಾಗಬೇಕು. ಕಳೆದ ಎರಡು ವರ್ಷದಿಂದ ಆಗಿಲ್ಲ. ಕೇಂದ್ರ ಸರಕಾರ ಹೆಚ್ಚಳ ಮಾಡುತ್ತೇವೆ ಎಂದು ಕೇವಲ ಭರವಸೆ ಮಾತ್ರ ನೀಡುತ್ತಿದೆ ಎಂದರು.

ವಾರದಲ್ಲಿ ೫ ದಿನ ಮಾತ್ರ ಕೆಲಸ, ವಿಶೇಷ ಭತ್ಯೆ ಮತ್ತು ಮೂಲ ವೇತನ ಹೆಚ್ಚಳ, ಹೊಸ ಪಿಂಚಣಿ ರದ್ದತಿ, ಹಿಂದಿನ ಪಿಂಚಣಿ ಮುಂದುವರೆಕೆ, ಸಬ್ಬಂದಿ ಕಲ್ಯಾಣ ನಿಧಿ ವಿಸ್ತರಣೆ, ಊಟದ ಸಮಯ, ವ್ಯವಹಾರದ ಸಮಯದಲ್ಲಿ ಕಾಲಾವಕಾಶ ಸೇರಿದಂತೆ ಅನೇಕ ವಿಷಯಗಳ ಕುರಿತು ಮುಷ್ಕರ ನಡೆಯಲಿದೆ.  ಮೊದಲ ಹಂತವಾಗಿ ಮಷ್ಕರವು ನಾಳೆ ನಡೆಯಲಿದೆ. ಎರಡನೇ ಹಂತವಾಗಿ. ಮಾರ್ಚ ೧೧, ೧೨, ಮತ್ತು ೧೩ ರಂದು ಆದರೂ ಸರಕಾರ ಯಾವುದೇ ಗಮನ ನೀಡದಿದ್ದರೇ. ಎಪ್ರಿಲ್ ೧ ರಂದು ಅನಿರ್ಧೀಷ್ಟಾವಧಿ ಮುಷ್ಕರ ನಡೆಯುತ್ತದೆ ಎಂದು ಹೇಳಿದರು.

ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ನಮಗೆ ಅರ್ಥವಿದೆ. ಆದರೆ ಸಾರ್ವಜನಿಕರ ಸಹಕಾರ ಅಗತ್ಯವಿದೆ. ಅವರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೊಷ್ಠಿಯಲ್ಲಿ ಮೊಹ್ಮದ ಖದೀರ, ರವಿಗೌಡ, ನವೀನ ಕಾಗಲಕರ, ಶ್ರೀಧರ, ನಾರಾಯಣ ಗೋಗಿ ಹಾಗೂ ಇತರರು ಉಪಸ್ಥಿತರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

2 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

2 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

2 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

18 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

21 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago