ಬಿಸಿ ಬಿಸಿ ಸುದ್ದಿ

ಬಜೆಟ್ 2020 : ಕೇವಲ ನಾಮಕಾವಸ್ಥೆಯ ಬಜೆಟ್: ಮಾಜಿ ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಇಂದು ಕೇಂದ್ರದ ಎನ್.ಡಿ.ಎ ನೇತೃತ್ವದ ಬಿಜೆಪಿ ಸರಕಾರ 2ನೇ ಬಾರಿ ಅಧಿಕಾರಿಕ್ಕೆ ಬಂದ ಮೊದಲನೆ ಬಜೆಟೆ ಬಗ್ಗೆ ಚಿತ್ತಾಪುರ ಕ್ಷೇತ್ರದ ಶಾಸಕ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿ ಕೇವಲ ನಾಮಕಾವಸ್ಥೆ( ಹೆಸರಿಗೆ ಮಾತ್ರ) ಬಜೆಟ್ ಮಂಡನೆ ಎಂದು ತಮ್ಮ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ.

ಅವರ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಅಂವಶ ಮತ್ತು ಬರ ಈ ಕೇಳಗಿನಂತಿದೆ.

ಬಜೆಟ್ 2020 : ಕೇವಲ ನಾಮಕಾವಸ್ಥೆಯ ಬಜೆಟ್

  • ಹಿಂದುಳಿದವರು, ಶೋಷಿತರು, ಕಾರ್ಮಿಕರು ಹಾಗೂ ಗ್ರಾಮೀಣ ಭಾಗದ ಜನತೆಯ ಜೀವನಮಟ್ಟ ಸುಧಾರಿಸುವ ಯಾವುದೇ ಅಂಶಗಳು, ದೂರದೃಷ್ಟಿಯ ಯೋಜನೆಗಳು ಈ ಬಾರಿಯ ಬಜೆಟ್‌ನಲ್ಲಿ ಇಲ್ಲ.
  • ನಿರುದ್ಯೋಗ ಸಮಸ್ಯೆಗೆ ಪರಿಹಾರ ಒದಗಿಸುವ ಯೋಜನೆಗಳಿಲ್ಲ.
    ನವೋದ್ಯಮಗಳಿಗೆ ಪ್ರೋತ್ಸಾಹ ನೀಡುವ ಬಗ್ಗೆ ಸರ್ಕಾರವು ಗಂಭೀರ ಚಿಂತನೆ ನಡೆಸಿದಂತಿಲ್ಲ
  • 371ಜೆ ಮೂಲಕ ಸಾಂವಿಧಾನಕವಾಗಿ ವಿಶೇಷ ಸ್ಥಾನಮಾನ ಪಡೆದಿರುವ ಕಲ್ಯಾಣ ಕರ್ನಾಟಕ ಭಾಗವನ್ನು ಮೋದಿ ಸರ್ಕಾರ ಮತ್ತೊಮ್ಮೆ ನಿರ್ಲಕ್ಷಿಸಿದೆ.
    ಈ ಭಾಗಕ್ಕೆ ರೈಲ್ವೆ, ಬಂಡವಾಳ ಹೂಡಿಕೆ ಹಾಗೂ ವಿಶೇಷ ಅನುದಾನ ವಿಚಾರಗಳಲ್ಲೂ ಮೋಸ ಮುಂದುವರೆದಿದೆ.

2014ರಲ್ಲೇ ಘೋಷಣೆಯಾಗಿರುವ ಕಲಬುರಗಿ ಪ್ರತ್ಯೇಕ ರೈಲ್ವೆ ವಿಭಾಗದ ಅನುಷ್ಠಾನದ ಬಗ್ಗೆ ಈ ಬಾರಿಯ ಬಜೆಟ್‌ನಲ್ಲೂ ಸೊಲ್ಲೆತ್ತಿಲ್ಲ.

  • ಅಂದಾಜು 18,600 ಕೋಟಿ ವೆಚ್ಚದ ಬೆಂಗಳೂರು ಸಬ್ ಅರ್ಬನ್ ರೈಲ್ವೆ ಕಾಮಗಾರಿಗೆ ಕೇವಲ 20% ಅನುದಾನ ನೀಡಲಾಗಿದೆ. ರಾಜ್ಯಗಳಿಗೆ ಕೇಂದ್ರವೇ ಜಿಎಸ್ ಟಿ ಬಾಕಿ ಹಣವನ್ನೇ ಎರಡು ಹಂತದಲ್ಲಿ ಮರು ಪಾವತಿ ಮಾಡುತ್ತೇವೆ ಎನ್ನುವಾಗ, ಸರಿಸುಮಾರು ₹15 ಸಾವಿರ ಕೋಟಿ ಹಣವನ್ನ ರಾಜ್ಯ ಎಲ್ಲಿಂದ ತರಬೇಕು?

ಕೇಂದ್ರವು ರಾಜ್ಯದ ಪಾಲಿನ ಜಿಎಸ್‌ಟಿ ಹಾಗೂ ನರೇಗಾ ಅನುದಾನವನ್ನೂ ನೀಡದ ಕಾರಣ, ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿ‌ ಸಿಲುಕಿರುವ ರಾಜ್ಯ ಬಿಜೆಪಿ ಸರ್ಕಾರವು, ಇಷ್ಟೊಂದು ಮೊತ್ತವನ್ನು ಹೊಂದಿಸುವುದು ಎಲ್ಲಿಂದ?

ಅಷ್ಟಕ್ಕೂ 25 ಸಂಸದರನ್ನು ನೀಡಿದ ಕರ್ನಾಟಕಕ್ಕೆ ಕೇಂದ್ರ ಬಿಜೆಪಿ ಸರ್ಕಾರದಿಂದ ದಕ್ಕಿದ್ದೇನು..?

emedialine

Recent Posts

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

15 mins ago

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…

2 hours ago

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

15 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

15 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

17 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

17 hours ago